ದೇಶದ ಐದುಟ್ರಿಲಿಯನ್ ಡಾಲರ್ ಆರ್ಥಿಕತೆಯ ಲಕ್ಷ್ಯಕ್ಕೆ ಜತೆಗೂಡಲು ಕರ್ನಾಟಕವೂ ಉತ್ಸುಕವಾಗಿದೆ. ಒಟ್ಟಾರೆ ಗುರಿಯಲ್ಲಿ ಒಂದು ಟ್ರಿಲಿಯನ್ ಪಾಲುದಾರಿಕೆಗೆ ಅಗತ್ಯವಾದ ಉಪಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಆರ್ಥಿಕತೆಯ ಅದಮ್ಯ ಉತ್ಸಾಹದ ಧಾರೆಯಲ್ಲಿ ಉದ್ಯಮದ ಬೆಳವಣಿಗೆ ಸೇರಿದೆ. ಗಮ್ಯ ತಲುಪುವಲ್ಲಿ ತನ್ನದೇ ಆದ ಕೊಡುಗೆ ನೀಡುವ ವಿಪುಲ ಅವಕಾಶಗಳನ್ನು ಹೊಂದಿದೆ. ಕೈಗಾರಿಕೆಗಳ ಸಾಮರ್ಥ್ಯದ ವೃದ್ಧಿ, ಬೆಳವಣಿಗೆ ಬೇಕಾದ ಅಗತ್ಯ ಸವಲತ್ತು, ಡಿಜಿಟಲ್ ಮೂಲ ಸವಲತ್ತುಗಳನ್ನು ಸೃಷ್ಟಿಸುವುದು ಮುಖ್ಯ ಎನ್ನುತ್ತಾರೆ ಉದ್ಯಮ-ವಹಿವಾಟು ಕ್ಷೇತ್ರದ ಪರಿಣತರು.
ಸಾಮರ್ಥ್ಯ ಸಂವರ್ಧನೆ:ರಾಜ್ಯದ ಸೇವಾ, ವಿದ್ಯುತ್, ವಾಣಿಜ್ಯ, ವ್ಯಾಪಾರ, ಉತ್ಪಾದನೆ ವಲಯ ಸೇರಿ ಒಟ್ಟು 40.39 ಲಕ್ಷಕ್ಕೂ ಅಧಿಕ ಕೈಗಾರಿಕಾ ಘಟಕಗಳಿವೆ. ರಾಜ್ಯಾದಯಕ್ಕೆ ಶೇ.20ರಷ್ಟು ಪಾಲು ನೀಡುತ್ತಿದೆ. ಅಲ್ಲದೆ, 7.38 ಲಕ್ಷ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಕಳೆದ ವರ್ಷ (2022-23) ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ 39,361 ದಶಲಕ್ಷ ಅಮೆರಿಕನ್ ಡಾಲರ್ (ಶೇ.23) ಪಾಲು ಪಡೆದು ಕರ್ನಾಟಕ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ. ರಾಜ್ಯದ ಸಾಮರ್ಥ್ಯ ಸಂವರ್ಧನೆಗೆ ವಲಯಗಳನ್ನು ಗುರುತಿಸಿದೆ. ಹುಬ್ಬಳ್ಳಿಯಲ್ಲಿ ಎಫ್​ಎಂಸಿಜಿ, ಬೀದರ್​ನಲ್ಲಿ ಪೆಟ್ರೋಕೆಮಿಕಲ್ಸ್, ಕಲಬುರಗಿಯಲ್ಲಿ ತೊಗರಿ, ಜವಳಿ, ರಾಯಚೂರು ಜವಳಿ, ಆಹಾರ ಪಾರ್ಕ್, ಕೋಲಾರ ಭಾಗದಲ್ಲಿ ತೋಟಗಾರಿಕೆ ಸಂಸ್ಕರಣೆ, ಬಳ್ಳಾರಿ ಜೀನ್ಸ್ ಪಾರ್ಕ್, ಬೆಂಗಳೂರು ಗ್ರಾಮಾಂತರ ರೇಷ್ಮೆ ಪಾರ್ಕ್, ಮಂಗಳೂರು ಗ್ರೀನ್ ಹೈಡ್ರೋಜನ್, ಸೋಲಾರ್ ಪಾರ್ಕ್ ಹೀಗೆ ಹತ್ತಾರು ವಲಯಗಳನ್ನು ಗುರುತಿಸಿದೆ.
