ಕಳೆದ ಕೆಲ ದಿನಗಳಲ್ಲಿ ಸಂಭವಿಸಿರುವ ಅಹಿತಕರ ಘಟನೆಗಳು, ಅಪರಾಧಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಡೆಹ್ರಾಡೂನ್​ನ ಪ್ರಸಿದ್ಧ ರೆಸ್ಟೋರಂಟ್​ನ ಮಹಿಳೆಯರ ವಾಷ್​ರೂಮ್ಲ್ಲಿ ಹಿಡನ್ ಕ್ಯಾಮರಾ ಪತ್ತೆ; ಬೆಂಗಳೂರಿನ ಥಿಯೇಟರ್​ನ ವಾಷ್​ರೂಮ್ೆ ಹೋಗಿದ್ದ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡಲು ಹದಿಹರೆಯದ ಹುಡುಗರ ಯತ್ನ; ಕ್ಯಾಬ್​ನಲ್ಲಿ ಚಾಲಕನಿಂದ ಮಹಿಳೆ ಜತೆ ಅಸಭ್ಯ ವರ್ತನೆ… ಮಾಧ್ಯಮಗಳಲ್ಲಿ ಇಂತಹ ವರದಿಗಳು ಇತ್ತೀಚೆಗೆ ಪ್ರತಿದಿನವೂ ಕಣ್ಣಿಗೆ ಬೀಳತೊಡಗಿವೆ. ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿರುವ ದುರುಳರ, ಸಮಾಜಘಾತಕರ ಸಂಖ್ಯೆ ಹೆಚ್ಚಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯೇ ಸರಿ.
ಈ ಘಟನೆಗಳು ಕಾನೂನು-ಸುವ್ಯವಸ್ಥೆ ಬಗ್ಗೆ ದುಷ್ಕರ್ವಿುಗಳಲ್ಲಿ ಭಯ ಇಲ್ಲದಿರುವುದರ ದ್ಯೋತಕ. ಅಪರಾಧ ನಡೆದಾಗ ಮತ್ತು ಆ ಬಗ್ಗೆ ನಾಗರಿಕ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸಿದಾಗ ಸಚಿವರು, ಹಿರಿಯ ಅಧಿಕಾರಿಗಳು ‘ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಆಶ್ವಾಸನೆ ನೀಡುತ್ತಾರಷ್ಟೇ. ಕೆಲ ದಿನಗಳಲ್ಲೇ ಪ್ರಕರಣವನ್ನು ಜನರು ಕ್ರಮೇಣ ಮರೆತು ಬಿಡುತ್ತಾರೆ ಹಾಗೂ ಇನ್ನೊಂದು ಅಹಿತಕರ ಘಟನೆ ನಡೆಯುವವರೆಗೆ ವ್ಯವಸ್ಥೆ ನಿರ್ಲಿಪ್ತವಾಗಿರುತ್ತದೆ. ಹೀಗಾಗಿಯೇ, ದುರುಳರ ಮನೋಬಲ ಹೆಚ್ಚುತ್ತಿದ್ದು, ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ.
