ನವದೆಹಲಿ:ಕರ್ನಾಟಕ, ಕೇರಳ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ದೆಹಲಿ ಸೇರಿ 9 ರಾಜ್ಯಗಳ 26 ಸ್ಥಳಗಳಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿ ಮತ್ತು ಪದಾಧಿಕಾರಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಂದು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ಪ್ರಿವೆನ್ಶನ್ ಆಫ್ ಮನಿಲಾಂಡರಿಂಗ್ ಆ್ಯಕ್ಟ್ (ಪಿಎಂಎಲ್​ಎ) ಪ್ರಕಾರ ಈ ದಾಳಿಯನ್ನು ಇಡಿ ಅಧಿಕಾರಿಗಳ ತಂಡ ನಡೆಸಿದೆ. ಅಕ್ರಮ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ವಶಪಡಿಸುವುದಕ್ಕಾಗಿ ಈ ದಾಳಿ ನಡೆದಿದೆ. ಕೇರಳದಲ್ಲಿ ಮಲಪ್ಪುರ ಮತ್ತು ತಿರುವನಂತಪುರ ಜಿಲ್ಲೆಗಳಲ್ಲಿ ಪಿಎಫ್​ಐ ಮುಖ್ಯಸ್ಥ ಒಎಂಎ ಸಲಾಮ್​ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ನಸುರುದ್ದೀನ್ ಎಲಮರಂ ಅವರ ಮನೆಗಳಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಇದನ್ನೂ ಓದಿ:ಹೊಸ ವರ್ಷ ಹೊಸ ಪಕ್ಷ, ಡಿಸೆಂಬರ್ 31ಕ್ಕೆ ಮಹತ್ವದ ಘೋಷಣೆ ಎಂದ ಸೂಪರ್​ ಸ್ಟಾರ್ ರಜಿನಿ !
ಪಿಎಫ್​ಐ ಕೇರಳದಲ್ಲಿ 2006ರಲ್ಲಿ ಸ್ಥಾಪನೆಗೊಂಡಿದ್ದು, ಕೇಂದ್ರ ಕಚೇರಿ ದೆಹಲಿಯಲ್ಲಿದೆ. ಈ ಸಂಘಟನೆಗೂ ಭೀಮ್ ಆರ್ಮಿಗೂ ಹಣಕಾಸಿನ ವ್ಯವಹಾರ ನಡೆದ ಬಗ್ಗೆ ದಾಖಲೆಗಳು ಇಡಿ ಅಧಿಕಾರಿಗಳಿಗೆ ಸಿಕ್ಕಿದ್ದವು. ಈ ಎರಡೂ ಸಂಘಟನೆಗಳು ಸಿಎಎ ವಿರೋಧಿ ಪ್ರತಿಭಟನೆಗೆ ಹಿನ್ನೆಲೆಯಲ್ಲಿ ಸಾಕಷ್ಟು ಕೆಲಸ ಮಾಡಿವೆ. ಪಿಎಫ್​​ಐ ಸಂಬಂಧಿತ ಬ್ಯಾಂಕ್ ಖಾತೆಗಳಲ್ಲಿ 120 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಇದಲ್ಲದೆ, ನಗದು ಮತ್ತು ಐಎಂಪಿಎಸ್ ಮೂಲಕವೂ ಹಣ ವರ್ಗಾವಣೆಯಾಗಿದೆ. ಈ ಎರಡು ಸಂಘಟನೆಗಳ ನಡುವಿನ ಹಣದ ವಹಿವಾಟಿನ ಕಾರಣಕ್ಕೆ ಈ ಶೋಧ ಕಾರ್ಯ ನಡೆಸುತ್ತಿರುವುದಾಗಿ ಇಡಿ ತಿಳಿಸಿದೆ. (ಏಜೆನ್ಸೀಸ್)
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮುಖ್ಯಸ್ಥನ ಮನೆಯಲ್ಲಿ ಇಡಿ ಶೋಧ ಕಾರ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 12 =
Remember me
