ಬೆಂಗಳೂರು/ಜಯಪುರ:ರಾಜ್ಯಾದ್ಯಂತ ಗ್ರಾಮೀಣ ಸರ್ಕಾರಿ ಶಾಲೆ ಮಕ್ಕಳು ಎದುರಿಸುತ್ತಿರುವ ಆನ್​ಲೈನ್ ತರಗತಿ ಸಮಸ್ಯೆಗಳ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಖುದ್ದು ಭೇಟಿ ಪರಿಶೀಲನೆ ನಡೆಸಿದ್ದು, ಸಮಸ್ಯೆಗೆ ಪರಿಹಾರ ಒದಗಿಸಲು ಮಾದರಿಯೊಂದನ್ನು ಸಿದ್ಧಪಡಿಸಿದ್ದಾರೆ. ಅಲ್ಲದೆ, ಶೃಂಗೇರಿ- ಕೊಪ್ಪ ಭಾಗದಲ್ಲಿ ಅದನ್ನು ತಕ್ಷಣವೇ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಶೀಘ್ರದಲ್ಲೇ ರಾಜ್ಯಾದ್ಯಂತ ಅಳವಡಿಸಲು ತೀರ್ವನಿಸಲಾಗಿದೆ.
ನೆಟ್​ವರ್ಕ್ ಸಮಸ್ಯೆಯಿಂದ ಆನ್​ಲೈನ್ ತರಗತಿ ಸಾಧ್ಯವಾಗದೆ ಗ್ರಾಮಿಣ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ‘ವಿಜಯವಾಣಿ’ ಮೂಲಕ ಸಚಿವರಿಗೆ ಆಡಿಯೋ ಸಂದೇಶ ಕಳುಹಿಸಿದ್ದ ಗುಡ್ಡೇತೋಟ ಗ್ರಾ.ಪಂ. ವ್ಯಾಪ್ತಿಯ ಹೊರ್ಲೆ ಗ್ರಾಮದ ವಿದ್ಯಾರ್ಥಿ ಆದರ್ಶನ ಮನೆಗೆ ಆಗಮಿಸಿದ್ದ ಸುರೇಶ್ ಕುಮಾರ್, ಆತನೊಂದಿಗೆ ಚರ್ಚೆ ಮಾಡಿದರು. ಜತೆಗೆ ಹತ್ತಾರು ಹಳ್ಳಿಗಳಲ್ಲಿ ಜನರ ಸಮಸ್ಯೆಗಳಿಗೆ ಕಿವಿಯಾಗಿ ಪರಿಹಾರೋಪಾಯಗಳ ಬಗ್ಗೆಯೂ ಸ್ಥಳದಲ್ಲಿಯೇ ರ್ಚಚಿಸಿ ತೀರ್ವನಿಸಿದರು.
ಪರೋಕ್ಷವಾಗಿ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಗ್ರಾಮೀಣ ಭಾಗದ ಮಕ್ಕಳು ವಿದ್ಯುತ್, ನೆಟ್​ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಮೊಬೈಲ್ ಫೋನ್ ಹೊಂದಿಲ್ಲದ ಲಕ್ಷಾಂತರ ಮಕ್ಕಳು ಇದ್ದಾರೆ. ಹೀಗಾಗಿ ಸಮಸ್ಯೆಗೆ ಸಿಲುಕಿದ ಮಕ್ಕಳನ್ನು ಒಂದು ಕಡೆ ಕ್ಲಸ್ಟರ್ ರೀತಿ ಸೇರಿಸಿ ಅಲ್ಲಿ ಪಾಠಪ್ರವಚನಕ್ಕೆ ಅಡ್ಡಿಯಾಗದಂತೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಮೊದಲ ಪ್ರಯತ್ನವಾಗಿ ಕೊಪ್ಪ ತಾಲೂಕು ಮೇಗೂರಿನ ಆಶ್ರಮ ಶಾಲೆಯಲ್ಲಿ ಸಮಸ್ಯೆಗೆ ಸಿಲುಕಿರುವ 41 ಮಕ್ಕಳನ್ನು ಆಹ್ವಾನಿಸಿ ಅಲ್ಲಿ ಚಂದನ ವಾಹಿನಿಯ ಪಾಠಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ವಸತಿ ವ್ಯವಸ್ಥೆಗೂ ಅಲ್ಲಿ ಅವಕಾಶವಿದೆ. ಕೊಪ್ಪದಲ್ಲೂ ಇದೇ ರೀತಿ ವ್ಯವಸ್ಥೆ ರೂಪಿಸಲಾಗುತ್ತದೆ. ಈ ಕೆಲಸ ಇನ್ನು 2-3 ಮೂರು ದಿನಗಳಲ್ಲೇ ಆಗಬೇಕೆಂದು ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು.
