ಹುಬ್ಬಳ್ಳಿ:ಕಳೆದೊಂದು ತಿಂಗಳಿಂದ ಏರುಮುಖವಾಗಿದ್ದ ಉಳ್ಳಾಗಡ್ಡಿ ದರ ಇದೀಗ ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೊಂಚ ಇಳಿಮುಖವಾಗಿದೆ. ರಫ್ತು ನಿಷೇಧ ಮಾಡಿದ್ದಲ್ಲದೆ, ಆಮದಿಗೆ ಇದ್ದ ನಿಬಂಧನೆಗಳ ಸಡಿಲಿಕೆ ಹಾಗೂ ದಾಸ್ತಾನಿನ ಮೇಲೆ ಮಿತಿ ಹೇರಿರುವುದರಿಂದ ಒಂದೇ ವಾರದಲ್ಲಿ ಕ್ವಿಂಟಾಲ್​ಗೆ ಎರಡರಿಂದ ಮೂರು ಸಾವಿರ ರೂ.ನಷ್ಟು ಬೆಲೆ ಕಡಿಮೆಯಾಗಿದೆ.
ಈ ಮಧ್ಯೆ ಈಜಿಪ್ಟ್ ದೇಶದ ಉಳ್ಳಾಗಡ್ಡಿ ಮತ್ತೆ ಹುಬ್ಬಳ್ಳಿ ಮಾರುಕಟ್ಟೆಗೆ ಬಂದಿದೆ. ಆದರೆ, ದಪ್ಪ ಹಾಗೂ ಸಿಹಿ ಜತೆಗೆ ಹೆಚ್ಚು ಕೆಂಪು ಬಣ್ಣದಿಂದ ಹೊಳೆಯುತ್ತದೆ ಎನ್ನುವ ಕಾರಣಕ್ಕೆ ಈ ಉಳ್ಳಾಗಡ್ಡಿಯನ್ನು ಯಾರೂ ಕೇಳುತ್ತಿಲ್ಲ. ಎಪಿಎಂಸಿ ಉಳ್ಳಾಗಡ್ಡಿ ವರ್ತಕ ಹಬೀಬ್ ಎನ್ನುವವರು ಒಂದು ಲೋಡ್ (25 ಟನ್) ಈಜಿಪ್ಟ್ ಉಳ್ಳಾಗಡ್ಡಿಯನ್ನು ಮುಂಬೈ ಮೂಲಕ ಮಂಗಳವಾರ ತರಿಸಿದ್ದಾರೆ. ಪ್ರತಿ ಕ್ವಿಂಟಾಲ್​ಗೆ 4500 ರೂ. ನಿಗದಿ ಮಾಡಿದ್ದರೂ ಕೊಳ್ಳುವವರು ಇರಲಿಲ್ಲ.
ಸದ್ಯ ಪುಣೆ ಹಾಗೂ ಸ್ಥಳೀಯ ಉಳ್ಳಾಗಡ್ಡಿಗೆ ಹೆಚ್ಚು ಬೇಡಿಕೆ ಇದೆ. ಉತ್ತರ ಕರ್ನಾಟಕದ ಪ್ರಮುಖ ಉಳ್ಳಾಗಡ್ಡಿ ಮಾರುಕಟ್ಟೆಯಾದ ಹುಬ್ಬಳ್ಳಿ ಎಪಿಎಂಸಿಯಲ್ಲಿ ಸದ್ಯದ ದರ ಕ್ವಿಂಟಾಲ್​ಗೆ ಸರಾಸರಿ 3-4 ಸಾವಿರ ರೂ. ವರೆಗೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ಈ ಮೊದಲು 100 ರೂ.ಗೆ ಕೆಜಿ ಇದ್ದದ್ದು, ಇದೀಗ 50- 60 ರೂ.ಗೆ ಇಳಿದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 18 =
Remember me
