ಕೇಂದ್ರ ಸರ್ಕಾರ ಮತ್ತು ಕೆಲವು ರೈತ ಸಂಘಟನೆಗಳ ನಡುವಿನ ದೀರ್ಘಕಾಲೀನ ಸಂಘರ್ಷವು ಕೊನೆಗೊಳ್ಳುವ ಆಶಾವಾದ ಈಗ ಮೂಡಿದೆ. ರೈತರ ಸಮಸ್ಯೆಗಳನ್ನು ಸಾದ್ಯಂತವಾಗಿ ಆಲಿಸಿ ಪರಿಹರಿಸಲು ಸುಪ್ರೀಂ ಕೋರ್ಟ್ ಸೋಮವಾರ ತಜ್ಞರ ಸಮಿತಿಯೊಂದನ್ನು ರಚಿಸಿದೆ. ಪಂಜಾಬ್- ಹರಿಯಾಣಾ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನವಾಬ್​ಸಿಂಗ್ ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ.
ದೆಹಲಿ ಹೊರವಲಯದ ಶಂಭು ಗಡಿ ಸಮೀಪ ಕೆಲವು ರೈತ ಸಂಘಟನೆಗಳ ಸದಸ್ಯರು ಸುಮಾರು ಆರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ದೊರಕಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ರೈತರು ಈ ವರ್ಷದ ಫೆಬ್ರವರಿಯಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಹಾಗೆ ನೋಡಿದರೆ ಇದು ಈ ರೈತರ ಮೊದಲ ಪ್ರತಿಭಟನೆ ಅಲ್ಲ. ಕೆಲವು ವರ್ಷಗಳ ಹಿಂದೆ ಕೂಡ ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು ಈ ರೈತರು ನಡೆಸಿದ್ದರು. ಪ್ರತಿಭಟನೆಯಲ್ಲಿ ಇಡೀ ದೇಶದ ರೈತರ ಪ್ರಾತಿನಿಧಿತ್ವ ಇಲ್ಲ. ಇದರಲ್ಲಿ ಹೆಚ್ಚಾಗಿ ಪಂಜಾಬ್, ಹರಿಯಾಣಾ, ಪಶ್ಚಿಮ ಉತ್ತರಪ್ರದೇಶ ಮುಂತಾದ ಪ್ರದೇಶಗಳ ರೈತರೇ ಇದ್ದಾರೆ. ದೆಹಲಿಯನ್ನು ಸಂರ್ಪಸುವ ಗಡಿ ರಸ್ತೆಯಲ್ಲಿ ಇವರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸುವುದರಿಂದ ಆ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ವ್ಯತ್ಯಯ ಆಗುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯೂ ಆಗಿದೆ. ರೈತರು ಹಲವು ಬಾರಿ ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿದ್ದೂ, ಕೇಂದ್ರ ಸರ್ಕಾರವು ಈ ರೈತರನ್ನು ಇಲ್ಲಿಂದ ತೆರವುಗೊಳಿಸಲು ಪೊಲೀಸ್ ಬಲವನ್ನು ಪ್ರಯೋಗಿಸಿದ್ದೂ ಉಭಯತ್ರರ ಮಧ್ಯೆ ಸಂಘರ್ಷ ಏರ್ಪಡಲು ಕಾರಣವಾಯಿತು. ವಿಶ್ವಾಸದ ಕೊರತೆ ಇರುವುದರಿಂದ ಕೊನೆಗೆ ಅದು ಪರಸ್ಪರ ಮಾತುಕತೆಯನ್ನೂ ನಡೆಸಲು ಸಾಧ್ಯವಾಗದಷ್ಟು ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಹಾಗಾಗಿ ಸಮಸ್ಯೆ ಬಹುಕಾಲದಿಂದ ಬಗೆಹರಿಯದೇ ಉಳಿದಿದೆ.
ಈ ಹಿನ್ನೆಲೆಯಲ್ಲಿಯೇ ಸುಪ್ರೀಂ ಕೋರ್ಟ್ ಈಗ ಈ ಸಮಸ್ಯೆ ಬಗೆಹರಿಸಲು ತಜ್ಞರ ಸಮಿತಿಯನ್ನು ರಚಿಸಿದೆ. ಒಂದು ವಾರದಲ್ಲಿ ಆ ಸಮಿತಿ ಕಾರ್ಯಾರಂಭ ಮಾಡಲಿದೆ. ಸಮಿತಿಯ ಎದುರು ಸರ್ಕಾರದ ಪ್ರತಿನಿಧಿಗಳು ಮತ್ತು ರೈತ ಸಂಘಟನೆಗಳ ಪದಾಧಿಕಾರಿಗಳು ಹಾಜರಾಗಬೇಕಾಗುತ್ತದೆ. ಆಗಲಾದರೂ ಇವರೆಲ್ಲರೂ ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು, ಪ್ರಾಮಾಣಿಕ ನಿಲುವುಗಳನ್ನು ದಾಖಲಿಸಬೇಕು. ಯಾವುದೇ ಕಾರಣಕ್ಕೂ ಈ ವಿಷಯವನ್ನು ಪುನಃ ರಾಜಕೀಯಗೊಳಿಸಬಾರದು. ಆಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯವಾಗುತ್ತದೆ.
ಆಜಾನ್ ಧ್ವನಿ ಕೇಳಿ ಭಾಷಣ ನಿಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:15 + nineteen =
Remember me
