ಕಾಸರಗೋಡು:ಕಾಸರಗೋಡು ಜಿಲ್ಲೆಯ ಎಡನೀರು ಶ್ರೀ ಕೇಶವಾನಂದ ಭಾರತೀ ತೀರ್ಥ ಸ್ವಾಮೀಜಿ (79) ಭಾನುವಾರ ನಸುಕಿನ 12.30 ಗಂಟೆಗೆ ಎಡನೀರು ಮಠದಲ್ಲಿ ಕೃಷ್ಣೈಕ್ಯರಾದರು. ಕೆಲವು ದಿವಸಗಳಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆ ಅವರನ್ನು ಕಾಡುತ್ತಿದ್ದರೂ, ದೈನಂದಿನ ಪೂಜಾಕಾರ್ಯ ಹಾಗೂ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. 60ನೇ ವರ್ಷದ ಚಾತುರ್ವಸ್ಯ ವ್ರತಾಚರಣೆಯನ್ನು ಬುಧವಾರವಷ್ಟೇ ಸಂಪನ್ನಗೊಳಿಸಿದ್ದರು. ಶ್ರೀಮಠದಲ್ಲಿ ಸೀಮೋಲ್ಲಂಘನ, ಮೃತ್ತಿಕಾ ವಿಸರ್ಜನೆ, ಪುರಪ್ರವೇಶ ಕಾರ್ಯಕ್ರಮಗಳು ನಡೆದಿದ್ದು, ಶ್ರೀಗಳು ಆ ದಿನ ಭಕ್ತರಿಗೆ ಆಶೀರ್ವಚನವನ್ನೂ ನೀಡಿದ್ದರು. ಶ್ರೀ ಎಡನೀರು ಮಠ ಶ್ರೀ ಶಂಕರಾಚಾರ್ಯರ ಶಿಷ್ಯ ಶ್ರೀ ತೋಟಕಾಚಾರ್ಯ ಪರಂಪರೆಗೆ ಸೇರಿದ ಸ್ಮಾರ್ತ ಭಾಗವತ ಸಂಪ್ರದಾಯದ ಅಪೂರ್ವ ಮಠ. ಇಲ್ಲಿ ಹರಿಹರಾದ್ವೈತದ ಅನುಷ್ಠಾನವನ್ನು ಕಾಣಬಹುದು. ನವನೀತಧರನಾದ ಶ್ರೀ ಬಾಲಕೃಷ್ಣ ಹಾಗೂ ಮೌನಪೋನಿಧಿ ಶ್ರೀ ದಕ್ಷಿಣಾಮೂರ್ತಿ ಶ್ರೀಗಳ ಆರಾಧ್ಯ ಮೂರ್ತಿಗಳಾಗಿದ್ದು, ಗರುಡ ಮತ್ತು ನಂದಿಯ ಸಂಕೇತ ಇಲ್ಲಿದೆ. ಬೆಂಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ತ್ರಿಶೂರು, ಎರ್ನಾಕುಲಂ, ತಿರುವನಂತಪುರಂ, ಹೈದರಾಬಾದ್, ಚೆನ್ನೈ ಮೊದಲಾದೆಡೆ ಎಡನೀರು ಮಠದ ಭಕ್ತರಿದ್ದಾರೆ. ಶ್ರೀಗಳು ಸ್ವತಃ ಕಲಾವಿದರಾಗಿದ್ದು, ಸಂಗೀತ, ಯಕ್ಷಗಾನ ಕಲೆಗಳ ಮಹಾನ್ ಪೋಷಕರಾಗಿದ್ದರು. ಯಕ್ಷಗಾನ ಮಂಡಳಿಯನ್ನು ದೀರ್ಘ ಕಾಲ ಮುನ್ನಡೆಸಿದ್ದ ಶ್ರೀಗಳು ಯಕ್ಷಗಾನ ಕಲೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ನಿಧನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ಮುರಳೀಧರನ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ. ಸಚ್ಚಿದಾನಂದ ಭಾರತೀ ಶ್ರೀಗಳು ಉತ್ತರಾಧಿಕಾರಿ ಸೆ.2ರಂದು ತಮ್ಮ 60ನೇ ಚಾತುರ್ವಸ್ಯ ವ್ರತಾನುಷ್ಠಾನ ಸಂಪನ್ನ ಸಂದರ್ಭ ವಯೋಸಹಜವಾಗಿ ಅಲ್ಪ ನಿತ್ರಾಣರಾದಂತೆ ಕಂಡುಬಂದಿದ್ದ ಶ್ರೀಗಳು ತಮ್ಮ ಉತ್ತರಾಧಿಕಾರಿಯಾಗಿ ಪೂರ್ವಾಶ್ರಮದ ಸಹೋದರಿ ಸರಸ್ವತಿ-ನಾರಾಯಣ ಕೆದಿಲಾಯ ದಂಪತಿ ಪುತ್ರ ಜಯರಾಮ ಕೆದಿಲಾಯ ಅವರನ್ನು ನೇಮಿಸಿದ್ದರು. ಅವರಿಗೆ ಭಾನುವಾರ ಸಚ್ಚಿದಾನಂದ ಭಾರತೀ ಶ್ರೀಗಳು ಎಂದು ನಾಮಕರಣ ಮಾಡಲಾಗಿದೆ. 28ರಂದು ಅವರು ಪೀಠಾರೋಹಣ ಮಾಡಲಿದ್ದಾರೆ.
ಪೂಜ್ಯ ಕೇಶವಾನಂದ ಭಾರತಿ ಸ್ವಾಮೀಜಿ ಸಮುದಾಯದ ಸೇವೆ ಮತ್ತು ಅವಕಾಶವಂಚಿತರ ಏಳ್ಗೆಗೆ ಶ್ರಮಿಸಿದವರು. ಭಾರತದ ಶ್ರೀಮಂತ ಸಂಸ್ಕೃತಿಯ ಬಗ್ಗೆ ಅವರಿಗೆ ಅಪಾರ ಒಲವು ಇತ್ತು ಮತ್ತು ದೇಶದ ಸಂವಿಧಾನವನ್ನು ಗೌರವಿಸುತ್ತಿದ್ದರು. ಅವರ ಮೌಲ್ಯಗಳು ಮುಂದಿನ ತಲೆಮಾರಿಗೆ ಸ್ಪೂರ್ತಿದಾಯಕ. ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ ಚಾರಿತ್ರಿಕ ವ್ಯಾಜ್ಯವು ಸಂವಿಧಾನದ ಮೂಲ ರಚನೆಯನ್ನೇ ಮರುವಿಮರ್ಶೆ ಮಾಡುವಂತೆ ಮಾಡಿತು. ಹೀಗಾಗಿ ಅವರನ್ನು ಕಾನೂನು ಹೋರಾಟದಲ್ಲೂ ಸ್ಮರಿಸಲಾಗುತ್ತದೆ.
| ನರೇಂದ್ರ ಮೋದಿಪ್ರಧಾನಿ

90 ಸಾವಿರ ಹೊಸ ಪ್ರಕರಣ; ಕರೊನಾ ಸೋಂಕಿನಲ್ಲಿ ಭಾರತ ಮತ್ತೊಂದು ದಾಖಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 1 =
Remember me
