ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಹಲವು ಸಂಘಟನೆಗಳು ಇಂದು (ಶನಿವಾರ) ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಹಲವು ವಿಷಯಗಳ ಬಗ್ಗೆ ಸಮ್ಮತಿ, ಅಸಮ್ಮತಿ ಸ್ವಾಭಾವಿಕ. ಪ್ರಭುತ್ವ ಕೈಗೊಂಡ ಯಾವುದೇ ತೀರ್ವನಗಳಿಗೆ ವಿರೋಧವಿದ್ದಲ್ಲಿ ಅದನ್ನು ವ್ಯಕ್ತಪಡಿಸಲು ಹಲವು ವಿಧಾನಗಳಿವೆ. ಪ್ರತಿಭಟನೆ ಮಾಡುವ ಹಕ್ಕು ಇರುವುದು ಹೌದಾದರೂ, ಅದನ್ನು ಜನರಿಗೆ ತೊಂದರೆ ಆಗದಂತೆ, ವ್ಯವಸ್ಥೆಗೆ ಹಾನಿ ಆಗದಂತೆ ನಡೆಸುವುದು ತುಂಬ ಮುಖ್ಯ. ಬಂದ್​ಗೆ ಕರೆಕೊಟ್ಟಾಕ್ಷಣ ಎಲ್ಲ ಸಮಸ್ಯೆ ಬಗೆಹರಿದು ಬಿಡುತ್ತದೆ, ಸರ್ಕಾರ ಮಣಿದು ಬಿಡುತ್ತದೆ ಎಂದೇನಲ್ಲ. ಇಲ್ಲಿ ಕೆಲವು ಸೂಕ್ಷ್ಮಗಳನ್ನು ಮತ್ತು ಜನಸಾಮಾನ್ಯರ ಹಿತವನ್ನು ಮುಖ್ಯವಾಗಿ ಪರಿಗಣಿಸಬೇಕು. ಕೋವಿಡ್ ಉಪಟಳದಿಂದ ವಿಧಿಸಲಾದ ಲಾಕ್​ಡೌನ್​ನಿಂದ ಇಡೀ ದೇಶವೇ ಹಲವು ತಿಂಗಳುಗಳ ಕಾಲ ಬಂದ್ ಆಗಿತ್ತು. ವ್ಯಾಪಾರ ವಹಿವಾಟು ಸ್ತಬ್ಧಗೊಂಡು, ಅದರಿಂದ ಉಂಟಾಗಿರುವ ಆರ್ಥಿಕ ಹಾನಿಯೂ ಅಷ್ಟಿಷ್ಟಲ್ಲ. ಪ್ರಸಕ್ತ ಕರೊನಾದ ಭಯ ಸಂಪೂರ್ಣ ತೊಲಗದಿದ್ದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದರಿಂದ ವ್ಯಾಪಾರ ವಹಿವಾಟುಗಳು ಹಳಿಗೆ ಬರುತ್ತಿದ್ದು, ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಪರಿಸ್ಥಿತಿ ಹೀಗಿರುವಾಗ ಪ್ರತಿಭಟನೆಯನ್ನು ಅನ್ಯ ಮಾರ್ಗದಲ್ಲಿ ನಡೆಸಿ ಸರ್ಕಾರಕ್ಕೆ ಚುರುಕು ಮುಟ್ಟಿಸಬಹುದಲ್ಲವೇ?
ಅರ್ಜಿಯೊಂದರ ವಿಚಾರಣೆ ವೇಳೆ ಬಂದ್ ಕುರಿತು ಹೈಕೋರ್ಟ್ ಕೆಲ ಸ್ಪಷ್ಟ ಸೂಚನೆಗಳನ್ನು ನೀಡಿರುವುದು ಗಮನಾರ್ಹ. ಯಾವುದೇ ಕಾರಣಕ್ಕೂ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಬಾರದು, ಸುಪ್ರೀಂಕೋರ್ಟ್​ನ ಮಾರ್ಗಸೂಚಿ ಉಲ್ಲಂಘನೆ ಆಗಬಾರದು, ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಅಥವಾ ಹಾನಿ ಸಂಭವಿಸಿದರೆ ಅದರ ನಷ್ಟವನ್ನು ಬಂದ್ ಆಯೋಜಕರೇ ಭರಿಸಬೇಕು ಎಂದಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಕೂಡ ಕಾಲಕಾಲಕ್ಕೆ ಇಂಥ ಸೂಚನೆ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಬಂದ್ ವೇಳೆ ಎಷ್ಟೋ ಬಾರಿ ಪರಿಸ್ಥಿತಿ ಸಂಪೂರ್ಣ ಆಯೋಜಕರ ಕೈಯಲ್ಲಿ ಇರುವುದಿಲ್ಲ. ಇಂಥ ಸಂದರ್ಭಗಳನ್ನೇ ವಿಧ್ವಂಸಕ ಶಕ್ತಿಗಳು ದುರುಪಯೋಗ ಪಡಿಸಿಕೊಂಡು ಹಿಂಸೆ ಹಬ್ಬಿಸಿದರೆ ಅಥವಾ ಇತರ ಅನುಚಿತ ಘಟನೆಗೆ ಕಾರಣರಾದರೆ ಅದರಿಂದ ಸಮಾಜದ ಸ್ವಾಸ್ಥ್ಯಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಹಲವು ಪ್ರತಿಭಟನೆಗಳು/ಬಂದ್​ಗಳು ಹೀಗೆ ಬೇರೆ ಸ್ವರೂಪ ಪಡೆದುಕೊಂಡ ನಿದರ್ಶನಗಳಿಗೆ ಕೊರತೆಯೇನಿಲ್ಲ. ಹಾಗಾಗಿ, ಅಂಥ ಅಚಾತುರ್ಯ ಸಂಭವಿಸಬಾರದು, ಹೊಸ ಸಮಸ್ಯೆಗೆ ನಾಂದಿಯಾಗಬಾರದು ಎಂಬ ವಿವೇಚನೆ ಪ್ರತಿಭಟನಾಕಾರರಲ್ಲಿ ಅಗತ್ಯ. ‘ಬಲವಂತದ ಬಂದ್​ಗೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ‘ಬಂದ್​ಗೆ ಪೊಲೀಸ್ ಇಲಾಖೆ ಅನುಮತಿ ಕೊಟ್ಟಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರ‍್ಯಾಲಿ ನಡೆಸಲು ಅವಕಾಶ ಇಲ್ಲ’ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಹೇಳಿದ್ದಾರೆ. ಈ ಎಲ್ಲ ಪರಿಸ್ಥಿತಿಗಳನ್ನು ಅವಲೋಕಿಸಿಕೊಂಡು, ಅರ್ಥಮಾಡಿಕೊಂಡು ಆಯೋಜಕರು ಶಾಂತರೀತಿಯಿಂದ, ಸಂಯಮದಿಂದ, ಮುಖ್ಯವಾಗಿ ಜನರಿಗೆ ಯಾವುದೇ ತೊಂದರೆ ಆಗದಂತೆ ಪ್ರತಿಭಟನೆ ನಡೆಸುವುದು ಸೂಕ್ತ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + four =
Remember me
