ರಾಜಕೀಯ ಹಿತಾಸಕ್ತಿಗಳ ಸಂಘರ್ಷದಲ್ಲಿ ಕೆಲವೊಮ್ಮೆ ಜನಭಾವನೆಗಳು ಗೌಣವಾಗಿ ಬಿಡುತ್ತವೆ. ಜನಾಗ್ರಹದ ದನಿ ಅದುಮಿ ಹೋಗುತ್ತದೆ. ರಾಜಕೀಯ ಪಕ್ಷಗಳ ಕಾರ್ಯಸೂಚಿ ಏನೇ ಆಗಿರಲಿ; ಅವು ಸಮಾಜದ ಹಿತ ಕಾಪಾಡಲು ಆದ್ಯತೆ ನೀಡಬೇಕು ಮತ್ತು ಜನಭಾವನೆಗಳನ್ನು ಗೌರವಿಸಬೇಕು. ಇಲ್ಲದಿದ್ದಲ್ಲಿ ವ್ಯವಸ್ಥೆಯಲ್ಲಿ ಅಸಮಾಧಾನಗಳು, ಅಪನಂಬಿಕೆಗಳು ಹೆಚ್ಚುತ್ತ ಹೋಗಿ, ಸಮಾಜದ ಸ್ವಾಸ್ಥ್ಯಕ್ಕೆ ಪೆಟ್ಟು ನೀಡುತ್ತವೆ. ಅದೇನೆ ಇರಲಿ, ಕರ್ನಾಟಕದ ಮಟ್ಟಿಗೆ ದೀರ್ಘಾವಧಿಯ ಬೇಡಿಕೆಯೊಂದು ಈಡೇರಿದೆ. ಗೋಹತ್ಯಾ ನಿಷೇಧ ಸುಗ್ರೀವಾಜ್ಞೆ ಜಾರಿಯಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶಕ್ಕೆ ಮಂಗಳವಾರ ರಾಜ್ಯಪಾಲರು ಅಂಕಿತ ಹಾಕುವ ಮೂಲಕ ಸರ್ಕಾರದ ಹೊರಡಿಸಿದ್ದ ಸುಗ್ರೀವಾಜ್ಞೆ ಜಾರಿಗೆ ಬಂದಿದೆ.
ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬರಬೇಕು ಎಂಬ ಬೇಡಿಕೆ ಹಲವು ದಶಕಗಳಿಂದಲೂ ಇದೆ. ಈ ನಿಟ್ಟಿನಲ್ಲಿ ಹಲವು ಹಂತದ, ಸ್ವರೂಪದ ಹೋರಾಟಗಳು ನಡೆದಿವೆ. ಆದರೆ, ಇದೊಂದು ಸೂಕ್ಷ್ಮ ವಿಷಯವಾಗಿದ್ದರಿಂದ ರಾಜಕೀಯ ಪಕ್ಷಗಳು/ಸರ್ಕಾರಗಳು ‘ಕಾದುನೋಡುವ’ ತಂತ್ರವನ್ನೇ ಅನುಸರಿಸುತ್ತಿದ್ದವು. ಹಿಂದೊಮ್ಮೆ ಬಿಜೆಪಿ ಸರ್ಕಾರ ಈ ಸಂಬಂಧ ಕಾಯ್ದೆ ತರಲು ಹೊರಟಿತ್ತಾದರೂ, ಸಾಧ್ಯವಾಗಿರಲಿಲ್ಲ. ವಿಧಾನ್ ಪರಿಷತ್​ನಲ್ಲಿ ಕೆಲ ದಿನಗಳ ಹಿಂದೆ ನಡೆದ ಅಹಿತಕರ ಘಟನೆಯ ಪರಿಣಾಮ ಸರ್ಕಾರ ಸುಗ್ರೀವಾಜ್ಞೆಯ ಮೊರೆ ಹೊಗಬೇಕಾಯಿತು.
ಸರ್ಕಾರ ಗೋವುಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ 3-4 ಗೋಶಾಲೆ ಆರಂಭಿಸಲು ಉದ್ದೇಶಿಸಿದೆ. ಕರ್ನಾಟಕದಲ್ಲಿ ಪ್ರಸಕ್ತ 145 ಗೋಶಾಲೆಗಳಿವೆ. ಉತ್ತರಪ್ರದೇಶ, ರಾಜಸ್ಥಾನ ಸೇರಿ ಕೆಲ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಗೋಶಾಲೆಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕಿದೆ. ಆ ನಿಟ್ಟಿನಲ್ಲಿ ಪೂರಕ ವ್ಯವಸ್ಥೆ ರೂಪುಗೊಳ್ಳಬೇಕಿದೆ. ಈ ಮುಂದೆ, ದೇಸೀ ತಳಿಗಳ ಸಂವರ್ಧನೆಗೆ ಅನುಕೂಲವಾಗಲಿದ್ದು, ಗೋವು ಉತ್ಪನ್ನಗಳ ಮಾರಾಟವೂ ಹೆಚ್ಚಲಿದೆ. ಆದರೆ, ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಲವು ಸವಾಲುಗಳೂ ಇವೆ. ಈ ಕುರಿತಂತೆ ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಮುಂದಡಿ ಇಡುವುದು ಅಗತ್ಯ.
ಕಾನೂನಿಗೆ ವಿರುದ್ಧವಾಗಿ ಯಾವೊಬ್ಬ ವ್ಯಕ್ತಿ ಜಾನುವಾರು ಹತ್ಯೆ ಮಾಡುವಂತಿಲ್ಲ ಅಥವಾ ಜಾನುವಾರು ಹತ್ಯೆಗೆ ಕೊಡುವಂತಿಲ್ಲ. ಈ ಕಾರಣಕ್ಕೆ ಖರೀದಿಸುವುದು, ಮಾರಾಟಕ್ಕೂ ಅವಕಾಶವಿಲ್ಲ. ಗೋವನ್ನು ಯಾವುದೇ ವಿಧದಿಂದ ಕೊಲ್ಲುವುದು ಮತ್ತು ಗಾಯಗೊಳಿಸುವಿಕೆಗೆ ಅವಕಾಶವಿಲ್ಲ. ಈ ಅಂಶಗಳು ಸೂಕ್ತವಾಗಿಯೇ ಇವೆ. ಆದರೆ, ಜಾರಿ ಹಂತದಲ್ಲಿ ಪ್ರಮಾದಗಳು ಆಗಬಾರದು. ಯಾರೋ ನಿದೋಷಿ ಅಥವಾ ಅಮಾಯಕರು ಶಿಕ್ಷೆ ಅನುಭವಿಸುವಂತಾಗಬಾರದು. ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಈ ಎಚ್ಚರಿಕೆಯ ಜತೆಗೆ ಗೋವುಗಳ ರಕ್ಷಣೆಗೆ ಪೂರಕ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಇದು ಸಕಾಲ. ಗೋವುಗಳಿಗೆ ಆಗುತ್ತಿದ್ದ ಹಿಂಸೆ ತಪ್ಪಬೇಕು ಎಂಬ ಅಸಂಖ್ಯ ಜನರ ಆಗ್ರಹ ಕಡೆಗೂ ಈಡೇರಿರುವುದು ಸಮಾಧಾನಕರ ಬೆಳವಣಿಗೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 5 =
Remember me
