|ಮೃತ್ಯುಂಜಯ ಕಪಗಲ್ಬೆಂಗಳೂರು
ಸತತ ನೆರೆ, ಅತಿವೃಷ್ಟಿ, ಜಾಗತಿಕ ಸಾಂಕ್ರಾಮಿಕ ಪಿಡುಗು ಕರೊನಾ ಅಪ್ಪಳಿಸಿದ್ದರಿಂದ ರಾಷ್ಟ್ರದ ರೀತಿಯಲ್ಲಿ ರಾಜ್ಯದ ಆರ್ಥಿಕತೆಯೂ ತಲ್ಲಣಿಸಿತ್ತು. ಬದಲಾದ ಪರಿಸ್ಥಿತಿಗೆ ಆರ್ಥಿಕ ಚಟುವಟಿಕೆಗಳು ಬಹು ಬೇಗನೆ ಹೊಂದಿಕೊಳ್ಳ ತೊಡಗಿವೆ. ನಿಧಾನವಾಗಿ ಆರ್ಥಿಕತೆ ಚೇತರಿಕೆಯತ್ತ ಸಾಗುತ್ತಿದೆ. ಕಳೆದ ಆರು ತಿಂಗಳ ಆದಾಯದ ಒಳಹರಿವು ಆಶಾದಾಯಕವಾಗಿದ್ದು, ಬೆಳವಣಿಗೆಗೆ ಪುರಾವೆಯಾಗಿದೆ.
ನೈಸರ್ಗಿಕ ವಿಕೋಪ, ಕರೊನಾ ಪೂರ್ವ ಆರ್ಥಿಕ ವರ್ಷದ (2018-19 ಏಪ್ರಿಲ್ ನಿಂದ ಡಿಸೆಂಬರ್) ಮೊದಲ ಆರು ತಿಂಗಳಲ್ಲಿ 1,10,067 ಕೋಟಿ ರೂ. ರಾಜಸ್ವ ಸ್ವೀಕೃತಿಯಾಗಿತ್ತು. ನಂತರದ ಆರ್ಥಿಕ ವರ್ಷದ (2020-21 ಏಪ್ರಿಲ್ ನಿಂದ ಡಿಸೆಂಬರ್) ಮೊದಲ ಆರು ತಿಂಗಳಲ್ಲಿ, 1,29,490 ಕೋಟಿ ರೂ. ರಾಜಸ್ವ ಬೊಕ್ಕಸಕ್ಕೆ ಜಮೆಯಾಗಿದೆ. ಈ ತುಲನಾತ್ಮಕ ಅಂಕಿಅಂಶಗಳೇ 19,000 ಕೋಟಿ ರೂ.ಗಳ ಆದಾಯ ಸಂಗ್ರಹ ಜಿಗಿತ ಕಂಡಿರುವುದನ್ನು ಸಾಬೀತುಪಡಿಸಿದೆ. ಈ ವರ್ಷದ ಮುಂಗಡಪತ್ರದಲ್ಲಿ 1,72,271 ಕೋಟಿ ರೂ. ರಾಜಸ್ವ ಸ್ವೀಕೃತಿ ಗುರಿಯಿದೆ. ಆರ್ಥಿಕ ವರ್ಷ ಮುಗಿಯಲು ಮೂರು ತಿಂಗಳಿರುವಾಗ 1,29,490 ಕೋಟಿ ರೂ. ಸಂಗ್ರಹವಾಗಿದ್ದು, ಗುರಿ ಮೀರುವ ಲೆಕ್ಕಾಚಾರ ಆರ್ಥಿಕ ಇಲಾಖೆಯದು.
