ದೇಶದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ 2021ರಲ್ಲಿ ಅಳವಡಿಸಿದ ಫಾಸ್​ಟ್ಯಾಗ್ ವ್ಯವಸ್ಥೆ ಈಗಾಗಲೇ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. 45 ಸಾವಿರ ಕಿಮೀ ಹೆದ್ದಾರಿಯಲ್ಲಿ 1200ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಿವೆ. 8 ಕೋಟಿ ಜನರು ಫಾಸ್​ಟ್ಯಾಗ್ ಬಳಸುತ್ತಿದ್ದಾರೆ. ಪ್ರತಿದಿನ ಅದರಿಂದ ಹಲವು ಕೋಟಿ ರೂ. ಶುಲ್ಕ ಸಂಗ್ರಹವಾಗುತ್ತಿದೆ. ಶೇ. 97ರಷ್ಟು ವಾಹನ ಸವಾರರು ಫಾಸ್​ಟ್ಯಾಗ್ ಬಳಸುತ್ತಿರುವ ಕಾರಣ ಟೋಲ್ ಪ್ಲಾಜಾಗಳಲ್ಲಿ ಕಾಯುವ ಅವಧಿಯೂ ಗಣನೀಯವಾಗಿ ಕಡಿಮೆಯಾಗಿದೆ. ಈ ಮಧ್ಯೆ, ಫಾಸ್​ಟ್ಯಾಗ್​ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ಗುರುವಾರ ಅಧಿಸೂಚನೆಯೊಂದನ್ನು ಹೊರಡಿಸಿದೆ. ವಾಹನಗಳ ಮುಂಭಾಗದ ಗಾಜಿನ ಮೇಲೆ ಕಾಣಿಸುವಂತೆ ಫಾಸ್​ಟ್ಯಾಗ್ ಅಂಟಿಸಿರದಿದ್ದರೆ ದುಪ್ಪಟ್ಟು ಟೋಲ್ ಶುಲ್ಕ ವಸೂಲಿ ಮಾಡುವಂತೆ ಸಂಬಂಧಪಟ್ಟ ಏಜೆನ್ಸಿಗಳಿಗೆ ಮತ್ತು ಸಿಬ್ಬಂದಿಗೆ ಸೂಚಿಸಿದೆ. ಎನ್​ಎಚ್​ಎಐನ ಈ ಕ್ರಮ ಸ್ವಾಗತಾರ್ಹವಾಗಿದೆ. ಏಕೆಂದರೆ, ಕೆಲವು ವಾಹನ ಸವಾರರು ಉದ್ದೇಶಪೂರ್ವಕವಾಗಿಯೇ ವಾಹನದ ಗಾಜಿಗೆ ಫಾಸ್​ಟ್ಯಾಗ್ ಅಂಟಿಸಿರುವುದಿಲ್ಲ. ಟೋಲ್​ಪ್ಲಾಜಾ ಬಂದಾಗ ಕೈಯಿಂದಲೇ ಫಾಸ್​ಟ್ಯಾಗ್ ಅನ್ನು ಗಾಜಿಗೆ ಹಿಡಿದು ಮುಂದಕ್ಕೆ ಹೋಗುತ್ತಾರೆ. ಒಂದೇ ಫಾಸ್​ಟ್ಯಾಗ್ ಅನ್ನು ಬೇರೆ ಬೇರೆ ವಾಹನಗಳಿಗೆ ಬಳಸುವುದು ಇದಕ್ಕೆ ಕಾರಣ.