ತಾಲೂಕು ಮಟ್ಟದ ಬಿಸಿಎಂ ಹಾಸ್ಟೆಲನ್ನು ತಕ್ಷಣವೇ ಆರಂಭಿಸುವ ಸಾಧ್ಯತೆ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಯವರೊಂದಿಗೆ ಸಚಿವರು ದೂರವಾಣಿಯಲ್ಲಿ ರ್ಚಚಿಸಿದರು. ಬುಧವಾರವೇ ಡಿಸಿಎಂ ಗೋವಿಂದ ಕಾರಜೋಳ ಅವರೊಂದಿಗೂ ಮಾತನಾಡಿ, ಅಗತ್ಯ ಮುಂಜಾಗ್ರತೆ ಕ್ರಮಕೈಗೊಂಡು ಹಾಸ್ಟೆಲ್​ನಲ್ಲಿ ಮಕ್ಕಳಿಗೆ ವ್ಯವಸ್ಥೆ ಮಾಡಿಕೊಡಲು ಪ್ರಯತ್ನಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ವಿವರಿಸಿದರು.
ಇದೇ ಮಾದರಿಯನ್ನು ಎಲ್ಲೆಲ್ಲಿ ಸಮಸ್ಯೆ ಇದೆಯೋ ಅಲ್ಲೆಲ್ಲ ಅಳವಡಿಸಿಕೊಳ್ಳಲಾಗುತ್ತದೆ. ಮುಂದಿನ ಎರಡು ದಿನಗಳಲ್ಲಿ ಸಮಸ್ಯೆ ಇರುವ ಸ್ಥಳಗಳ ಮಾಹಿತಿ ತರಿಸಿಕೊಳ್ಳಲಾಗುತ್ತದೆ ಎಂದು ‘ವಿಜಯವಾಣಿ’ಗೆ ವಿವರಿಸಿದರು.
ಅತಿಯಾದ ಮಳೆಯಿಂದ ಮೊಬೈಲ್ ನೆಟ್​ವರ್ಕ್ ಟವರ್​ಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಅಲ್ಲಿನ ಜನರೇಟರ್​ಗೆ ಅಗತ್ಯವಾದ ಡೀಸಲ್ ವ್ಯವಸ್ಥೆ ಮಾಡಲು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಸಚಿವರು ಸೂಚಿಸಿದರು. ಜಿಯೋ ಕಂಪೆನಿಯವರು ಈ ಭಾಗದಲ್ಲಿ ನೆಟ್​ವರ್ಕ್ ಹಾಕಲು ಮುಂದೆ ಬಂದಿದ್ದು, ಅವರಿಗೆ ಉತ್ತೇಜನ ಕೊಡಲು ಸಹ ತಿಳಿಸಲಾಗಿದೆ. ಅಭಯಾರಣ್ಯದ ನಡುವೆ ಮನೆಗಳು ಇರುವುದರಿಂದ ಹಲವು ಕಡೆ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ ಎಂಬುದನ್ನು ಅರಿತ ಸಚಿವರು ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಸ್ಥಳೀಯರಿಗೆ ಭರವಸೆ ನೀಡಿದರು.
ವಿದ್ಯಾರ್ಥಿನಿಗೆ ಮೆಚ್ಚುಗೆ
ಸುಟ್ಟ ಗಾಯದಿಂದ ಸಮಸ್ಯೆ ಎದುರಿಸುತ್ತಿದ್ದರೂ ಎದೆಗುಂದದೆ 10ನೇ ತರಗತಿ ಪರೀಕ್ಷೆ ಬರೆದ ಮೆಣಸಿನ ಹಾಡ್ಯದ ವಿದ್ಯಾರ್ಥಿನಿ ಕಲ್ಪನಾ ಅವರ ಮನೆಗೆ ತೆರಳಿ ಆಕೆ ನಡೆಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + eleven =
Remember me
