ಕರೊನಾದ ಹಾವಳಿ ಒಂದಿಷ್ಟು ಸಮಯ ಜನಜೀವನವನ್ನು ಸ್ತಬ್ಧಗೊಳಿಸಿದ್ದೇನೋ ನಿಜ. ಆದರೆ, ಕ್ರಮೇಣ ಲಾಕ್​ಡೌನ್ ಸಡಿಲಿಕೆಯಾಗುತ್ತಿದ್ದಂತೆ ಒಂದೊಂದೇ ಕ್ಷೇತ್ರಗಳು ಮುಂಚಿನಂತೆ ಕೆಲಸ ಆರಂಭಿಸಿದವು. ಈಗಂತೂ ಸುರಕ್ಷಾ ನಿಯಮಗಳನ್ನು ಪಾಲಿಸುತ್ತಲೇ ಬಹುತೇಕ ಎಲ್ಲ ರಂಗಗಳು ಕರೊನಾ ಮುಂಚಿನ ಅವಧಿಯಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕಾಲೇಜು, ಚಿತ್ರಮಂದಿರ, ಸಾರಿಗೆ ವ್ಯವಸ್ಥೆ ಸಹಿತ ಅನೇಕ ಚಟುವಟಿಕೆಗಳು ಮರು ಆರಂಭಗೊಂಡು ಜನಜೀವನ ಸಹಜ ಸ್ಥಿತಿಗೆ ಬಂದಿದ್ದರೂ ಸರ್ಕಾರಿ ಕಚೇರಿಗಳು ಮಾತ್ರ ಇನ್ನು ಲಾಕ್​ಡೌನ್ ಛಾಯೆಯಿಂದ ಹೊರಬಂದಿಲ್ಲ.
ಕರೊನಾವನ್ನು ನೆಪವಾಗಿಸಿಕೊಂಡು ಸರ್ಕಾರಿ ವ್ಯವಸ್ಥೆ ಮತ್ತು ಅದಕ್ಕೆ ಸಂಬಂಧಿಸಿದ ಕಚೇರಿಗಳು ಜನರನ್ನು ದೂರವಿಟ್ಟು, ಆಡಳಿತಯಂತ್ರವನ್ನು ಮತ್ತಷ್ಟು ಜಡಗೊಳಿಸಿವೆ. ಮೊದಲೇ ಸರ್ಕಾರಿ ಕೆಲಸ ಎಂದರೆ ವಿಳಂಬಧೋರಣೆ ಎಂಬಂತಿದ್ದ್ದು, ಈಗಂತೂ ಸರ್ಕಾರಿ ಕಚೇರಿಗಳು, ಅಧಿಕಾರಿಗಳು ಕೆಲಸವನ್ನೇ ನಿರ್ಲಕ್ಷಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ. ಇದರಿಂದ ಹಲವು ಸಂಕಷ್ಟ ಎದುರಿಸುತ್ತಿರುವ ಜನಸಾಮಾನ್ಯರು ಸಮಸ್ಯೆಗೆ ಪರಿಹಾರ ಕಾಣದೆ ಚಿಂತಾಕ್ರಾಂತರಾಗಿದ್ದಾರೆ.
ಕರೊನೋತ್ತರ ಕಾಲದಲ್ಲಿ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆ ಬಗ್ಗೆ ‘ವಿಜಯವಾಣಿ’ ನಡೆಸಿರುವ ರಿಯಾಲಿಟಿ ಚೆಕ್​ನಲ್ಲಿ ಹಲವು ಶೋಚನೀಯ ಸಂಗತಿಗಳು ಬೆಳಕಿಗೆ ಬಂದಿದ್ದು, ವ್ಯವಸ್ಥೆಯ ವೈಫಲ್ಯಕ್ಕೆ ಸ್ಪಷ್ಟ ಸಾಕ್ಷಿ ಒದಗಿಸಿವೆ. ಶ್ರೀಸಾಮಾನ್ಯರು ಕಚೇರಿಗಳಿಗೆ ಹೋದರೆ ಅಲ್ಲಿ ಕುಳಿತುಕೊಳ್ಳುವುದಕ್ಕೆ ಕುರ್ಚಿ ಇಲ್ಲ, ಕುಡಿಯಲು ನೀರಿಲ್ಲ, ಶೌಚಗೃಹವಂತೂ ಇಲ್ಲವೇ ಇಲ್ಲ. ಅದೆಲ್ಲ ನಿರ್ಲಕ್ಷಿಸಿ ಕೆಲಸವನ್ನಾದರೂ ಮಾಡಿಸಿಕೊಳ್ಳೋಣ ಎಂದರೆ ಅಧಿಕಾರಿಗಳೇ ಕೈಗೆ ಸಿಗುತ್ತಿಲ್ಲ. ಹಾಗಾಗಿ, ತುರ್ತು ಕೆಲಸಗಳೂ ಆಗದೆ ಪರದಾಡುವಂತಾಗಿದೆ. ಕಚೇರಿಗಳಿಗೆ ಜನಸಾಮಾನ್ಯರ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧ ಪೂರ್ಣವಾಗಿ ತೆರವಾಗಿಲ್ಲ ಎಂಬುದು ಅಚ್ಚರಿಯ ಸಂಗತಿ. ಕೋವಿಡ್ ನೆಪ ಹೇಳಿ ಅಧಿಕಾರಿಗಳು ಜನರನ್ನು ಭೇಟಿ ಮಾಡುತ್ತಿಲ್ಲ.
ಗ್ರಾಮ ಪಂಚಾಯಿತಿ, ಪುರಸಭೆ ಮತ್ತು ನಗರಸಭೆಗಳು, ತಾಲೂಕು, ಜಿಲ್ಲಾಧಿಕಾರಿ ಕಚೇರಿ, ಕಂದಾಯ, ಕಾರ್ವಿುಕ ಇಲಾಖೆ, ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಈ ಸಮಸ್ಯೆಗಳು ವ್ಯಾಪಕವಾಗಿ ಕಂಡುಬಂದಿವೆ. ಮೊದಲಿನಂತೆ ಕೆಲಸ ಆರಂಭಿಸಲು ಏನು ಅಡ್ಡಿ? ಎಲ್ಲ ಕಡೆ ದೈನಂದಿನ ಚಟುವಟಿಕೆಗಳು ಹಳಿಗೆ ಮರಳಿರುವಾಗ ಸರ್ಕಾರಿ ಕಚೇರಿಗಳಿಗೆ ಯಾವ ಸಮಸ್ಯೆ ಕಾಡುತ್ತಿದೆ? ಎಂಬ ಜನಸಾಮಾನ್ಯರ ಪ್ರಶ್ನೆಗೆ ಸಂಬಂಧಪಟ್ಟವರಾರೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಈ ಬಗೆಯ ನಿರ್ಲಕ್ಷ್ಯ ಅಥವಾ ಜಡತ್ವದಿಂದ ಅಭಿವೃದ್ಧಿಗೆ ಪೆಟ್ಟು ಬೀಳುವುದಲ್ಲದೆ, ಜನಸಾಮಾನ್ಯರು ವ್ಯವಸ್ಥೆ ಬಗ್ಗೆ ಮತ್ತಷ್ಟು ರೋಸಿ ಹೋಗುತ್ತಾರೆ. ಹಾಗಾಗುವ ಮುನ್ನವೇ ಮಂತ್ರಿಗಳು ಆಯಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ಕೊಟ್ಟು, ಸರ್ಕಾರಿ ಕಚೇರಿಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 6 =
Remember me