ಆಶಾದಾಯಕ ಲಕ್ಷಣರಾಜ್ಯದ ಒಟ್ಟು ಭೂಮಿಯಲ್ಲಿ ಶೇಕಡ 2ರಷ್ಟು ಮಾತ್ರ ಕೈಗಾರಿಕೆಗಳಿಗೆ ಬಳಕೆಯಾಗಿದೆ. ಇದರಿಂದಾಗಿ ಹೆಚ್ಚೆಚ್ಚು ಕೈಗಾರಿಕೆಗಳ ಬಂದರೆ ಸಾಗುವಳಿ ಜಮೀನು ಇಳಿಮುಖವಾಗುತ್ತದೆ ಎಂಬ ಆತಂಕ ಸಲ್ಲದು ಎನ್ನುವುದು ಕೃಷಿ-ಆರ್ಥಿಕ ತಜ್ಞರ ಅಭಿಮತವಾಗಿದೆ.
ಕರ್ನಾಟಕದಲ್ಲಿ ಉದ್ಯಮ-ವಹಿವಾಟು ಬೆಳವಣಿಗೆಗೆ ವಿಪುಲ ಅವಕಾಶ ಗಳಿವೆ. ಪೂರಕವಾಗಿ ಆಯಾ ಪ್ರದೇಶಕ್ಕೆ ಬೇಕಾದ ವಲಯಗಳನ್ನು ಸರ್ಕಾರ ಗುರುತಿಸಿದೆ. ನೀತಿ, ಮಾರ್ಗಪಥ ಸ್ಪಷ್ಟವಾಗಿದ್ದರೂ ಪರಿಣಾಮ ಗಳ ಅಧ್ಯಯನ, ಪರಿಣಾಮಕಾರಿ ಅನುಷ್ಠಾನದ ಕೊರತೆಯಿದೆ. ಉದ್ಯಮಿಗಳೊಂದಿಗೆ ನಿರಂತರ ಸಂವಾದ, ಸೃಜಿಸಿದ ಕೈಗಾರಿಕಾ ಸವಲತ್ತುಗಳಿಗೆ ಬಲ, ನ್ಯೂನತೆ ಹೋಗಲಾಡಿಸಿದರೆ ಗಮ್ಯದತ್ತ ದೃಢಹೆಜ್ಜೆಯಿಡಬಹುದು.
| ರಮೇಶಚಂದ್ರ ಲಾಹೋಟಿ ಎಫ್​ಕೆಸಿಸಿಐ ಅಧ್ಯಕ್ಷ
ಜಾಗತಿಕವಾಗಿ 5ನೇ ದೊಡ್ಡ ಆರ್ಥಿಕತೆಎಲ್ಲ ರಂಗಗಳಲ್ಲೂ ಅಭಿವೃದ್ಧಿಯ ಹೊಸ ಮೈಲಿಗಲ್ಲು ಸೃಷ್ಟಿಸುತ್ತಿರುವ ಭಾರತವು ಆರ್ಥಿಕತೆ ವಿಷಯದಲ್ಲೂ ಜಗದ ಗಮನ ಸೆಳೆದಿದೆ. ಜಾಗತಿಕವಾಗಿ 5ನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತ, ಇನ್ನೂ ಎತ್ತರದ ಸ್ಥಾನಕ್ಕೇರುವ ಗುರಿ ಇರಿಸಿಕೊಂಡಿದೆ. ಅದರಲ್ಲೂ, ಕರೊನಾ ಸಂಕಷ್ಟವನ್ನು ಪರಾಭವಗೊಳಿಸಿ, ಆರ್ಥಿಕ ಮುನ್ನಡೆಯನ್ನು ಕಾಯ್ದುಕೊಂಡಿರುವ ಭಾರತದ ಸಾಧನೆ ಅಭಿವೃದ್ಧಿ ಹೊಂದಿದ ದೇಶಗಳನ್ನೂ ನಿಬ್ಬೆರಗುಗೊಳಿಸಿದೆ.