ಕೆಲವೊಮ್ಮೆ ಫಾಸ್​ಟ್ಯಾಗ್ ಸರಿಯಾಗಿ ಗಾಜಿಗೆ ಅಂಟಿಕೊಳ್ಳದಿದ್ದರೆ ಬೇಗ ಕಾರ್ಡ್​ರೀಡ್ ಆಗುವುದಿಲ್ಲ. ಪರಿಣಾಮ, ಟೋಲ್ ಪ್ಲಾಜಾದಲ್ಲಿ ಬೇರೆ ವಾಹನ ಸವಾರರಿಗೆ ಅನಗತ್ಯ ವಿಳಂಬ ಆಗುತ್ತದೆ. ಸಿಬ್ಬಂದಿಯೊಂದಿಗೂ ವಿನಾಕಾರಣ ಜಗಳಕ್ಕೆ ಆಸ್ಪದವಾಗುತ್ತದೆ. ಈ ಕುರಿತು ಟೋಲ್ ಸಂಗ್ರಹಿಸುವ ಏಜೆನ್ಸಿಗಳಿಗೆ ಸ್ಪಷ್ಟ ಮಾರ್ಗಸೂಚಿ ಕಳಿಸಿರುವ ಎನ್​ಎಚ್​ಎಐ, ಅದನ್ನು ಟೋಲ್​ಗಳಲ್ಲಿ ಎಲ್ಲರಿಗೂ ಕಾಣಿಸುವಂತೆ ಡಿಸ್​ಪ್ಲೇ ಮಾಡಲು ಸೂಚಿಸಿದೆ. ಪದೇಪದೆ ಈ ತಪ್ಪು ಮಾಡುವ ವಾಹನಗಳನ್ನು ಬ್ಲ್ಯಾಕ್​ಲಿಸ್ಟ್​ಗೆ ಹಾಕಲೂ ಮುಂದಾಗಿದೆ. ಫಾಸ್​ಟ್ಯಾಗ್​ಗಳನ್ನು ಮಾರಾಟ ಮಾಡುವಾಗಲೇ ವಾಹನ ಮಾಲೀಕರು ಅದನ್ನು ಗಾಜಿನ ಒಳಗೆ ಅಂಟಿಸುತ್ತಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಬ್ಯಾಂಕ್​ಗಳಿಗೂ ನಿರ್ದೇಶನ ನೀಡಿದೆ. ಎನ್​ಎಚ್​ಎಐನ ಈ ಕ್ರಮ ಸಮರ್ಥನೀಯವಾಗಿದೆ. ಆದರೆ, ಇದರ ಜತೆಗೆ ಎನ್​ಎಚ್​ಎಐ ತುರ್ತಾಗಿ ಗಮನಹರಿಸಲೇಬೇಕಾದ, ಫಾಸ್​ಟ್ಯಾಗ್​ಗೆ ಸಂಬಂಧಿಸಿದ ಇನ್ನೂ ಹಲವು ಸಮಸ್ಯೆಗಳಿವೆ. ಅವು ಪ್ರತಿದಿನವೂ ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಗಳು. ವಾಹನ ಸವಾರರ ಕಡೆಯಿಂದ ಯಾವುದೇ ತಪ್ಪು ಇಲ್ಲದಿದ್ದರೂ ಕೆಲವು ಟೋಲ್​ಗಳಲ್ಲಿ ಬೇಗ ಫಾಸ್​ಟ್ಯಾಗ್ ರೀಡ್ ಆಗುವುದಿಲ್ಲ. ಕೆಲವೊಮ್ಮೆ ಸವಾರರ ಖಾತೆಯಿಂದ ಎರಡೆರಡು ಬಾರಿ ಶುಲ್ಕ ಕಟ್ ಆಗುತ್ತದೆ. ಅದು ಗೊತ್ತಾಗುವ ಹೊತ್ತಿಗೆ ಸವಾರರು ಹಲವು ಕಿಮೀ ಕ್ರಮಿಸಿರುತ್ತಾರೆ. ಮತ್ತೆ ಕೆಲವು ಬಾರಿ, ಹೆದ್ದಾರಿಗೆ ವಾಹನವನ್ನು ತರದೇ ಇದ್ದರೂ ಏಕಾಏಕಿ ಫಾಸ್​ಟ್ಯಾಗ್ ಬ್ಯಾಲೆನ್ಸ್ ಕಡಿಮೆ ಆಗಿಬಿಡುತ್ತದೆ. ಇಂತಹ ಹಲವು ಸಮಸ್ಯೆಗಳನ್ನು ವಾಹನ ಸವಾರರು ಪ್ರತಿನಿತ್ಯ ಅನುಭವಿಸುತ್ತಿದ್ದಾರೆ. ಅದರ ಬಗ್ಗೆಯೂ ಎನ್​ಎಚ್​ಎಐ ಗಮನ ಹರಿಸಬೇಕಾಗಿದೆ.
“ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದ್ರೆ….” ವಿಚ್ಛೇದನ ಖಚಿತಪಡಿಸಿದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 17 =
Remember me
