ದೇಶದಲ್ಲಿ ಮೀಸಲಾತಿ ಪ್ರಯೋಜನಗಳನ್ನು ಅರ್ಹರಿಗೆ ವಿಸ್ತರಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಗುರುವಾರ (ಆಗಸ್ಟ್ 1) ಮಹತ್ವದ ತೀರ್ಪು ನೀಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳನ್ನು ಅವುಗಳ ಹಿಂದುಳಿದಿರುವಿಕೆ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ಉಪ-ವರ್ಗೀಕರಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್​ನ ಏಳು ಸದಸ್ಯರ ಪೀಠ, ಹಿಂದುಳಿದಿರುವಿಕೆಯನ್ನು ನಿರ್ಣಯಿಸಲು ರಾಜ್ಯ ಸರ್ಕಾರಗಳು ತನ್ನದೇ ತರ್ಕಬದ್ಧ ಕ್ರಮ ಅಳವಡಿಸಿಕೊಳ್ಳಬಹುದು ಮತ್ತು ಸರ್ಕಾರ ರಾಜಕೀಯ ಲಾಭದ ದೃಷ್ಟಿಯಿಟ್ಟುಕೊಂಡು ತನ್ನಿಚ್ಛೆಗೆ ಅನುಸಾರವಾಗಿ ಉಪ-ವರ್ಗೀಕರಣ ಮಾಡಿದಲ್ಲಿ, ಅದು ಸಹಜವಾಗಿಯೇ ನ್ಯಾಯಾಂಗದ ಪರಿಶೀಲನೆಗೆ ಒಳಪಡಲಿದೆ ಎಂದೂ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್​ನ ಈ ತೀರ್ಪು ಐತಿಹಾಸಿಕವಾಗಿದ್ದು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಜಾತಿಗಳಿಗೆ ಒಳಮೀಸಲಾತಿಯ ದಾರಿ ತೆರೆದುಕೊಳ್ಳಲು ಅನುವಾಗಲಿದೆ. ಪರಿಶಿಷ್ಟರಲ್ಲಿ ಅತಿ ಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ಸಿಕ್ಕಿರುವುದರಿಂದ, ಅವುಗಳ ಮೇಲಿನ ಜವಾಬ್ದಾರಿಯೂ ಹೆಚ್ಚಿದೆ.
ಕೆಲ ಸಮುದಾಯಗಳು ತೀರಾ ಹಿಂದುಳಿದಿದ್ದು, ಸಾಮಾಜಿಕ ನ್ಯಾಯದಿಂದ ವಂಚಿತವಾಗಿವೆ. ಇಂಥ ಸಮುದಾಯಗಳ ಜೀವನಸ್ತರವನ್ನು ಉನ್ನತೀಕರಿಸಲು, ಶೋಷಿತರನ್ನು ಮೇಲೆ ಎತ್ತಲು ಈ ಉಪ ವರ್ಗೀಕರಣದ ಸೂತ್ರದಿಂದ ಅನುಕೂಲವಾಗಲಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಳಮೀಸಲಾತಿಗಾಗಿ ಬೇಡಿಕೆಯ ದನಿ ಕೇಳಿಬಂದಿದೆ. ‘ತಾರತಮ್ಯ, ಶೋಷಣೆಗೆ ಒಳಗಾದ ವರ್ಗಗಳು ಏಕರೂಪದ ವರ್ಗವಾಗಿರಲಿಲ್ಲ ಎನ್ನುವುದನ್ನು ಐತಿಹಾಸಿಕ ಪುರಾವೆಗಳು ಸಾಬೀತುಪಡಿಸಿವೆ ಮತ್ತು ಎಲ್ಲ ವರ್ಗಗಳ ಸಾಮಾಜಿಕ ಪರಿಸ್ಥಿತಿಗಳು ಕೂಡ ಏಕರೂಪವಾಗಿಲ್ಲ. ಹೀಗಾಗಿ ಎಸ್​ಸಿ/ಎಸ್​ಟಿಗಳ ಉಪ-ವರ್ಗೀಕರಣಕ್ಕೆ ರಾಜ್ಯಗಳಿಗೆ ಅಧಿಕಾರ ನೀಡುವುದು ತಪ್ಪಾಗುವುದಿಲ್ಲ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ. ಈ ಮೂಲಕ ಒಳಮೀಸಲಾತಿಯ ಚೆಂಡು ರಾಜ್ಯ ಸರ್ಕಾರದ ಅಂಗಳಕ್ಕೆ ತಲುಪಿದ್ದು, ಅವುಗಳು ಮುಂದಿನ ದಿನಗಳಲ್ಲಿ ಯಾವೆಲ್ಲ ಕ್ರಮ ಕೈಗೊಳ್ಳಲಿವೆ ಎಂಬುದು ಕುತೂಹಲ ಮೂಡಿಸಿದೆ.
