ಕಳೆದೊಂದು ದಶಕದಲ್ಲಿ ಅಂತಾರಾಷ್ಟ್ರೀಯ ವಲಯದಲ್ಲಿ ಭಾರತದ ವರ್ಚಸ್ಸು ಹೆಚ್ಚಿದ್ದು, ಜಾಗತಿಕ ವೇದಿಕೆಗಳಲ್ಲಿ ಭಾರತದ ದನಿಗೆ ಮನ್ನಣೆ ಸಿಗುತ್ತಿದೆ. ನಮ್ಮ ದೇಶದ ವಿದೇಶಾಂಗ ನೀತಿ ಹಿಂದೆಂದಿಗಿಂತಲೂ ಪರಿಣಾಮಕಾರಿಯಾಗಿದೆ, ಬಲಿಷ್ಠವಾಗಿದೆ ಎಂಬುದಕ್ಕೆ ಈ ಬೆಳವಣಿಗೆಗಳು ಸಾಕ್ಷಿ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಸ್ನೇಹಸಂಬಂಧ ಸದೃಢಗೊಳ್ಳುತ್ತಿದ್ದರೆ, ನೆರೆ ರಾಷ್ಟ್ರಗಳೊಂದಿಗೂ ಬಾಂಧವ್ಯ ವೃದ್ಧಿಸುತ್ತಿದೆ. ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಮೊದಲ ಭೇಟಿ ನೀಡಿದ್ದು, ಹಲವು ಆಯಾಮಗಳಲ್ಲಿ ಪ್ರಮುಖವೆನಿಸಿದೆ. ರಾಜತಾಂತ್ರಿಕ ಸಂಬಂಧ ವೃದ್ಧಿಗೆ ಈ ಭೇಟಿ ಇನ್ನಷ್ಟು ಬಲ ತುಂಬಿದೆ. ಜಾಗತಿಕ ಕಳವಳ, ಸವಾಲುಗಳ ಬಗ್ಗೆಯೂ ಚರ್ಚೆಯಾಗಿದೆ.
ಭಾರತದಿಂದ ಬೇರೆ ಬೇರೆ ಕೆಲಸಗಳಿಗಾಗಿ ನೇಮಕಾತಿಗೊಂಡು ಈಗ ರಷ್ಯಾ ಪರವಾಗಿ ಯೂಕ್ರೇನ್ ವಿರುದ್ಧದ ಯುದ್ಧದಲ್ಲಿ ಕೆಲಸ ಮಾಡಬೇಕಾಗಿ ಬಂದಿರುವ ಭಾರತೀಯರನ್ನು ಕೂಡಲೇ ಅಲ್ಲಿಂದ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದು ಮತ್ತು ಅದಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ತಕ್ಷಣ ಒಪ್ಪಿಗೆ ಸೂಚಿಸಿರುವುದು ಸಂತಸದ ವಿಷಯ. ಇದಲ್ಲದೆ, ಇಬ್ಬರೂ ನಾಯಕರು ಉಭಯ ದೇಶಗಳ ನಡುವಿನ ವ್ಯಾಪಾರ, ಇಂಧನ, ಹೂಡಿಕೆ, ಆರ್ಥಿಕತೆ ಮುಂತಾದ ವಿಷಯಗಳ ಬಗ್ಗೆ ದ್ವಿಪಕ್ಷೀಯ ಚರ್ಚೆಯನ್ನೂ ನಡೆಸಿದ್ದಾರೆ.
