ಬೆಂಗಳೂರು :ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಕಾಲೇಜುಗಳಲ್ಲಿ ಸುರಕ್ಷತಾ ಉಪಕರಣಗಳನ್ನು ಲಭ್ಯವಿರುವ ಅನುದಾನದಲ್ಲಿ ಖರೀದಿಸಲು ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಗೆ ಸೂಚನೆ ನೀಡಿದೆ. ಉನ್ನತ ಶಿಕ್ಷಣ ಇಲಾಖೆಯ ಪ್ರಕಾರ ನ.17ರಿಂದ ಕಾಲೇಜುಗಳನ್ನು ತೆರೆಯಬೇಕಿದೆ.
ಈ ವೇಳೆ ಸುರಕ್ಷತಾ ಕ್ರಮ ಅನುಸರಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಸ್ಯಾನಿಟೈಸರ್ ಮತ್ತು ಸ್ಟಾಂಡ್, ಥರ್ಮಲ್ ಸ್ಕಾೃನರ್ ಮತ್ತು ಪಲ್ಸ್ ಆಕ್ಸೋಮೀಟರ್ ಖರೀದಿಸಬೇಕಾಗಿದೆ. ಪ್ರತಿ ಕಾಲೇಜು 500 ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲ ಉಪಕರಣಗಳನ್ನು ಹೊಂದಿರುವಂತೆ ಕನಿಷ್ಠ 1 ಗರಿಷ್ಠ 3 ಯೂನಿಟ್‌ಗಳನ್ನು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರ ಪಿ.ಡಿ.ಖಾತೆಯ ಸಂಘ ಶುಲ್ಕ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ಸಿಸಿಟೆಕ್‌ನಲ್ಲಿ ಲಭ್ಯವಿರುವ ಅನುದಾನ ಉಪಯೋಗಿಸಿಕೊಂಡು ಖರೀದಿಸಬೇಕು. ಈ ವೇಳೆ ಕೆಟಿಪಿಪಿ ನಿಯಮಾನುಸಾರ ಖರೀದಿಸಿ, ಉಪಯೋಗಿಸಬೇಕು. ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಂಶುಪಾಲರ ಪಿ.ಡಿ.ಖಾತೆಯಲ್ಲಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕೆಂದು ಸೂಚಿಸಿದೆ.
ಒಪ್ಪಿಗೆ ಪತ್ರ:ಭೌತಿಕ ತರಗತಿಗಳಿಗೆ ಹಾಜರಾಬೇಕಾದರೆ ವಿದ್ಯಾರ್ಥಿಗಳು ತಮ್ಮ ಪಾಲಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಒಪ್ಪಿಗೆ ಪತ್ರದ ಮಾದರಿಯನ್ನು ರೂಪಿಸಿ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಪಾಲಕರ ಸಹಿ ಮಾಡಿಸಿಕೊಂಡು ಕಾಲೇಜಿಗೆ ಸಲ್ಲಿಸಬಹುದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
