‘ಜನರ ಸಮಸ್ಯೆಗಳನ್ನು ನಿವಾರಿಸುತ್ತೇವೆ. ಜನರಿಗೆ ದನಿಯಾಗುತ್ತೇವೆ’ ಎಂದೆಲ್ಲ ಭರವಸೆಯ ಸುರಿಮಳೆಯನ್ನು ಹರಿಸುವ ಜನಪ್ರತಿನಿಧಿಗಳು ಜನಹಿತಾಸಕ್ತಿಯ ವಿಷಯಗಳನ್ನು ಬದಿಗಿರಿಸಿ, ರಾಜಕೀಯ ಲಾಭವನ್ನೇ ಗಮನದಲ್ಲಿಟ್ಟುಕೊಂಡು ವ್ಯವಹರಿಸುತ್ತಿರುವುದು ದುರದೃಷ್ಟಕರ ಬೆಳವಣಿಗೆ. ಪ್ರತಿ ಬಾರಿಯೂ ವಿಧಾನ ಮಂಡಲದ ಕಲಾಪ ಆರಂಭವಾದಾಗ ತಮ್ಮ ಭಾಗದ ಸಮಸ್ಯೆಗಳು ಸದನದಲ್ಲಿ ಪ್ರತಿಧ್ವನಿಸಬಹುದು, ಆ ಮೂಲಕವಾದರೂ ಸರ್ಕಾರದಿಂದ ಅವುಗಳಿಗೆ ಪರಿಹಾರ ಸಿಗಬಹುದು ಎಂದು ಜನರು ನಿರೀಕ್ಷಿಸುತ್ತಾರೆ. ಆದರೆ, ನಿರೀಕ್ಷೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವಲ್ಲಿ ಆಡಳಿತ ಮತ್ತು ವಿರೋಧ ಪಕ್ಷ ಎರಡೂ ವಿಫಲವಾಗಿವೆ.
ಈ ಬಾರಿಯ ವಿಧಾನಸಭೆ ಅಧಿವೇಶನವು ಗದ್ದಲದಲ್ಲೇ ಮುಕ್ತಾಯಗೊಂಡಿದೆ. ಇಡೀ ಅಧಿವೇಶನದ ಕಲಾಪವನ್ನು ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣಗಳು ಆಪೋಶನ ತೆಗೆದುಕೊಂಡಿವೆ. ತೀವ್ರಸ್ವರೂಪದ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳ ಜನರು ತೊಂದರೆ ಅನುಭವಿಸುತ್ತಿರುವುದು, ಬೆಳೆ ನಷ್ಟ, ಆಸ್ತಿಪಾಸ್ತಿ ಹಾನಿಗೆ ಈಡಾಗಿರುವುದು ಮುಂತಾಗಿ ಯಾವ ವಿಷಯವೂ ಅಧಿವೇಶನದಲ್ಲಿ ಚರ್ಚೆಗೆ ಬರದಿರುವುದು ದುರದೃಷ್ಟಕರ. ಇದರ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಅಧಿವೇಶನ ಮುಂದೂಡಿದ ಬಳಿಕ ಸಂಪ್ರದಾಯದಂತೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸುದ್ದಿಗೋಷ್ಠಿ ನಡೆಸಿ, ಕಲಾಪದ ವಿವರಗಳನ್ನು ನೀಡಿದ್ದಾರೆ. ದುರದೃಷ್ಟವಶಾತ್ ಯಾವುದೇ ಚರ್ಚೆ, ಸಮಾಲೋಚನೆ ಇಲ್ಲದೆ ಗದ್ದಲದಲ್ಲೇ ಹಲವು ಮಹತ್ವದ ವಿಧೇಯಕಗಳು ಅಂಗೀಕಾರಗೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ‘ಜನರ ತೆರಿಗೆ ಹಣದಲ್ಲಿ ಹೀಗೆ ಗದ್ದಲ ನಡೆದರೆ ನಾವು ಜನರಿಗೆ ಏನು ಉತ್ತರ ಹೇಳಬೇಕು’ ಎಂದೂ ಪ್ರಶ್ನಿಸಿದ್ದಾರೆ. ಹೊರಟ್ಟಿ ಅವರೇ ಹೇಳಿರುವ ಪ್ರಕಾರ, ಸದಸ್ಯರು ಅಧಿವೇಶನದಲ್ಲಿ ಕೇಳಿದ ಒಂದು ಪ್ರಶ್ನೆಗೆ ಉತ್ತರ ಕೊಡಿಸಲು ಸುಮಾರು 92 ಸಾವಿರ ರೂ. ಖರ್ಚಾಗುತ್ತದೆ. ಈ ವೆಚ್ಚ ಪ್ರತಿ ಪ್ರಶ್ನೆಗೂ ಅದರ ಸ್ವರೂಪದ ಆಧಾರದ ಮೇಲೆ ಬದಲಾಗುತ್ತದೆ ಎಂಬುದೇನೋ ನಿಜ. ಆದರೆ ಇದರ ನೇಪಥ್ಯದಲ್ಲಿ ಹಲವಾರು ನೌಕರರು, ಅಧಿಕಾರಿಗಳು ಉತ್ತರ ಒದಗಿಸುವುದಕ್ಕಾಗಿ ಕೆಲಸ ಮಾಡಿರುತ್ತಾರೆ. ಸದನದಲ್ಲಿ ಬರುವ ಪ್ರಶ್ನೆಗಳು, ಗಮನ ಸೆಳೆಯುವ ಸೂಚನೆಗಳಿಂದಾಗಿ ಜನರ ಕೆಲಸಗಳೂ ತ್ವರಿತ ಗತಿಯಲ್ಲಿ ಆಗುತ್ತವೆ. ಆದರೆ ಗದ್ದಲದಿಂದಾಗಿ ಪ್ರಶ್ನೆಗಳೇ ಪ್ರಸ್ತಾಪವಾಗದಿದ್ದರೆ, ಚರ್ಚೆಯಾಗದಿದ್ದರೆ ಜನರ ಸಮಸ್ಯೆ ಬಗೆಹರಿಯುವುದೆಂತು? ಅಧಿಕಾರಶಾಹಿ ಜಡತ್ವ ಕಳೆದುಕೊಂಡು ಚುರುಕಾಗುವುದು ಹೇಗೆ? ಶಾಸನಸಭೆಗಳು ಉತ್ತಮವಾಗಿ ನಡೆದರೆ ಜನರಿಗೆ ಸ್ವಲ್ಪವಾದರೂ ನ್ಯಾಯ ದೊರಕಿಸಲು ಸಾಧ್ಯ ಎಂಬುದನ್ನು ಎಲ್ಲ ಚುನಾಯಿತ ಜನಪ್ರತಿನಿಧಿಗಳೂ ಅರಿತುಕೊಳ್ಳಬೇಕು.
ಜನರ ತೆರಿಗೆ ಹಣದಲ್ಲಿಯೇ ಕಲಾಪ ನಡೆಯುತ್ತದೆ, ಜನಪ್ರತಿನಿಧಿಗಳಿಗೆ ಸಂಬಳ, ಸೌಲಭ್ಯ ದೊರೆಯುತ್ತದೆ. ಆದರೆ, ಅಧಿವೇಶನದ ಕಲಾಪಗಳು ಬರೀ ರಾಜಕೀಯ ಕೋಲಾಹಲದಲ್ಲೇ ಮುಗಿದುಹೋಗುತ್ತಿರುವುದು, ಆರೋಪ-ಪ್ರತ್ಯಾರೋಪದಲ್ಲೇ ಕಳೆದು ಹೋಗುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಚರ್ಚೆಯೇ ನಡೆಯದೆ ವಿಧೇಯಕಗಳು ಅಂಗೀಕಾರಗೊಳ್ಳುವುದು ಯಾವ ಸಂದೇಶ ರವಾನಿಸುತ್ತದೆ? ಇನ್ನಾದರೂ, ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನದನಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಕಚೇರಿ ಒಳಗಡೆ ಕೊಡೆ ಹಿಡಿದು ಕೆಲಸ ಮಾಡುವ ಸಿಬ್ಬಂದಿ; ಕಾರಣ ಕೇಳಿದ್ರೆ ಹೀಗೂ ಉಂಟಾ ಅಂತಿರಾ..!

ರಾಮನಗರ ಹೆಸರು ತೆಗೆದವರು ಸರ್ವನಾಶ ಆಗುತ್ತಾರೆ: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
