ಅಭಿವೃದ್ಧಿಯ ಮುಖ್ಯ ಆಶಯ ಸಾಕಾರಗೊಳ್ಳುವುದು ಗ್ರಾಮಗಳ ವಿಕಾಸದಿಂದ. ಅದಕ್ಕಾಗಿಯೇ, ಹಳ್ಳಿಗಳನ್ನು ಈ ರಾಷ್ಟ್ರದ ಆತ್ಮ ಎಂದು ಸಂಬೋಧಿಸಲಾಗಿದೆ. ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ವ್ಯಾಪ್ತಿಯಿಂದ ಹೊರಗಿಟ್ಟರೆ, ಅಭಿವೃದ್ಧಿ ಹೆಸರಲ್ಲಿ ನಡೆಯುವ ಬೇರೆಲ್ಲ ಪ್ರಯತ್ನಗಳು ಫಲ ಕೊಡುವುದಿಲ್ಲ. ಗ್ರಾಮಗಳ ಸರ್ವಾಂಗೀಣ ವಿಕಾಸ ಸಾಧ್ಯವಾಗಬೇಕಾದರೆ ಮೂಲಸೌಕರ್ಯ ಹೆಚ್ಚಬೇಕು, ಅವಲಂಬನೆ ತಪ್ಪಿ ಸ್ವಾವಲಂಬನೆಯ ಮಂತ್ರ ಮೊಳಗಬೇಕು. ಸರ್ಕಾರಿ ಯೋಜನೆಗಳು, ಸೌಲಭ್ಯಗಳು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ಇಂಥ ಆಶಯಗಳು ಗ್ರಾಮ ಪಂಚಾಯಿತಿಗಳ ಮೂಲಕ ಸಾಕಾರಗೊಳ್ಳಬೇಕು ಎಂಬುದು ಜನಮಾನಸದ ಆಗ್ರಹ. ಪ್ರತಿ ಬಾರಿಯೂ ಗ್ರಾಮ ಪಂಚಾಯಿತಿ ಚುನಾವಣೆ ಬಂದಾಗ ನಿರೀಕ್ಷೆಗಳು ಗರಿಗೆದರುತ್ತವೆ. ಆದರೆ, ಹಳ್ಳಿಗಳ ಪ್ರಗತಿ ಚುನಾಯಿತ ಪ್ರತಿನಿಧಿಗಳು ಮತ್ತು ಜನರ ಸಕ್ರಿಯ ಸಹಭಾಗಿತ್ವದಿಂದ ಮಾತ್ರ ಸಾಧ್ಯ ಎಂಬುದನ್ನು ಮರೆಯುವಂತಿಲ್ಲ.
ರಾಜ್ಯದಲ್ಲಿ ಎಡರು ಹಂತದಲ್ಲಿ ಗ್ರಾಪಂ ಚುನಾವಣೆ ನಡೆಯಲಿದ್ದು, ಮೊದಲ ಹಂತಕ್ಕಾಗಿ ಇಂದು (ಮಂಗಳವಾರ) ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 3,019 ಗ್ರಾಮ ಪಂಚಾಯಿತಿಗಳ 43,238 ಸದಸ್ಯಸ್ಥಾನಗಳಿಗೆ ಮತದಾನ ನಡೆಯಲಿದ್ದು, 1,17,383 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಬಾರಿಯ ಚುನಾವಣಾ ಕಣ ಭಿನ್ನವಾಗಿದ್ದು, ಹಲವು ಅಚ್ಚರಿಗಳನ್ನು ಒಳಗೊಂಡಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುತ್ತಿರುವುದು ಒಂದೆಡೆಯಾದರೆ, ಉನ್ನತ ವ್ಯಾಸಂಗ ಮಾಡಿದವರೂ ಹಳ್ಳಿ ರಾಜಕಾರಣಕ್ಕೆ ಧುಮುಕಿದ್ದಾರೆ. ಮಹಿಳಾ ಅಭ್ಯರ್ಥಿಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ಅಭ್ಯರ್ಥಿಗಳು ಸಾಲು ಸಾಲು ಆಶ್ವಾಸನೆಗಳನ್ನು ನೀಡಿದ್ದು, ಮತದಾರರ ಮನಗೆಲ್ಲಲು ಪ್ರಚಾರದ ಕೊನೆಕ್ಷಣದವರೆಗೂ ಪ್ರಯತ್ನ ನಡೆಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ 80 ಕಾರ್ವಿುಕರು ಚುನಾವಣೆ ಅಖಾಡಕ್ಕೆ ಇಳಿದಿರುವುದು ವಿಶೇಷ. ಈ ಪೈಕಿ ಐವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಚುನಾವಣೆಯ ಹಂತದಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳು ಆತಂಕಕ್ಕೆ ಕಾರಣವಾಗಿವೆ. ಹಳ್ಳಿ ಹೋರಾಟದಲ್ಲೂ ಹಣದ ಹರಿವು ಭಾರಿ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದು, ಮತದಾರರಿಗೆ ವಿವಿಧ ಆಮಿಷ ಒಡ್ಡಲಾಗುತ್ತಿದೆ. ಅಲ್ಲದೆ, ‘ಚುನಾವಣೆಯ ರಾಜಕೀಯ’ ಹಳ್ಳಿಗಳ ಸಾಮರಸ್ಯ, ನೆಮ್ಮದಿಯನ್ನು ಕದಡುತ್ತಿದ್ದು, ಪರಸ್ಪರ ವೈಷಮ್ಯ ಹೆಚ್ಚುತ್ತಿದೆ. ಇಂಥ ಬೆಳವಣಿಗೆಗಳು ಪ್ರಜಾತಂತ್ರದ ಮೌಲ್ಯಗಳಿಗೆ ಮಾರಕವಲ್ಲದೆ, ಹಳ್ಳಿಗಳ ಸಹಬಾಳ್ವೆಗೂ ಅಪಾಯಕಾರಿ. ಈ ಹಂತದಲ್ಲಿ ಮತದಾರರು ಪ್ರಜ್ಞಾವಂತಿಕೆ ಮೆರೆಯಬೇಕಿದೆ. ಯಾವುದೇ ಆಮಿಷಗಳಿಗೆ ಬಲಿಯಾಗದೆ ಗ್ರಾಮದ ಪ್ರಸಕ್ತ ಚಿತ್ರಣ, ಅಭಿವೃದ್ಧಿಯ ಸಮಗ್ರ ನೋಟವನ್ನು ಗಮನದಲ್ಲಿ ಇಟ್ಟುಕೊಂಡು ಅಭ್ಯರ್ಥಿಗಳನ್ನು ಆರಿಸಬೇಕಿದೆ. ನಗರಗಳಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿದರೂ ಜನರು ಮತ ಹಾಕಲು ಉದಾಸೀನ ಮಾಡುತ್ತಾರೆ. ಹಳ್ಳಿಗಳಲ್ಲಿಯೂ ಇದು ಮರುಕಳಿಸಬಾರದು. ಮತಹಕ್ಕು ಹೊಂದಿರುವ ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ಗ್ರಾಮಗಳ ಪರಿವರ್ತನೆಯ ಶಕ್ತಿ ಜನರ ಕೈಯಲ್ಲೇ ಇದ್ದು, ಅದನ್ನು ಮತದಾನದ ಮೂಲಕ ಸಾಕಾರಗೊಳಿಸಬಹುದು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen + 1 =
Remember me