ಯೂಕ್ರೇನ್ ಜತೆಗಿನ ಯುದ್ಧಕ್ಕೆ ಪೂರ್ಣವಿರಾಮ ನೀಡುವಂತೆ ಆಗ್ರಹಿಸುವ ಮೂಲಕ ಮೋದಿ ಶಾಂತಿ ಸಂದೇಶವನ್ನೂ ಸಾರಿದ್ದಾರೆ. ‘ಬಾಂಬ್, ಗನ್ ಮತ್ತು ಬುಲೆಟ್​ಗಳ ನಡುವೆ ಶಾಂತಿ ಮಾತುಕತೆ ಸಫಲವಾಗುವುದಿಲ್ಲ. ಯುದ್ಧಭೂಮಿಯಲ್ಲಿ ಯಾವುದೇ ಸಂಘರ್ಷಕ್ಕೆ ಪರಿಹಾರ ಸಾಧ್ಯವಿಲ್ಲ’ ಎಂದು ಸ್ಪಷ್ಟನುಡಿಗಳಲ್ಲಿ ತಿಳಿಸಿರುವ ಮೋದಿ, ಯೂಕ್ರೇನ್ ಜತೆಗಿನ ಸಂಘರ್ಷ ಕೊನೆಗೊಳಿಸುವ ಪರವಾಗಿ ಭಾರತ ಇದೆ. ಹೊಸ ಪೀಳಿಗೆಗೆ ಉಜ್ವಲ ಭವಿಷ್ಯ ನಿರ್ವಣಕ್ಕೆ ಶಾಂತಿ ಅತ್ಯವಶ್ಯಕ ಎಂದಿದ್ದಾರೆ.
‘ಜಗತ್ತು ಆಹಾರ, ಇಂಧನ ಮತ್ತು ರಾಸಾಯನಿಕ ಗೊಬ್ಬರದ ಕೊರತೆಯಿಂದ ತತ್ತರಿಸುತ್ತಿದ್ದಾಗ ಈ ಯಾವುದೇ ಸಮಸ್ಯೆ ನಮ್ಮ ರೈತರಿಗೆ ಎದುರಾಗಲು ನಾವು ಬಿಡಲಿಲ್ಲ. ಈ ವಿಷಯದಲ್ಲಿ ರಷ್ಯಾ ಜತೆಗಿನ ನಮ್ಮ ಸ್ನೇಹ ಪ್ರಮುಖ ಪಾತ್ರ ವಹಿಸಿತು’ ಎಂದು ಮೋದಿ ನೆನಪಿಸಿಕೊಂಡಿದ್ದಾರೆ. ಉಭಯ ದೇಶಗಳ ನಡುವಿನ ಇಂಧನ ಕ್ಷೇೕತ್ರದ ಸಹಕಾರದಿಂದ ಇಡೀ ಜಗತ್ತಿಗೆ ಒಳಿತಾಗಿದೆ ಎಂಬುದನ್ನು ಮೆಲುಕು ಹಾಕಿದ್ದಾರೆ. ಭಯೋತ್ಪಾದನೆ ವಿರುದ್ಧ ಜಾಗತಿಕ ಹೋರಾಟ ಅತ್ಯಗತ್ಯ ಎಂಬುದನ್ನು ವಿಶ್ವಸಂಸ್ಥೆಯಲ್ಲೂ ಗಟ್ಟಿದನಿಯಲ್ಲಿ ಹೇಳಿದ್ದ ಮೋದಿ, ಇದೇ ವಿಷಯವನ್ನು ಪುತಿನ್ ಜತೆಗಿನ ಮಾತುಕತೆಯಲ್ಲಿ ಪ್ರಸ್ತಾಪಿಸಿದ್ದಾರೆ. ತಾವು ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸುವುದಾಗಿಯೂ ಹೇಳಿದ್ದಾರೆ. ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ರಷ್ಯಾ ಕಠಿಣ ನಿಲುವು ತಳೆದರೆ, ಅದರಿಂದ ಶಾಂತಿಸ್ಥಾಪನೆ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದಂತೆ ಎಂಬುದರಲ್ಲಿ ಅನುಮಾನವಿಲ್ಲ. ಒಟ್ಟಾರೆ, ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಭೇಟಿ ಹಲವು ಕೋನಗಳಿಂದ ಯಶಸ್ವಿಯಾಗಿದ್ದು, ಭವಿಷ್ಯದ ಬಗ್ಗೆ ಹೊಸ ಆಶಾವಾದವನ್ನು ಸೃಷ್ಟಿಸಿದೆ.
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್​ ಗಂಭೀರ್ ಆಯ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − five =
Remember me
