ಬೆಂಗಳೂರು:ಮುಂದಿನ ಶೈಕ್ಷಣಿಕ ಸಾಲಿನಲ್ಲಿ (2023-24) ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಅಗತ್ಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಸ್ವಚ್ಛತೆ, ನೈರ್ಮಲ್ಯ, ನಿಗದಿತ ಪ್ರಮಾಣ, ಗುಣಮಟ್ಟ, ಪೌಷ್ಟಿಕತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡುವುದು ಹಾಗೂ ಶಾಲಾ ಪ್ರಾರಂಭೋತ್ಸವದಂದು ಮಕ್ಕಳಿಗೆ ಸಿಹಿ ಹಂಚಿಕೆಯೊಂದಿಗೆ ಬಿಸಿಯೂಟ ವಿತರಿಸುವಂತೆ ಇಲಾಖೆ ಆಯುಕ್ತ ಡಾ. ಆರ್. ವಿಶಾಲ್ ಸೂಚಿಸಿದ್ದಾರೆ.
ಇದನ್ನೂ ಓದಿ:ಮಕ್ಕಳಿಗೆ RCB ಜರ್ಸಿ ತೊಡಿಸಿ ಫೋಟೋಶೂಟ್ ಮಾಡಿಸಿದ ನಟಿ ಅಮೂಲ್ಯ
ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಜಾ ಅವಧಿಯಲ್ಲಿ ಉಳಿಕೆಯಾಗಿರುವ ಅಕ್ಕಿ, ಗೋಧಿ, ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ ಮತ್ತು ಹಾಲಿನ ಪುಡಿ ಸೇರಿ ಇತರೆ ಪದಾರ್ಥಗಳನ್ನು ಪರಿಶೀಲಿಸಿ ದಾಖಲಿಸುವುದು.ಅವಧಿ ಮುಗಿದ ಪದಾರ್ಥಗಳಿದ್ದರೆ, ಅವುಗಳನ್ನು ಬಿಸಿಯೂಟಕ್ಕೆ ಬಳಸಬಾರದು. ಕಳಪೆಯಾಗಿರುವ, ಹುಳ ತಿಂದ, ಗುಣಮಟ್ಟ ಹಾಳಾಗಿರುವ ಮತ್ತು ಕೊಳೆತ ಆಹಾರ ಪದಾರ್ಥಗಳನ್ನು ದಾಸ್ತಾನಿನಿಂದ ಬೇರ್ಪಡಿಸಿ ಹೊರ ಹಾಕುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:ಸುಡು ಬೇಸಿಗೆ; ಕಾರಿಗೆ ಹಸುವಿನ ಸಗಣಿ ಲೇಪಿಸಿದ ವೈದ್ಯ
ಅಡುಗೆ ಸಿಬ್ಬಂದಿಯು 60 ವರ್ಷ ಪೂರ್ಣಗೊಳಿಸಿ ನಿವೃತ್ತಿ ಹೊಂದಿದ್ದಲ್ಲಿ ಅವರ ಖಾಲಿ ಸ್ಥಾನಕ್ಕೆ ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೊಸ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಅವರ ಮಾಹಿತಿಯನ್ನು ಇಲಾಖೆಗೆ ನೀಡಿ ಮಾಸಿಕ ವೇತನ ಬಿಡುಗಡೆಗೆ ಕ್ರಮ ವಹಿಸಬೇಕು.ಜಿಲ್ಲಾ ಮತ್ತು ತಾಲ್ಲೂಕುವಾರು ಬೇಡಿಕೆ ಪಟ್ಟಿಯನ್ನು ಸಿದ್ಧಪಡಿಸಿ ಹಾಲಿನ ಪುಡಿ ಸರಬರಾಜು ಮಾಡುವ ಹಾಲಿನ ಘಟಕಕ್ಕೆ ಕಳುಹಿಸಿ ಮೇ ಮೊದಲ ವಾರದೊಳಗೆ ಶಾಲೆಗಳಲ್ಲಿ ಸ್ವೀಕರಿಸುವ ಕುರಿತು ಕ್ರಮ ವಹಿಸಬೇಕು.
ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಸ್ವಯಂ ಸೇವಾ ಸಂಸ್ಥೆಗಳು ವಾರ್ಷಿಕ ಒಡಂಬಡಿಕೆ ಮಾಡಿಕೊಂಡು ಮುಂದುವರಿಸುವ ಕುರಿತು ಕ್ರಮ ಕೈಗೊಳ್ಳಬೇಕು. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಒಡಂಬಡಿಕೆಯನ್ನು ಜಿಲ್ಲಾ ಪಂಚಾಯಿತಿಯಲ್ಲಿ ನವೀಕರಣ ಮಾಡಿಕೊಂಡು ಸೇವೆಯನ್ನು ಮುಂದುವರಿಸುವುದು ಎಂದು ತಿಳಿಸಿದ್ದಾರೆ.
BJPಯಲ್ಲಿ ಟಿಕೆಟ್ ಹಂಚಿಕೆ ವ್ಯಕ್ತಿಗತ ನಿರ್ಧಾರವಲ್ಲ: ಶೆಟ್ಟರ್ ಹೇಳಿಕೆ ವಿರುದ್ಧ ಗುಡುಗಿದ ಮಹೇಶ ಟೆಂಗಿನಕಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 15 =
Remember me
