ಕೇಂದ್ರ ಸರ್ಕಾರಪ್ರಕಟಿಸಿರುವ ಹೊಸ ಶಿಕ್ಷಣ ನೀತಿಯಲ್ಲಿ 1ರಿಂದ 5ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂಬ ನಿಯಮ ಅಡಕವಾಗಿದೆ. ಇದರ ಕಾರ್ಯಸಾಧುತ್ವದ ಪೂರ್ವಾಪರ ವಿಮರ್ಶೆ, ಚಿಂತನೆ ಆಗಿದೆಯೋ ಇಲ್ಲವೋ ಸ್ಪಷ್ಟವಾಗುತ್ತಿಲ್ಲ. ಏಕೆಂದರೆ ಭಾರತದಂಥ ವಿಶಾಲ ದೇಶದಲ್ಲಿ ‘ಮಾತೃಭಾಷೆ’ಯ ಪರಿಕಲ್ಪನೆ ಅಸ್ಪಷ್ಟವೂ, ಸಂದಿಗ್ಧವೂ ಆಗಿದೆ. ಆಧುನಿಕ ಭಾರತದಲ್ಲಿ ಯಾರು ಬೇಕಾದರೂ, ಎಲ್ಲಿ ಬೇಕಾದರೂ ಹೋಗಿ ನೆಲೆಸಬಹುದು ಎಂಬ ವಾತಾವರಣವಿದೆ. ಒಂದು ಉದಾಹರಣೆ ಗಮನಿಸೋಣ. ಒಬ್ಬ ಬಂಗಾಲಿ ಯುವಕ ತಮಿಳು ಯುವತಿಯನ್ನು ಮದುವೆಯಾಗಿ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸುತ್ತಾನೆ. ಗಂಡನ ಭಾಷೆ ಹೆಂಡತಿಗೆ, ಹೆಂಡತಿಯ ಭಾಷೆ ಗಂಡನಿಗೆ ಬರುವುದಿಲ್ಲ. ಪರಸ್ಪರ ಇಂಗ್ಲಿಷ್ ಅಥವಾ ಹಿಂದಿ ಮಾತನಾಡುತ್ತಾರೆ. ತಾಯಿ ಮಗುವನ್ನು ತಮಿಳಿನಲ್ಲಿ, ತಂದೆ ಬಂಗಾಲಿಯಲ್ಲಿ ಮಾತನಾಡಿಸಬಹುದು. ಮಗು ಶಾಲೆಯಲ್ಲಿ ಇಂಗ್ಲಿಷ್, ಹಿಂದಿ ಕಲಿಯುತ್ತದೆ. ಅಂದರೆ ಮಗುವಿಗೆ ಏಕಕಾಲಕ್ಕೆ ಅನೇಕ ಭಾಷೆಗಳ ಪರಿಚಯ ಆಗುತ್ತದೆ. ಇವುಗಳಲ್ಲಿ ಅದರ ಮಾತೃಭಾಷೆ ಯಾವುದು? ಇಂಥ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಎಂದರೇನು?
ನಮ್ಮ ದೇಶದಲ್ಲಿ ಭಾಷಾವಾರು ಪ್ರಾಂತ ರಚನೆ ಆದ ಮೇಲೆ ಒಂದೊಂದು ರಾಜ್ಯವೂ ಇತರ ಭಾಷಿಗರನ್ನು ಹೊಂದಿದ್ದರೂ. ಪ್ರಧಾನವಾಗಿ ಒಂದೊಂದು ಭಾಷೆಯನ್ನು ಅಭಿವೃದ್ಧಿ ಪಡಿಸಿ ಪ್ರಚಾರ ಮಾಡುತ್ತಿವೆ. ಬೆಂಗಳೂರಿನಲ್ಲಿ ನೆಲೆಸಿದವರಿಗೆ ಕರ್ನಾಟಕದ ಭಾಷೆಯಾದ ಕನ್ನಡವನ್ನು ಕಲಿಸುವುದು ಮುಖ್ಯ. ಇದು ಅವರಿಗೂ, ನಾಡಿಗೂ ಹಿತ. ಅಂದರೆ ಪ್ರಾಥಮಿಕ ಶಿಕ್ಷಣವನ್ನು ಆಯಾ ಪ್ರಾದೇಶಿಕ ಭಾಷೆಯಲ್ಲಿ ನೀಡಬೇಕು. ಪ್ರಾದೇಶಿಕ ಭಾಷೆಗಳೇ ಆಯಾ ರಾಜ್ಯದಲ್ಲಿ ಪ್ರಮುಖ. ಹಾಗಾಗಿ ಶಿಕ್ಷಣ ನೀತಿಯಲ್ಲಿ ‘ಮಾತೃಭಾಷೆ’ ಎಂಬುದನ್ನು ಪ್ರಾದೇಶಿಕ ಭಾಷೆಯಾಗಿ ತಿದ್ದುಪಡಿ ಮಾಡಬೇಕು.
| ಡಾ. ಎಸ್.ಆರ್. ಲೀಲಾ ವಿಧಾನ ಪರಿಷತ್ ಮಾಜಿ ಸದಸ್ಯರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