2013-14ರಲ್ಲಿ ಭಾರತದ ನಿವ್ವಳ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) 1.86 ಟ್ರಿಲಿಯನ್ ಡಾಲರ್​ಗಳಷ್ಟಿತ್ತು. 2018-19ರಲ್ಲಿ 2.83 ಟ್ರಿಲಿಯನ್ ಡಾಲರ್​ಗಳಾಯಿತು. ಅಂದರೆ ಐದೇ ವರ್ಷಗಳಲ್ಲಿ ಸರಿಸುಮಾರು ಒಂದು ಟ್ರಿಲಿಯನ್ ಡಾಲರ್​ಗಳ ವೃದ್ಧಿ! ಇದು ಆಶಾಭಾವನೆಯನ್ನು ವೃದ್ಧಿಸಿದ್ದು, 2025ರ ಹೊತ್ತಿಗೆ ಭಾರತವನ್ನು ಐದು ಟ್ರಿಲಿಯನ್ ಡಾಲರ್​ಗಳ ಅರ್ಥವ್ಯವಸ್ಥೆಯನ್ನಾಗಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು 2030ರ ವೇಳೆಗೆ 7.3 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
2021-22ರಲ್ಲಿ 3.15 ಟ್ರಿಲಿಯನ್ ಡಾಲರ್ ಇದ್ದ ಜಿಡಿಪಿ, 2022-23ರಲ್ಲಿ ಇನ್ನಷ್ಟು ಮೇಲೇರಿ 3.39 ಟ್ರಿಲಿಯನ್ ಡಾಲರ್​ಗಳಾಯಿತು. 2023ರ ನವೆಂಬರ್​ನಲ್ಲಿ ದೇಶದ ಜಿಡಿಪಿ 3.72 ಟ್ರಿಲಿಯನ್ ಡಾಲರ್​ಗಳನ್ನು ದಾಟಿದೆ. ಅಂದರೆ ಕೇವಲ ಒಂಬತ್ತು ವರ್ಷಗಳಲ್ಲಿ ಭಾರತದ ಜಿಡಿಪಿ ದುಪ್ಪಟ್ಟಾಗಿದೆ! 4.07 ಟ್ರಿಲಿಯನ್ ಡಾಲರ್ ಜಿಡಿಪಿಯ ಜರ್ಮನಿ ಮತ್ತು 4.23 ಟ್ರಿಲಿಯನ್ ಡಾಲರ್ ಜಿಡಿಪಿ ಇರುವ ಜಪಾನ್ ಅನ್ನು ಹಿಂದೆ ಹಾಕಿ ಭಾರತ ಜಾಗತಿಕವಾಗಿ ಮೂರನೆಯ ಅತಿದೊಡ್ಡ ಅರ್ಥವ್ಯವಸ್ಥೆಯಾಗುವ ಆಶಾವಾದ ಮೂಡಿಸಿದೆ. ವೇಗವಾಗಿ ಬೆಳೆಯುತ್ತಿರುವ ದೇಶೀಯ ಗ್ರಾಹಕ ಮಾರುಕಟ್ಟೆ ಮತ್ತು ದೊಡ್ಡ ಕೈಗಾರಿಕಾ ವಲಯವು ಭಾರತವನ್ನು ಪ್ರಮುಖ ಹೂಡಿಕೆಯ ತಾಣವನ್ನಾಗಿ ಮಾಡಿದೆ. ಉತ್ಪಾದನೆ, ಮೂಲಸೌಕರ್ಯ ಮತ್ತು ಸೇವೆಗಳು ಸೇರಿ ಹಲವು ವಲಯಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆ ಭಾರಿ ಏರಿಕೆ ಕಂಡಿದೆ.
ಕಣ್ಣಿಗೊಂದು ಸವಾಲ್​: ಬಾತುಕೋಳಿ ಪತ್ತೆಹಚ್ಚಲು ಶೇ. 98 ಮಂದಿ ಫೇಲ್​, ಸಾಧ್ಯವಾದ್ರೆ ನೀವು ಪತ್ತೆ ಹಚ್ಚಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 5 =
Remember me
