ಬೆಂಗಳೂರು: ಎಂಟರಿಂದ ಹತ್ತನೇ ತರಗತಿ ಮಕ್ಕಳಿಗಾಗಿ ಆರಂಭಿಸಿರುವ ಸೇತುಬಂಧ ಕಾರ್ಯಕ್ರಮದ ಲಾಭ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸಿಗುವಂತಾಗಲು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್​ಗಳನ್ನು ತೆರೆಯುವಂತೆ ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಕೆಲ ಗ್ರಾಮಗಳಿಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವರು, ಅಲ್ಲಿನ ವಿದ್ಯಾರ್ಥಿಗಳ ಪಾಲಕರ ಒತ್ತಾಯದ ಮೇರೆಗೆ ಡಿಸಿಎಂಗೆ ಪತ್ರ ಬರೆದಿದ್ದಾರೆ. ಕರೊನಾದಿಂದ ಮಕ್ಕಳು ಗ್ರಾಮಗಳಲ್ಲಿಯೇ ಉಳಿದಿದ್ದು, ವಿದ್ಯುತ್ ಹಾಗೂ ಮೊಬೈಲ್ ಸಂಪರ್ಕ ಸಮಸ್ಯೆ ಕಾರಣಕ್ಕೆ ಸೇತುಬಂಧ ಕಾರ್ಯಕ್ರಮದಿಂದ ವಂಚಿತರಾಗಿದ್ದಾರೆ. ಕರೊನಾ ನಿಯಮಾವಳಿ ಪಾಲಿಸಿಕೊಂಡು ಹಾಸ್ಟೆಲ್ ತೆರೆಯಬಹುದಾಗಿದೆ. ಅರಣ್ಯ ಹಾಗೂ ಗುಡ್ಡಗಾಡುಗಳಲ್ಲಿಯಾದರೂ ಈ ಕ್ರಮ ಕೈಗೊಳ್ಳಿ ಎಂದು ಕೋರಿದ್ದಾರೆ. ಸುರೇಶ್​ಕುಮಾರ್ ಪತ್ರವನ್ನು ಆಧಾರವಾಗಿಟ್ಟುಕೊಂಡು ಕಾರಜೋಳ ತಮ್ಮ ಇಲಾಖೆಯ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ.
ಇದನ್ನೂ ಓದಿ:ಧ್ವಜಾರೋಹಣದ ವಿಚಾರಕ್ಕೆ ಗಲಾಟೆ; ಬಿಜೆಪಿ ಕಾರ್ಯಕರ್ತನ ಹತ್ಯೆ
ಸಿಬ್ಬಂದಿ ವಿರೋಧ:ಹಾಸ್ಟೆಲ್ ತೆರೆಯಬೇಕೆಂಬ ಚರ್ಚೆಗೆ ವಸತಿ ಶಾಲೆಗಳ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಬಹುತೇಕ ಹಾಸ್ಟೆಲ್​ಗಳು ಕರೊನಾ ಆರೈಕೆ ಕೇಂದ್ರಗಳಾಗಿವೆ. ವಿದ್ಯಾರ್ಥಿಗಳು ಬೇರೆ ಬೇರೆ ತಾಲೂಕಿನಿಂದ ಬರುತ್ತಾರೆ. ಅವರಿಂದ ಕರೊನಾ ನಿಯಮಾವಳಿ ನಿರೀಕ್ಷೆ ಮಾಡುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯ ನೀಡುತ್ತಿದ್ದಾರೆ.
ಸುಬ್ಬಕ್ಕನ ಕೋಳಿಯ ಕಥೆಯಲ್ಲ ಇದು ಇಟಲಿ ಅಜ್ಜನ ಕೋಳಿಯ ಕಥೆ-ವ್ಯಥೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
