ಕೆಲವು ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವ ಪರಿಕಲ್ಪನೆ ಯೋಜನಾ ಆಯೋಗದ ನಾಲ್ಕನೇ ಪಂಚವಾರ್ಷಿಕ ಯೋಜನೆಯ ಅವಧಿಯಿಂದ (1969) ಆರಂಭವಾಯಿತು. ಭೌಗೋಳಿಕ, ಸಾಮಾಜಿಕ, ಆರ್ಥಿಕ ಕಾರಣಗಳಿಂದಾಗಿ ಹಿಂದುಳಿದಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ ಹೆಚ್ಚಿನ ಅನುದಾನ ನೀಡುವುದು ಈ ಪರಿಕಲ್ಪನೆಯ ಉದ್ದೇಶವಾಗಿತ್ತು. ಜಮ್ಮು-ಕಾಶ್ಮೀರ, ಅಸ್ಸಾಂ, ನಾಗಾಲ್ಯಾಂಡ್ ಆರಂಭಿಕ ವರ್ಷಗಳಲ್ಲಿ ಈ ಸ್ಥಾನಮಾನ ಪಡೆದ ಕೆಲವು ರಾಜ್ಯಗಳು. ನಂತರ ಉತ್ತರಾಖಂಡ, ಹಿಮಾಚಲಪ್ರದೇಶ ಮುಂತಾದವುಗಳಿಗೂ ಇದನ್ನು ನೀಡಲಾಯಿತು. ಹೊಸದಾಗಿ ರಚನೆಯಾದ ಕೆಲವು ರಾಜ್ಯಗಳಿಗೂ ಅವುಗಳನ್ನು ಆರ್ಥಿಕವಾಗಿ ಬಲಪಡಿಸುವ ದೃಷ್ಟಿಯಿಂದ ಈ ಸ್ಥಾನಮಾನ ನೀಡಿದ್ದುಂಟು.
ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸ್ಥಾನಮಾನಕ್ಕಾಗಿ ಬೇಡಿಕೆ ಮಂಡಿಸುವ ರಾಜ್ಯಗಳ ಸಂಖ್ಯೆ ಹೆಚ್ಚಾಯಿತು. ಮೇಲ್ನೋಟಕ್ಕೆ ಅವುಗಳ ಬೇಡಿಕೆ ನ್ಯಾಯಯುತ ಎಂದೆನಿಸಿದರೂ ಅದರ ಹಿಂದೆ ರಾಜಕೀಯ ಕಾರಣಗಳಿರುವುದು ಎಂಥವರಿಗೂ ಗೊತ್ತಾಗುತ್ತಿತ್ತು. ಬಿಹಾರವೂ ಅಂತಹ ರಾಜ್ಯಗಳಲ್ಲೊಂದು. ತನಗೆ ವಿಶೇಷ ಸ್ಥಾನಮಾನ ಮಾತ್ರವಲ್ಲದೆ ಪ್ರತ್ಯೇಕ ವಿಶೇಷಾನುದಾನ ಕೂಡ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಬಿಹಾರವು ಹಲವಾರು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದೆ. ಆದರೆ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತಕ್ಕಿಂತ ಕಡಿಮೆ ಸ್ಥಾನಗಳು ಲಭ್ಯವಾಗಿ, ಮಿತ್ರಪಕ್ಷಗಳ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸುವಂತಾದಾಗ, ‘ಇನ್ನು ಮುಂದೆ ಮಿತ್ರಪಕ್ಷಗಳು ಹೇಳಿದಂತೆ ಕೇಂದ್ರ ಸರ್ಕಾರ ನಡೆದುಕೊಳ್ಳಬೇಕಾಗುತ್ತದೆ’ ಎಂಬ ಮಾತು ಎಲ್ಲೆಡೆ ಕೇಳಿಬಂದಿತ್ತು. ಇದಕ್ಕೆ ಪೂರಕ ಎಂಬಂತೆ ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಎನ್​ಡಿಎಯ ಅಂಗಪಕ್ಷವಾದ ಸಂಯುಕ್ತ ಜನತಾದಳವು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿತ್ತು.
ಅದರ ಮರುದಿನವೇ, ಅಂದರೆ ಸೋಮವಾರ ಈ ವಿಷಯವು ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಂಡನೆಯಾದ ಲಿಖಿತ ಉತ್ತರಗಳಲ್ಲಿ ಬಂದಿದೆ. 2012ರಲ್ಲಿ ಕೈಗೊಂಡಿರುವ ತೀರ್ವನದಂತೆ ಯಾವುದೇ ರಾಜ್ಯಗಳಿಗೂ ಇನ್ನುಮುಂದೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂಬ ಮಾತನ್ನು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸ್ಪಷ್ಟಪಡಿಸಿದ್ದಾರೆ. ಇದು ಲೋಕಸಭೆಯಲ್ಲಿ ಮಂಡನೆಯಾದ ಉತ್ತರವಾದ್ದರಿಂದ ಕೇಂದ್ರ ಸರ್ಕಾರದ ಅಧಿಕೃತ ಹೇಳಿಕೆ ಎಂಬ ಮಾನ್ಯತೆಯೂ ಇದಕ್ಕಿರುತ್ತದೆ. ಈ ಮೂಲಕ ತಾನು ಯಾವ ಕಾರಣಕ್ಕೂ ಮಿತ್ರಪಕ್ಷಗಳ ಮರ್ಜಿಯಲ್ಲಿ ಬಿದ್ದು ಸರ್ಕಾರ ನಡೆಸುವುದಿಲ್ಲ ಎಂಬ ಗಟ್ಟಿ ಸಂದೇಶವನ್ನು ಕೇಂದ್ರ ಸರ್ಕಾರ ಇಡೀ ದೇಶಕ್ಕೆ ರವಾನೆ ಮಾಡಿದಂತಾಗಿದೆ. ಸಮ್ಮಿಶ್ರ ಸರ್ಕಾರ ನಡೆಸುವ ಅನಿವಾರ್ಯತೆಗಳ ನಡುವೆಯೂ ಕೇಂದ್ರ ಸರ್ಕಾರ ಇಂತಹ ದಿಟ್ಟತನದ ನಿರ್ಧಾರ ಕೈಗೊಂಡಿರುವುದು ಮತ್ತು ಅದನ್ನು ಬಹಿರಂಗವಾಗಿ ಪ್ರಕಟಿಸಿರುವುದು ಶ್ಲಾಘನಾರ್ಹವಾಗಿದೆ.
ವಾಲ್ಮೀಕಿ ನಿಗಮದ ಹಗರಣ: ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣಕ್ಕೆ ಸಂಸದ ಬೊಮ್ಮಾಯಿ ಆಗ್ರಹ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine + 2 =
Remember me
