ಭಾರತದಲ್ಲಿ ಮಾರಾಟವಾಗುವ ಎಲ್ಲ ಬ್ರಾಂಡ್​ಗಳ, ಎಲ್ಲ ಬಗೆಯ ಸಕ್ಕರೆ ಮತ್ತು ಉಪ್ಪಿನಲ್ಲಿ ಪ್ಲಾಸ್ಟಿಕ್ ಕಣಗಳಿರುತ್ತವೆ (ಮೈಕ್ರೋಪ್ಲಾಸ್ಟಿಕ್) ಎಂದು ಟಾಕ್ಸಿಕ್ಸ್ ಲಿಂಕ್ ಎಂಬ ಪರಿಸರ ಸಂಶೋಧನಾ ಸಂಸ್ಥೆಯ ಅಧ್ಯಯನ ವರದಿ ಹೇಳಿರುವುದು ಆತಂಕ ಮೂಡಿಸಿದೆ. ‘ಉಪು್ಪ ಮತ್ತು ಸಕ್ಕರೆಯಲ್ಲಿ ಪ್ಲಾಸ್ಟಿಕ್ ಕಣಗಳು’ ಎಂಬ ಶೀರ್ಷಿಕೆಯಲ್ಲಿ ಈ ಸಂಸ್ಥೆ ವ್ಯಾಪಕ ಅಧ್ಯಯನ ನಡೆಸಿದೆ. 5 ಮಿಲಿಮೀಟರ್​ಗಿಂತ ಚಿಕ್ಕದಾದ ಅಂದರೆ ಗಾತ್ರದಲ್ಲಿ 0.2 ಇಂಚಿಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಕಣವನ್ನು ಮೈಕ್ರೋ ಪ್ಲಾಸ್ಟಿಕ್ ಎಂದು ಕರೆಯಲಾಗುತ್ತದೆ. ಸಕ್ಕರೆ ಮಾದರಿಗಳಲ್ಲಿ ಪ್ರತಿ ಕೆಜಿಗೆ 11.85ರಿಂದ 68.25 ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ. ಉಪ್ಪಿನ ಮಾದರಿಗಳಲ್ಲಿ ಪ್ಲಾಸ್ಟಿಕ್ ಕಣಗಳ ಸಾಂದ್ರತೆ ಪ್ರಮಾಣ ಒಂದು ಕೆಜಿಗೆ 6.71ರಿಂದ 89.15 ಚೂರು. ಪ್ಲಾಸ್ಟಿಕ್ ಕಣಗಳು ಆರೋಗ್ಯ ಮತ್ತು ಪರಿಸರ ಎರಡಕ್ಕೂ ಮಾರಕ.
ಮೈಕ್ರೋಪ್ಲಾಸ್ಟಿಕ್​ನ ಹಾವಳಿ ಇತ್ತೀಚಿನ ವರ್ಷಗಳಲ್ಲಿ ವಿಪರೀತವಾಗಿದೆ. ನಮ್ಮ ದಿನನಿತ್ಯ ಬಳಕೆಯ ವಸ್ತುಗಳಲ್ಲಿ ಪ್ಲಾಸ್ಟಿಕ್​ನ ಸಣ್ಣ ಸಣ್ಣ ಕಣಗಳು ಸೇರಿಕೊಂಡು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿವೆ. ತಿಂಡಿ, ಊಟ ಮತ್ತು ಉಸಿರಾಟದ ಪ್ರಕ್ರಿಯೆ ಮೂಲಕ ಒಂದೇ ವಾರದಲ್ಲಿ ಪ್ಲಾಸ್ಟಿಕ್​ನ ಸರಾಸರಿ 2 ಸಾವಿರ ಕಣಗಳು ದೇಹವನ್ನು ಪ್ರವೇಶಿಸುತ್ತಿವೆ. ವರ್ಷದ 52 ವಾರಗಳಲ್ಲಿ 1,04,000 ಮೈಕ್ರೋಪ್ಲಾಸ್ಟಿಕ್ ದೇಹ ಸೇರುತ್ತಿವೆ. ಬೆಳಗ್ಗೆ ಎದ್ದು ನಾವು ಹಲ್ಲಿನ ಸ್ವಚ್ಛತೆಗೆ ಉಪಯೋಗಿಸುವ ಬ್ರಶ್, ಕುಡಿಯುವ ನೀರಿನ ಬಾಟಲ್, ಪಲ್ಯ ಮಾಡಲು ಬಳಸುವ ಸೊಪು್ಪ, ಉಪು್ಪ, ಸಕ್ಕರೆ ಹೀಗೆ ದಿನನಿತ್ಯ ಬಳಸುವ ಎಷ್ಟೋ ವಸ್ತುಗಳಿಂದ ಪ್ಲಾಸ್ಟಿಕ್​ನ ಸೂಕ್ಷ್ಮ ಕಣಗಳು ಶರೀರ ಸೇರುತ್ತಿವೆ ಎಂಬುದು ಗಮನಾರ್ಹ.
