
ಬೆಂಗಳೂರು:ಸೆರೆಮನೆಯಲ್ಲಿದ್ದ ಶಿಕ್ಷಣವನ್ನು ಅನೇಕ ಸಾಧಕರು ವಿಮೋಚನೆ ಮಾಡಿದರು. ವಿಮೋಚನೆಗೊಂಡ ಶಿಕ್ಷಣ ಮಣ್ಣಿನ ಮನೆಗಳಿಗೆ ಬಂತು, ಗುಡಿಸಲುಗಳಿಗೆ ಬಂತು, ಮಹಿಳೆಯರಿಗೆ ಬಂತು ಈ ಮುಖಾಂತರ ನಮಗೆಲ್ಲ ಆತ್ಮವಿಶ್ವಾಸವನ್ನು ತುಂಬಿತು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಇತ್ತೀಚೆಗೆ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಮಂಗಳ ಮಂಟಪ ಸಭಾಂಗಣದಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲಾ ಉಪನಿರ್ದೇಶಕ ಎ. ಆನಂದರಾಜ್ ಅವರ ಅಭಿನಂದನಾ ಸಮಾರಂಭದಲ್ಲಿ ‘ಆನಂದಮಾರ್ಗ’ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ, ಮಾತನಾಡಿದರು.

ಶಿಕ್ಷಣದಿಂದ ಮಣ್ಣಿನ ಮನೆಗಳ ಮೌನ ಮಾತನಾಡಲು ಶುರು ಮಾಡಿತು. ಹೆಣ್ಣಿನ ಮನಸ್ಸು ಬಂಧಮುಕ್ತವಾಯಿತೆಂದು ಹೇಳುತ್ತಾ, ನಿಜವಾದ ಅರ್ಥದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವುದು ಶ್ರೇಷ್ಠವಾದ ಕೆಲಸ. ಶಿಕ್ಷಣದ ಮೂಲಕ ನಮ್ಮೊಳಗಿನ ಮೃಗೀಯತೆಯನ್ನು ಕಳೆದುಕೊಳ್ಳಬೇಕಾಗಿದೆ. ಮೃಗೀಯತೆಯನ್ನು ಕಳೆದುಕೊಳ್ಳುವ ಮಾನಸಿಕ ಸಿದ್ಧತೆಯನ್ನು ಶಿಕ್ಷಕರುಗಳು ಮಾಡಬೇಕಾಗಿದೆ ಎಂದು ಬರಗೂರು ವಿವರಿಸಿದರು.

ಕಾರ್ಯಕ್ರಮದಲ್ಲಿ ಆನಂದರಾಜ್ ದಂಪತಿಗಳನ್ನು ಸನ್ಮಾನಿಸಿ, ‘ಆನಂದಮಾರ್ಗ’ ಅಭಿನಂದನಾ ಗ್ರಂಥವನ್ನು ಅರ್ಪಿಸಲಾಯಿತು. ಸಮಾರಂಭದಲ್ಲಿ ಜಿ. ನಾಗಣ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಶ್ವೇತ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಶೀಲಾ ಪ್ರಕಾಶ್,ರಾಜಗೋಪಾಲ್, ತಿಮ್ಮಯ್ಯ ಮತ್ತಿತರರಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
