ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಅಪಘಾತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಹೆದ್ದಾರಿಗಳಲ್ಲಿನ ಒತ್ತುವರಿ. ವಾಣಿಜ್ಯ ಚಟುವಟಿಕೆಗಳಿಗಾಗಿ ಅಕ್ರಮವಾಗಿ ನಿರ್ವಿುಸಲಾಗುವ ಮಳಿಗೆಗಳು, ಹೋಟೆಲ್ ಸೇರಿದಂತೆ ಹಲವು ಅಂಗಡಿಗಳು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಭೂಮಿ ಒತ್ತುವರಿ ಆಗುತ್ತಿರುವುದಕ್ಕೆ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಪರಿಶೀಲನೆ ಮತ್ತು ತೆರವಿಗೆ ತಂಡಗಳನ್ನು ರಚಿಸುವಂತೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿರುವುದು ಸ್ವಾಗತಾರ್ಹ. ಹೆದ್ದಾರಿ ಬದಿಯ ಅಕ್ರಮ ಹೋಟೆಲ್​ಗಳು, ಅಂಗಡಿಗಳ ಮುಂದೆ ವಾಹನಗಳು ನಿಂತು, ಇತರ ವಾಹನಗಳ ಮುಕ್ತ ಸಂಚಾರಕ್ಕೆ ತೊಡಕುಂಟು ಮಾಡುತ್ತಿರುವುದು ಮಾತ್ರವಲ್ಲದೆ ಅಪಘಾತಗಳಿಗೂ ಕಾರಣವಾಗುತ್ತಿರುವುದು ಸುಪ್ರೀಂಕೋರ್ಟ್​ನ ಈ ತೀರ್ಪಿನ ಹಿಂದಿರುವ ಕಾರಣ.
‘ಸಾರ್ವಜನಿಕರು ಹೈವೇಗಳಲ್ಲಿ ಕಂಡುಬರುವ ಅಕ್ರಮ ಒತ್ತುವರಿಗಳ ಫೋಟೋ ತೆಗೆದು ಅಪ್​ಲೋಡ್ ಮಾಡಲು ಅನುಕೂಲವಾಗುವಂತೆ ಪೋರ್ಟಲ್ ರೂಪಿಸಬೇಕು. ಅದಕ್ಕೆ ವ್ಯಾಪಕ ಪ್ರಚಾರ ನೀಡಬೇಕು. ಜನರು ಫೋನ್ ಮಾಡಿ ತಿಳಿಸಲು ಅನುವಾಗುವಂತೆ ಟೋಲ್​ಫ್ರೀ ನಂಬರ್ ಕೂಡ ನೀಡಬೇಕು’ ಎಂದು ನ್ಯಾ. ಅಭಯ್ ಎಸ್. ಓಕ್ ಮತ್ತು ನ್ಯಾ. ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಸೂಚಿಸಿದೆ. ಕೇಂದ್ರ ಸರ್ಕಾರ ರಚಿಸುವ ತಂಡಗಳ ಮಾಹಿತಿ ಅನ್ವಯ ಒತ್ತುವರಿ ತೆರವು ಮಾಡಲು ರಾಜ್ಯ ಸರ್ಕಾರಗಳು ಸಹಕಾರ ನೀಡಬೇಕು ಎಂದೂ ಪೀಠ ಸ್ಪಷ್ಟ ಆದೇಶ ನೀಡಿದೆ.
ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಅಸ್ಸಾಂನಲ್ಲಿ ಸಾಕಷ್ಟು ಹೆದ್ದಾರಿಗಳು ಒತ್ತುವರಿಯಾಗಿವೆ. ಪುಣೆ ಮಹಾನಗರ ಪಾಲಿಕೆಯು ಇದೇ ಮಾರ್ಚ್ 7ರಂದು ಪುಣೆ-ಬೆಂಗಳೂರು ಹೆದ್ದಾರಿಯ 3 ಲಕ್ಷ ಚದರಡಿ ಪ್ರದೇಶದಲ್ಲಿ ಅಕ್ರಮವಾಗಿ ತಲೆಎತ್ತಿದ್ದ ಮಳಿಗೆಗಳನ್ನು ಪೊಲೀಸರ ಭಾರಿ ಭದ್ರತೆ ನಡುವೆ ತೆರವುಗೊಳಿಸಿತ್ತು. ಇದಕ್ಕೂ ಮುನ್ನ 2023ರ ನವೆಂಬರ್​ನಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ 1 ಲಕ್ಷ ಚದರಡಿ ಪ್ರದೇಶದಲ್ಲಿನ ಅಕ್ರಮ ನಿರ್ವಣಗಳನ್ನು ತೆರವುಗೊಳಿಸಿತ್ತು.
ಇದಲ್ಲದೆ, ‘ರಸ್ತೆ ಅಪಘಾತಗಳಿಗೆ ಚಾಲಕರು ಕಾರಣರಲ್ಲ, ಇಂಜಿನಿಯರ್​ಗಳು ಕಾರಣ’ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿರುವ ಮಾತು ಕೂಡ ಹೆದ್ದಾರಿ ನಿರ್ವತೃಗಳ ಕಣ್ತೆರೆಸುವಂತಿದೆ. ದೇಶದಲ್ಲಿ ವಾರ್ಷಿಕವಾಗಿ ಸರಾಸರಿ 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 1.5 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 3 ಲಕ್ಷ ಜನರು ಗಾಯಗೊಳ್ಳುತ್ತಿದ್ದಾರೆ. ಇದರಿಂದ ದೇಶದ ಜಿಡಿಪಿಗೆ ಶೇಕಡ 3ರಷ್ಟು ನಷ್ಟವಾಗುತ್ತಿದೆ. ‘ಯುದ್ಧ, ಭಯೋತ್ಪಾದನೆ ಮತ್ತು ನಕ್ಸಲೀಯರ ವಿಧ್ವಂಸಕ ಕೃತ್ಯದಿಂದ ಸಂಭವಿಸುವ ಸಾವುಗಳಿಗಿಂತಲೂ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಹೆಚ್ಚಿದೆ’ ಎಂಬ ಗಡ್ಕರಿಯವರ ಮಾತು ರಸ್ತೆ ಅಪಘಾತಗಳು ಸೃಷ್ಟಿಸುತ್ತಿರುವ ಹಾನಿಯ ಗಂಭೀರತೆಗೆ ಸಾಕ್ಷಿ. ಸಂಚಾರ ಮತ್ತು ಸುರಕ್ಷಾ ನಿಯಮಗಳನ್ನು ಪಾಲಿಸುವುದರ ಜತೆಗೆ, ಒತ್ತುವರಿ ತೆರವಿಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅವಶ್ಯ.
ಬಳ್ಳಾರಿ ಜೈಲಿಗೆ ನಾಳೆ ನಟ ದರ್ಶನ್ ತೂಗದೀಪ, ಸಂಚಾರ ಮಾರ್ಗ ವಿವರ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