ಹೊಸ ಯೋಜನೆಗಳಿಗೆ ಟಾನಿಕ್:ಸುಧಾರಿತ ಆದಾಯ ಗಳಿಕೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ ಹೊಸ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳಿಗೆ ಟಾನಿಕ್ ನೀಡಿದಂತಾಗಿದೆ. ಅಧಿಕಾರವಹಿಸಿಕೊಂಡ ಬಳಿಕ ಏಕವ್ಯಕ್ತಿಯಾಗಿ ನಡೆಸಿದ ಮೊದಲ ಸಚಿವ ಸಂಪುಟ ಸಭೆಯಿಂದ ಹಿಡಿದು, ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನಮಂಡಲ ಅಧಿವೇಶನದ ತನಕ ಘೋಷಿಸಿದ ಎಲ್ಲ ಕಾರ್ಯಕ್ರಮಗಳಿಗೂ ಶುಕ್ರದೆಸೆ ತಿರುಗಿದ್ದು, ತ್ವರಿತ ಅನುಷ್ಠಾನದ ಹೆಗ್ಗಳಿಕೆಗೆ ಪಾತ್ರವಾಗಿವೆ. ಸಾಮಾಜಿಕ ಭದ್ರತೆ, ರೈತರು, ದುರ್ಬಲರು, ಮಹಿಳೆಯರು, ಶೋಷಿತರು, ನೀರಾವರಿ, ಪ್ರಾದೇಶಿಕ ಅಸಮಾನತೆ, ಉದ್ಯಮ-ವಹಿವಾಟು ಕ್ಷೇತ್ರಗಳನ್ನು ರ್ಸ³ಸಿದ ಯೋಜನೆಗಳ ಜಾರಿ ವೇಗವಾಗಿದ್ದು, ಬಜೆಟ್​ನಲ್ಲಿ ಪ್ರಸ್ತಾಪಿಸಿದ ಯೋಜನೆಗಳಿಗಿಂತ ಮುಂಚೂಣಿಯಲ್ಲಿವೆ.
ವೃದ್ಧಾಪ್ಯ 1,000 ರಿಂದ 1,200, ವಿಧವಾ/ಅಂಗವಿಕಲ 600 ರಿಂದ 800 ಮತ್ತು ಶೇ.75ಕ್ಕಿಂತ ಅಂಗವಿಕಲತೆಗೆ ಮಾಸಾಶನ 1,400 ರಿಂದ 2,000 ರೂ.ಗೆ ಹೆಚ್ಚಿಸಲಾಗಿದೆ. 58.12 ಲಕ್ಷ ಫಲಾನುಭವಿಗಳಿಗೆ 863 ಕೋಟಿ ರೂ. ಹೆಚ್ಚುವರಿ ವೆಚ್ಚ ಭರಿಸಲಾಗಿದೆ. ವಸತಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಲಕ್ಷ, ನಗರ-ಪಟ್ಟಣಗಳಲ್ಲಿ ಒಂದು ಲಕ್ಷ ಮನೆಗಳ ನಿರ್ವಿುಸುವುದಾಗಿ ಪ್ರಕಟಿಸಲಾಗಿದ್ದು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೊಸದಾಗಿ ಹಾವೇರಿ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆಗೆ ನಿರ್ಧರಿಸಿ, ಆದೇಶವನ್ನೂ ಹೊರಡಿಸಲಾಗಿದೆ. ಜನಪ್ರಿಯ ಕಾರ್ಯಕ್ರಮಗಳಿಗೆ ವ್ಯಯಿಸಲಿರುವ ಮೊತ್ತ ಖರ್ಚಲ್ಲ, ಹೂಡಿಕೆ ಎಂದು ಮುಖ್ಯಮಂತ್ರಿ ವ್ಯಾಖ್ಯಾನಿಸಿರುವ ಕಾರಣ ಈ ಬಾರಿ ಬಜೆಟ್​ನಲ್ಲಿ ‘ಜನಪ್ರಿಯ‘ ಕಾರ್ಯಕ್ರಮಗಳು ಹೆಚ್ಚಿರಲಿವೆ ಎಂಬ ನಿರೀಕ್ಷೆ ಹುಟ್ಟಿಹಾಕಿದೆ.