ಇಂಥ ಘಟನೆಗಳನ್ನು ವಿಚಾರಣೆ, ತನಿಖೆಯ ಕೋನದಿಂದಷ್ಟೇ ನೋಡದೆ ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ಗೌರವಭಾವನೆ ಕುಸಿಯುತ್ತಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆಯೂ ಪ್ರಾಮಾಣಿಕ ಅವಲೋಕನ ನಡೆಯಬೇಕಿದೆ. ಏಕೆಂದರೆ, ಮಹಿಳೆಗೆ ಸುರಕ್ಷಿತ ವಾತಾವರಣವನ್ನು ನಿರ್ವಿುಸುವುದು ಎಲ್ಲರ ಕರ್ತವ್ಯ. ಮಹಿಳೆಯರ ವಿರುದ್ಧದ ಕೃತ್ಯಗಳ ತಡೆಗೆ, ಕಠಿಣ ಕಾನೂನು ಕ್ರಮದ ಭಯ ಮೂಡಿಸಬೇಕು ಎಂಬುದು ಒಂದೆಡೆಯಾದರೆ, ಮಕ್ಕಳನ್ನು ಬೆಳೆಸುವಾಗಲೇ ಸಂಸ್ಕಾರ ಕಲಿಸಬೇಕೆಂಬುದು ಇನ್ನೊಂದು ಮಹತ್ವದ ಆಯಾಮ. ಹಿಂದೆಲ್ಲ ಮನೆಗಳಲ್ಲೇ ಇಂಥ ಶಿಕ್ಷಣ, ಸಂಸ್ಕಾರ ನೀಡಲಾಗುತ್ತಿತ್ತು. ಹೆಣ್ಣನ್ನು ಸೋದರಿ ಭಾವದಿಂದ, ಮಾತೃಭಾವದಿಂದ ಕಾಣಬೇಕು, ಗೌರವಿಸಬೇಕು ಅಲ್ಲದೆ ಹೆಣ್ಣು ಕಷ್ಟದಲ್ಲಿದ್ದರೆ ನೆರವು ನೀಡಬೇಕು ಎಂಬ ತಿಳಿವಳಿಕೆಯನ್ನು, ನೈತಿಕ ಮೌಲ್ಯವನ್ನು ಹಿರಿಯರು ಮಕ್ಕಳಲ್ಲಿ ಬಿತ್ತುತ್ತಿದ್ದರು. ಇಂದಿನ ದಿನಗಳಲ್ಲಿ ಕುಟುಂಬ ವ್ಯವಸ್ಥೆ ಕೂಡ ಬದಲಾಗಿದ್ದು, ಮಕ್ಕಳಿಗೆ ಹೆಚ್ಚು ಸಮಯ ಕೊಡಲು ಪಾಲಕರಿಗೆ ಸಾಧ್ಯವಾಗುತ್ತಿಲ್ಲ. ಶಾಲಾಶಿಕ್ಷಣದಲ್ಲೂ ಮೌಲ್ಯಗಳ ಕೊರತೆ ಢಾಳಾಗಿ ಕಾಣುತ್ತಿದೆ. ಪರಿಣಾಮ, ಹದಿಹರೆಯದ ಮಕ್ಕಳು, ಯುವಕರು ಎಷ್ಟೋ ಬಾರಿ ಅವರಿಗೇ ಗೊತ್ತಿಲ್ಲದಂತೆ ದಾರಿ ತಪು್ಪತ್ತಾರೆ ಎಂಬುದು ಕಹಿವಾಸ್ತವ. ಹೀಗಾಗಿ, ಮಹಿಳೆಯರ ಬಗೆಗೆ ನಮ್ಮ ಸಂಸ್ಕೃತಿಯಲ್ಲಿ ಇರುವ ಉನ್ನತ ಸ್ಥಾನ, ಗೌರವವನ್ನು ತಿಳಿಸಿಕೊಟ್ಟು, ಅದನ್ನು ನಿತ್ಯಾನುಷ್ಠಾನಕ್ಕೆ ತರಬೇಕಿದೆ. ಮತ್ತೊಂದೆಡೆ, ಕಾನೂನು ಸುವ್ಯವಸ್ಥೆಯು ಬಿಗಿಗೊಂಡು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಆ ಶಿಕ್ಷೆಯ ಕುರಿತಂತೆ ಸಮಾಜದಲ್ಲಿ ಚರ್ಚೆಯೂ ಏರ್ಪಟ್ಟಾಗ ಜಾಗೃತಿ ಉಂಟಾಗಿ, ಪರಿಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆ ಕಾಣಬಹುದು. ಈ ನಿಟ್ಟಿನಲ್ಲಿ ಪರಿಣಾಮಕಾರಿ ಮತ್ತು ಸಂಘಟಿತ ಪ್ರಯತ್ನಗಳು ನಡೆಯಬೇಕಿರುವುದು ಈಗಿನ ಅಗತ್ಯವೇ ಹೌದು.
ಡಿಸೆಂಬರ್‌ನಲ್ಲಿ ಗಗನಯಾನ ಮೊದಲ ಪರೀಕ್ಷಾರ್ಥ ಉಡಾವಣೆ: ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