ಮೈಕ್ರೋಪ್ಲಾಸ್ಟಿಕ್ ಅಂಶಗಳು ದೇಹಕ್ಕೆ ಸೇರುವುದರೆಂದರೆ ಅಪಾಯವನ್ನು ಆಹ್ವಾನಿಸಿದಂತೆ. ಇದು ಹೃದ್ರೋಗಿಗಳಲ್ಲಿ ಹೃದಯಾಘಾತದ ಸಾಧ್ಯತೆಯನ್ನು ಎರಡುಪಟ್ಟು ಹೆಚ್ಚಿಸುತ್ತದೆ. ಹೊಟ್ಟೆ, ಶ್ವಾಸಕೋಶ, ಮೂತ್ರಕೋಶಕ್ಕೂ ಇದರಿಂದ ಅಪಾಯ. ರಕ್ತದಲ್ಲಿ ಪ್ಲಾಸ್ಟಿಕ್​ನ ಸೂಕ್ಷ್ಮಕಣಗಳು ಹೆಚ್ಚುವುದರಿಂದ ರಕ್ತದೊತ್ತಡದ ಪ್ರಮಾಣವೂ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.
ಆಹಾರ, ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್ ಸೇರದಂತೆ ನೋಡಿಕೊಳ್ಳಬೇಕಿದೆ. ಪ್ಲಾಸ್ಟಿಕ್​ನ ಬಳಕೆಗೆ ಸರ್ಕಾರದ ಮಟ್ಟದಲ್ಲೂ, ವೈಯಕ್ತಿಕ ಮಟ್ಟದಲ್ಲೂ ಕಡಿವಾಣ ಹಾಕಬೇಕಿದೆ. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತೆ ಅರಿವು ಮೂಡಿಸಲಾಗುತ್ತಿದೆಯಾದರೂ, ಪೂರ್ಣಪ್ರಮಾಣದಲ್ಲಿ ಪರಿಸ್ಥಿತಿ ಬದಲಾಗಿಲ್ಲ.
ಈ ಸಮಸ್ಯೆ ವಿದೇಶಗಳಲ್ಲೂ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ನೆದರಲ್ಯಾಂಡ್​ನ ಸರಾಸರಿ ಶೇಕಡ 80 ಜನರ ದೇಹದಲ್ಲಿ ಪ್ಲಾಸ್ಟಿಕ್ ಕಣಗಳು ಸೇರಿಕೊಂಡಿವೆ ಎಂದು ಅಧ್ಯಯನ ವರದಿ ಹೇಳಿದೆ. ಇನ್ನಾದರೂ ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ಬಳಕೆ ತ್ಯಜಿಸಿ, ಪರಿಸರಸ್ನೇಹಿ ಉತ್ಪನ್ನಗಳನ್ನು ಬಳಸಬೇಕಿದೆ. ಈ ಮೂಲಕ ನಮ್ಮ ಪರಿಸರ ಮತ್ತು ನಮ್ಮ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವುದು ಅಗತ್ಯ.
ದಿಲ್ಲಿಯ ಕೆಂಪುಕೋಟೆಯಲ್ಲಿ ಸತತ 11ನೇ ಬಾರಿಗೆ ಪ್ರಧಾನಿ ಮೋದಿಯಿಂದ ರಾಷ್ಟ್ರಧ್ವಜಾರೋಹಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 17 =
Remember me