ಸಮಾಧಾನಕರ ಬೆಳವಣಿಗೆ:ಒಮಿಕ್ರಾನ್ ವೈರಾಣು ವೇಗವಾಗಿ ಹರಡಿದರೂ ಸೋಂಕಿನ ಸ್ವರೂಪ ಸೌಮ್ಯವಾಗಿತ್ತು. ಮೂರನೇ ಅಲೆ ಬೇಗನೆ ನೇಪಥ್ಯಕ್ಕೆ ಸರಿದ ಕಾರಣ ವಾಣಿಜ್ಯ-ವ್ಯಾಪಾರ, ಉದ್ಯಮದ ವ್ಯವಹಾರ ಅಡೆ-ತಡೆ ಉಂಟಾಗಲಿಲ್ಲ. ಆರ್ಥಿಕತೆಯಲ್ಲಿ ಸಮಾಧಾನಕರ ಬೆಳವಣಿಗೆಯಾಗಿದ್ದರೂ ಋಣಭಾರ ತಪ್ಪಿಸಲಾಗಿಲ್ಲ. ಬಜೆಟ್ ಭರವಸೆಗಳು, ತುರ್ತು ಅಗತ್ಯದ ಕೆಲಸ-ಕಾರ್ಯ, ವೇತನ ಇನ್ನಿತರ ಬದ್ಧತಾ ವೆಚ್ಚ ಸರಿದೂಗಿಸಲು ಪೂರ್ವ ನಿರ್ಧಾರದಂತೆ 71,332 ಕೋಟಿ ರೂ. ಸಾಲಕ್ಕೆ ಕೈಚಾಚಿದೆ. ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿಗೆ ತರಾತುರಿ ಮಾಡಲಿಲ್ಲ. ಹೀಗಾಗಿ ಆರ್ಥಿಕ ವರ್ಷದ ಮೊದಲ ಆರು ತಿಂಗಳ ತನಕ 22,000 ಕೋಟಿ ರೂ. ಸಾಲ ಪಡೆದಿದೆ. ಕೊನೆಯ ಮೂರು ತಿಂಗಳಲ್ಲಿ 50,000 ಕೋಟಿ ರೂ. ಸಾಲ ಎತ್ತುವಳಿಗೆ ಕೈಹಾಕಿದೆ. ಆರ್​ಬಿಐಗೆ ನೀಡಿದ ಮಾಹಿತಿಯಂತೆ ಜನವರಿ, ಫೆಬ್ರವರಿಯಲ್ಲಿ ತಲಾ 20,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದ್ದು, ಮಾರ್ಚ್​ನಲ್ಲಿ 10,000 ಕೋಟಿ ರೂ. ಸಾಲ ಪಡೆಯಲು ಯೋಚಿಸಿದೆ.
ಯೋಜನೆಗಳ ಅಮೃತಧಾರೆ:ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಬೊಮ್ಮಾಯಿ ಪ್ರಕಟಿಸಿದ ಎಲ್ಲ ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ. 75 ಗ್ರಾ.ಪಂ.ಗಳಿಗೆ ತಲಾ 25 ಲಕ್ಷ ರೂ., ನಗರೋತ್ಥಾನದಡಿ ಬೆಂಗಳೂರು ಮಹಾನಗರಕ್ಕೆ 6,000 ಕೋಟಿ ರೂ., 7,500 ಮಹಿಳಾ ಸ್ವಸಹಾಯ ಗುಂಪುಗಳನ್ನು ಕಿರು ಉದ್ದಿಮೆಗಳನ್ನಾಗಿ ಪರಿವರ್ತಿಸಲು ತಲಾ ಒಂದು ಲಕ್ಷ ರೂ. ಮೂಲಧನ ನೀಡಲೆಂದು 75 ಕೋಟಿ ರೂ. ಕಾದಿರಿಸಿದೆ. ಸದ್ಯಕ್ಕೆ 4,389 ಸ್ವಸಹಾಯ ಗುಂಪುಗಳನ್ನು ಗುರುತಿಸಿ 7.58 ಕೋಟಿ ರೂ. ಮಂಜೂರು ಮಾಡಲಾಗಿದೆ. 750 ರೈತ ಉತ್ಪಾದಕ ಕಂಪನಿಗಳನ್ನು ರಚಿಸುವ ಗುರಿಯಲ್ಲಿ 134 ನೋಂದಣಿಯಾಗಿದ್ದು, 83 ಎಫ್​ಪಿಒಗಳ ನೋಂದಣಿ ಪ್ರಗತಿಯಲ್ಲಿದೆ. 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕೆ ತಲಾ 20 ಲಕ್ಷ ರೂ.