ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ ಕೆಲ ದಿನಗಳಿಂದ ನಡೆಯುತ್ತಿದ್ದ ಬೆಳವಣಿಗೆಗಳು ಈಗ ಒಂದು ಹಂತಕ್ಕೆ ಬಂದಿವೆ. ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಬುಧವಾರ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅನುಭವಿ ನಾಯಕ ಬಿಎಸ್​ವೈ ಅವರು ಸೋಮವಾರ ರಾಜೀನಾಮೆ ನೀಡಿದ ನಂತರದಲ್ಲಿ ಮುಂದೇನು ಎಂಬ ಪ್ರಶ್ನೆ ಉದ್ಭವವಾಗಿದ್ದು ಸಹಜವೇ ಆಗಿತ್ತು. ಏಕೆಂದರೆ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಅವರದು ಮುಖ್ಯ ಪಾತ್ರ. ಅಲ್ಲದೆ, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರದ ಹೆಬ್ಬಾಗಿಲು ತೆರೆದಿದ್ದು ಕರ್ನಾಟಕದಲ್ಲಿಯೇ ಎಂಬ ನೆಲೆಯಲ್ಲಿ ಸಹ ಬಿಎಸ್​ವೈ ಅಧಿಕಾರದಿಂದ ನಿರ್ಗಮಿಸಿದ ನಂತರದಲ್ಲಿ ಹೊಸ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿತ್ತು.
ಬಿಜೆಪಿ ಹೈಕಮಾಂಡ್ ಈ ವಿಷಯದಲ್ಲಿ ವಿಳಂಬ ಮಾಡದೆ ನೂತನ ನಾಯಕನನ್ನು ಆಯ್ಕೆ ಮಾಡುವ ಮೂಲಕ, ಗೊಂದಲ ಉಂಟಾಗದಂತೆ ನೋಡಿಕೊಂಡಿತು. ಕೇಂದ್ರದಿಂದ ವೀಕ್ಷಕರನ್ನು ಕಳುಹಿಸಿ, ಶಾಸಕಾಂಗ ಪಕ್ಷದ ಸಭೆ ನಡೆದು, ನಾಯಕನ ಆಯ್ಕೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲಾಯಿತು. ಶಾಸಕಾಂಗ ಪಕ್ಷದ ಹೊಸ ನಾಯಕನ ಆಯ್ಕೆ ವಿಳಂಬವಾದರೆ, ಆಕಾಂಕ್ಷಿಗಳ ಪಟ್ಟಿ ಬೆಳೆದು ಪಕ್ಷದ ಒಳಗೆ ಮತ್ತು ಹೊರಗೆ ಮತ್ತಷ್ಟು ಗೊಂದಲ ಉಂಟಾಗುವ ಸಾಧ್ಯತೆಯೂ ಇಲ್ಲದಿರಲಿಲ್ಲ. ‘ರಾಜ್ಯದ ಜನರು ಬಿಜೆಪಿ ಮೇಲೆ ಅಪಾರ ನಿರೀಕ್ಷೆ, ವಿಶ್ವಾಸ ಇರಿಸಿದ್ದಾರೆ. ವರಿಷ್ಠರು ಕೂಡ ನಿರೀಕ್ಷೆ ಇಟ್ಟಿದ್ದಾರೆ. ಜನಪರ ಆಡಳಿತ ನೀಡಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ರೂಪಿಸಲು ಯತ್ನಿಸುತ್ತೇವೆ’ಎಂದು ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎರಡು ಬಾರಿಗೆ ವಿಧಾನಪರಿಷತ್ ಸದಸ್ಯರಾಗಿದ್ದ ಅವರು, ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಈಗ ಸಿಎಂ ಪಟ್ಟ ಅರಸಿಬಂದಿದೆ. ಯಡಿಯೂರಪ್ಪ, ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್ ಸಂಪುಟದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ ಅನುಭವವೂ ಅವರಿಗಿದೆ. ಉಳಿದಂತೆ, ಈ ಸರ್ಕಾರದಲ್ಲಿ ಸಹ ಮೂವರು ಉಪಮುಖ್ಯಮಂತ್ರಿಗಳು ಇರುವ ಸಾಧ್ಯತೆ ಇದೆ.
ಸರ್ಕಾರ-ಪಕ್ಷದ ನಡುವೆ ಸಮನ್ವಯ; ಕರೊನಾ ಸಂಕಷ್ಟದಿಂದ ಕುಸಿದಿರುವ ಆರ್ಥಿಕ ವ್ಯವಸ್ಥೆಗೆ ಚೇತರಿಕೆ; ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ಬಾಕಿ ಹಣವನ್ನು ತರುವತ್ತ ವಿಶೇಷ ಪ್ರಯತ್ನ; ಉದ್ಯೋಗಸೃಷ್ಟಿಗೆ ಒತ್ತು-ಹೀಗೆ ಅನೇಕ ಸವಾಲುಗಳು ಎದುರಿಗಿವೆ. ಇನ್ನೊಂದೆಡೆ, ಕರೊನಾ ಎರಡನೆಯ ಅಲೆ ಈಗ ಇಳಿಮುಖವಾಗಿದ್ದರೂ ಮೂರನೆಯ ಅಲೆಯ ಆತಂಕ ಇದ್ದೇ ಇದೆ. ಹೀಗಾಗಿ ಸರ್ಕಾರ ಆರೋಗ್ಯ ವ್ಯವಸ್ಥೆಯ ಬಗ್ಗೆ ಹೆಚ್ಚು ಒತ್ತುಕೊಟ್ಟು ಕಾರ್ಯನಿರ್ವಹಿಸಬೇಕಾದುದು ಅನಿವಾರ್ಯ. ಬಿಜೆಪಿ ಸರ್ಕಾರ ಬಂದ ಈ ಎರಡು ವರ್ಷಗಳಲ್ಲಿ ಹಲವು ರಾಜಕೀಯ ಬೆಳವಣಿಗೆಗಳು ಮತ್ತು ನಾಯಕತ್ವ ಬದಲಾವಣೆ ಚರ್ಚೆಯ ಕಾರಣದಿಂದ ಅಭಿವೃದ್ಧಿ ನಿಟ್ಟಿನಲ್ಲಿ ನಿರೀಕ್ಷಿತ ಸಾಧನೆ ಕಂಡುಬಂದಿಲ್ಲ. ಇದರ ಜತೆಗೆ, ಪ್ರವಾಹ, ಕರೊನಾದಂತಹ ಸನ್ನಿವೇಶಗಳು ಕೂಡ ಎದುರಾದವು. ಈಗ ಹೊಸ ಹುರುಪಿನಲ್ಲಿ, ವೇಗವಾಗಿ ಕಾರ್ಯನಿರ್ವಹಿಸಬೇಕಾದುದು ಅಗತ್ಯ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 18 =
Remember me