ಹಿಂದುಳಿದ ವರ್ಗಗಳಿಗಷ್ಟೇ ಅನ್ವಯಿಸುವ ಕೆನೆಪದರದ ತತ್ವವನ್ನು ಎಸ್​ಸಿ, ಎಸ್​ಟಿ ಒಳಮೀಸಲು ವಿಚಾರದಲ್ಲೂ ಅನುಸರಿಸಬೇಕೆಂಬ ಕ್ರಾಂತಿಕಾರಕ ಆದೇಶವೂ ಸುಪ್ರೀಂನಿಂದ ಹೊರಬಿದ್ದಿದೆ. ‘ಮೀಸಲಾತಿಯ ಅಂತಿಮ ಗುರಿ ದೇಶದಲ್ಲಿ ನಿಜವಾದ ಸಮಾನತೆ ತಂದುಕೊಡುವುದಾಗಿದೆ. ಎಸ್​ಸಿ/ಎಸ್​ಟಿಗಳಲ್ಲಿ ಕೆನೆಪದರ ಗುರುತಿಸಬೇಕು ಮತ್ತು ಅವುಗಳನ್ನು ಮೀಸಲಾತಿಯ ಪ್ರಯೋಜನಗಳಿಂದ ಹೊರಗಿಡಬೇಕು’ ಎಂದಿರುವ ನ್ಯಾಯಾಲಯ, ‘ಮೀಸಲಿನಿಂದ ಹಲವರು ಮೇಲಕ್ಕೆ ಬಂದಿದ್ದಾರೆ. ಅಂಥವರ ನಂತರದ ಪೀಳಿಗೆಗೆ ಮೀಸಲು ಬೇಡ. ಮೀಸಲು ಅನುಕೂಲ ಸಿಗದವರಿಗೆ ಸೌಲಭ್ಯ ದಕ್ಕಲಿ’ ಎಂಬ ಆಶಯವನ್ನು ವ್ಯಕ್ತಪಡಿಸಿದೆ. ಒಟ್ಟಾರೆ, ಇಷ್ಟು ದಿನಗಳ ಕಾಲ ಇದ್ದ ಗೊಂದಲಕ್ಕೆ ತೆರೆ ಎಳೆದಿರುವ ನ್ಯಾಯಾಲಯ ಒಳಮೀಸಲಾತಿ ಮತ್ತು ಕೆನೆಪದರ ವಿಷಯದಲ್ಲಿ ಸ್ಪಷ್ಟತೆಯನ್ನು ಒದಗಿಸಿದೆ. ಹಾಗಾಗಿ, ರಾಜ್ಯಗಳಿಗೂ ಮುಂದಿನ ಹಾದಿ ಸಲೀಸಾಗಬಹುದು.
Paris Olympics: ಕಂಚು ಗೆದ್ದ ಸ್ವಪ್ನಿಲ್​ 1 ಕೋಟಿ ರೂ. ಬಹುಮಾನ ಘೋಷಿಸಿದ ಸಿಎಂ ಏಕನಾಥ ಶಿಂದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − one =
Remember me
