ಬೆಂಗಳೂರು: ರಾಜ್ಯದಲ್ಲಿ ಶಾಲೆ- ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದರೂ ಪರೀಕ್ಷೆ ಮುಂದೂಲ್ಪಟ್ಟವರಿಗೆ ಯಾವಾಗ ಪರೀಕ್ಷೆ ನಡೆಯುತ್ತೋ ಅನ್ನೋ ಗೊಂದಲ ಕಾಡುತ್ತಲೇ ಇತ್ತು. ಅಂಥವರಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ಕುಮಾರ್​ ಕೆಲ ಮಾಹಿತಿಗಳನ್ನು ನೀಡಿದ್ದಾರೆ ಹಾಗೂ ಪರೀಕ್ಷೆಗಳ ಬಗ್ಗೆ ಇದ್ದ ಗೊಂದಲಗಳನ್ನು ನಿವಾರಿಸಿದ್ದಾರೆ. ಅದರಂತೆ, ಏಳನೇ ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಈ ವಿದ್ಯಾರ್ಥಿಗಳನ್ನು ಯಾವುದೇ ಷರತ್ತುಗಳಿಲ್ಲದೇ ಮುಂದಿನ ತರಗತಿಗಳಿಗೆ ಬಡ್ತಿ ನೀಡಬೇಕೆಂದು ಆದೇಶ ಹೊರಡಿಸಿದ್ದಾರೆ.
9ನೇ ತರಗತಿ ವಿದ್ಯಾರ್ಥಿಗಳು:ಪ್ರಸ್ತುತ 9ನೇ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ಫಾರ್ಮೇಟಿವ್​ ಹಾಗೂ ಸಮ್ಮೇಟಿವ್​ ಅಸೆಸ್ಮೆಂಟ್​ ಹೆಸರಿನಲ್ಲಿ ಅಂದರೆ ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅವರನ್ನು ಉತ್ತೀರ್ಣ ಅಥವಾ ಅನುತ್ತೀರ್ಣ ಮಾಡಲಾಗುತ್ತದೆ. ಒಂದು ವೇಳೆ ವಿದ್ಯಾರ್ಥಿಗಳ ಕಲಿಕಾ ಮಟ್ಟ ಉತ್ತಮವಾಗಿಲ್ಲದಿದ್ದರೆ, ಈ ರಜಾ ಅವಧಿಯಲ್ಲಿ ಅವರನ್ನು ಓದಿನಲ್ಲಿ ತೊಡಗಿಸಿ, ರಜೆ ಅವಧಿ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಿ ಆಮೂಲಕ ಅವರನ್ನು ಮುಂದಿನ ತರಗತಿಗೆ ಕಳುಹಿಸಬೇಕೋ ಅಥವಾ ಇಲ್ಲವೇ ಎಂಬುದನ್ನು ಕೈಗೊಳ್ಳುವ ನಿರ್ಧಾರವನ್ನು ಆಯಾ ಶಾಲೆಗಳಿಗೆ ನೀಡಲಾಗಿದೆ ಎಂದು ಸುರೇಶ್​ಕುಮಾರ್​ ತಿಳಿಸಿದ್ದಾರೆ.
ಏಪ್ರಿಲ್​ 14ರ ಬಳಿಕ ಎಸ್​ಎಸ್​ಎಲ್​ಸಿ ವೇಳಾಪಟ್ಟಿ:ಮುಖ್ಯವಾಗಿ ಎಸ್​ಎಸ್​ಎಲ್​ ಪರೀಕ್ಷೆ ಯಾವಾಗ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೂ ಸ್ಪಷ್ಟನೆ ನೀಡಿರುವ ಸಚಿವರು ಏಪ್ರಿಲ್​ 14ರ ಬಳಿಕ ಲಾಕ್​ಡೌನ್​ ಪರಿಸ್ಥಿತಿಯನ್ನು ಆಧರಿಸಿ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಹಿತ ಕಾಪಾಡಲಾಗುವುದು. ಅಗತ್ಯ ಕಾಲಾವಕಾಶವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.ಅದರಂತೆ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಇಂಗ್ಲಿಷ್​ ಭಾಷಾ ಪರೀಕ್ಷೆ ಕೂಡ ನಡೆಸಬೇಕಾಗಿದೆ. ಈ ಬಗ್ಗೆಯೂ ಏಪ್ರಿಲ್​ 14ರ ನಂತರ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಶಾಲಾ ಶಿಕ್ಷಕರ ರಜೆ ಏಪ್ರಿಲ್​ 11ಕ್ಕೆ ವಿಸ್ತರಿಸಿದ ರಾಜ್ಯ ಸರ್ಕಾರ: ವಿದ್ಯಾರ್ಥಿ ದಾಖಲಾತಿ ಆರಂಭಿಸಿದರೆ ಮಾನ್ಯತೆ ರದ್ದು ಅಥವಾ ಇತರೆ ಕಠಿಣ ಕ್ರಮದ ಎಚ್ಚರಿಕೆ

https://www.facebook.com/nimmasuresh/videos/3359678524059469/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