ನಂತೆ 150 ಕೋಟಿ ರೂ. ನಿಗದಿಪಡಿಸಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶಾಲಾ ಸೌಲಭ್ಯಕ್ಕಾಗಿ 750 ಸರ್ಕಾರಿ ಶಾಲೆಗಳಿಗೆ ತಲಾ 10 ಲಕ್ಷ ರೂ. ನಿಗದಿಪಡಿಸಿ 40.30 ಕೋಟಿ ರೂ. ಬಿಡುಗಡೆ ಮಾಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರತಿ ಜಿಲ್ಲೆಗೆ 25 ಅಂಗನವಾಡಿ ಕೇಂದ್ರಗಳಂತೆ ಒಟ್ಟು 750 ಅಂಗನವಾಡಿ ಕೇಂದ್ರಗಳಿಗೆ ಮೂಲ ಸವಲತ್ತು ಒದಗಿಸಲೆಂದು ತಲಾ ಒಂದು ಲಕ್ಷ ರೂ. ವ್ಯಯಿಸುತ್ತಿದ್ದು, 7.50 ಕೋಟಿ ರೂ. ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಅನ್ನದಾತರಿಗೆ ಹೆಚ್ಚಿನ ಆದ್ಯತೆ:ಪ್ರಕೃತಿ ವಿಕೋಪದಿಂದ ನಷ್ಟವಾದ ಬೆಳೆಗಳಿಗೆ ಪರಿಹಾರ ಮೊತ್ತ ಏರಿಸಲಾಗಿದೆ. ಪ್ರತಿ ಹೆಕ್ಟೇರ್​ಗೆ ಖುಷ್ಕಿ-6,800 ರಿಂದ 13,600, ನೀರಾವರಿ- 13,500 ರಿಂದ 25,000 ಹಾಗೂ ತೋಟಗಾರಿಕೆ- 18,000 ರಿಂದ 28,000 ರೂ.ಗೆ ಹೆಚ್ಚಿಸಲಾಗಿದೆ. ಒಟ್ಟು 18.02 ಲಕ್ಷ ರೈತರಿಗೆ 1,252.89 ಕೋಟಿ ರೂ. ವೆಚ್ಚವಾಗಿದೆ. ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗುವ ಮುಖ್ಯಮಂತ್ರಿ ವಿದ್ಯಾಸಿರಿ ಯೋಜನೆಯಡಿ 1.77 ಲಕ್ಷ ಪ್ರೌಢಶಾಲೆ, 2.77 ಲಕ್ಷ ಪಿಯುಸಿ ಸೇರಿ ಒಟ್ಟು 4.54 ಲಕ್ಷ ಮಕ್ಕಳಿಗೆ ಶಿಷ್ಯ ವೇತನ ಪಾವತಿಸಿದ್ದು, ಇದಕ್ಕಾಗಿ 1,000 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಕೈಗೆಟುಕುವ ಸೇವೆ:ಬೆಂಗಳೂರಿನಲ್ಲಿ ಜಾರಿಗೆ ತಂದ ‘ಜನಸೇವಕ’ ಯೋಜನೆ ಯಶಸ್ಸು, ಸಾರ್ವಜನಿಕರ ಅಪೇಕ್ಷೆಗೆ ಓಗೊಟ್ಟು ಸರ್ಕಾರಿ ಸೇವೆಗಳು ಜನರ ಕೈಗೆಟುಕುವಂತೆ ಮಾಡಲು ಉದ್ದೇಶಿತ ‘ಗ್ರಾಮ ಒನ್’ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಒಟ್ಟು 12 ಜಿಲ್ಲೆಗಳ 3,000 ಗ್ರಾಮಗಳಲ್ಲಿ ಅನುಷ್ಠಾನಕ್ಕೆ ತರಲು ಉದ್ದೇಶಿಸಿದ್ದು, ಈಗಾಗಲೆ ನಾಲ್ಕು ಜಿಲ್ಲೆಗಳ 300ಕ್ಕೂ ಹೆಚ್ಚು ಕೇಂದ್ರಗಳ ಮೂಲಕ ಒಟ್ಟು 6,32,850 ಸೇವೆಗಳನ್ನು ಒದಗಿಸಲಾಗಿದೆ.
70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!

ಪ್ರೀತಿಸಿ ಮದ್ವೆ ಆಗಿದ್ರೂ ಪತ್ನಿಗೆ ಚಿತ್ರಹಿಂಸೆ ಕೊಡ್ತಿದ್ದ; ದೂರು ದಾಖಲಾಗುತ್ತಿದ್ದಂತೆ ಪರಾರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + thirteen =
Remember me
