ಬೆಂಗಳೂರು:ಮಳೆ ಪ್ರಮಾಣ ಆಧರಿಸಿ ತಮಿಳುನಾಡಿಗೆ ಪ್ರತಿದಿನ ಎಂಟು ಸಾವಿರ ಕ್ಯುಸೆಕ್ ಕಾವೇರಿ ನೀರು ಹರಿಯಲಿದೆ. ಜತೆಗೆ ಪ್ರತಿದಿನ ಒಂದು ಟಿಎಂಸಿ ಅಡಿ ನೀರು ಬಿಡಬೇಕೆಂಬ ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶ ಪ್ರಶ್ನಿಸಿ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ನಡೆದ ಸರ್ವಪಕ್ಷಗಳ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕಾವೇರಿ ಜಲ ನಿಯಂತ್ರಣ ಸಮಿತಿಯು ಜು.12 ರಿಂದ ಅಂತ್ಯದವರೆಗೆ 20 ದಿನಗಳ ಕಾಲ ಪ್ರತಿದಿನ ಒಂದು ಟಿಎಂಸಿ ಅಡಿ ನೀರು ತಮಿಳುನಾಡಿಗೆ ಬಿಡಲು ಆದೇಶಿಸಿದೆ. ಮುಂಗಾರು ಹಂಗಾಮಿನಲ್ಲಿ ಸಮಿತಿ ನಡೆಸಿದ ಮೂರನೇ ಸಭೆಯಿದಾಗಿದೆ.
ಆದರೆ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಪ್ರಕಾರ ತಾತ್ಪೂರ್ತಿಕವಾಗಿ ಪ್ರತಿದಿನ ಎಂಟು ಸಾವಿರ ಕ್ಯುಸೆಕ್ ನೀರು ತಮಿಳುನಾಡಿಗೆ ಹರಿಸಲು ನಿರ್ಧರಿಸಿದ್ದು, ಈ ಪ್ರಮಾಣವು ಕೂಡ ಮಳೆಯನ್ನು ಅವಲಂಬಿಸಿದೆ ಎಂದೂ ಸ್ಪಷ್ಟಪಡಿಸಿದರು.
ಮಳೆ ಹೆಚ್ಚಾದರೆ ಪೂರ್ತಿ ಒಂದು ಟಿಎಂಸಿ ಅಡಿ, ಕಡಿಮೆಯಾದರೆ ಎಂಟು ಸಾವಿರ ಕ್ಯುಸೆಕ್‌ಗಿಂತ ಕಡಿಮೆ ನೀರು ಬಿಡುಗಡೆ ಮಾಡಲು ಸಭೆ ಸಮ್ಮತಿಸಿದೆ. ಕಾನೂನು ತೊಡಕಾಗದಂತೆ ಅಲ್ಪಸ್ವಲ್ಪ ನೀರು ಬಿಡುವುದು ಸೂಕ್ತವೆಂಬ ನಿಲುವು ತಳೆದಿದೆ.
ಜಲ ವಿವಾದಗಳಲ್ಲಿ ರಾಜ್ಯದ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುವ ಕಾನೂನು ತಂಡದ ಮುಖ್ಯಸ್ಥ ಮೋಹನ್ ಕಾತರಕಿ ಸಲಹೆ ಪ್ರಕಾರ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.
ತಾತ್ಕಾಲಿಕವಾಗಿ ಎಂಟು ಸಾವಿರ ಕ್ಯುಸೆಕ್ ನೀರು ಬಿಡುಗಡೆ ಜತೆಗೆ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸೋಣ. ನೀರು ಬಿಡದಿದ್ದರೆ ನಾವು ಮೊಂಡಾಟ ಆಡ್ತೀವಿ ಎಂದು ಸಿಡಬ್ಲ್ಯುಎಂಎಗೆ ಅನ್ನಿಸಬಾರದು ಎನ್ನುವ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು ಎಂದರು.
ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಸಚಿವರು, ಸರ್ವಪಕ್ಷಗಳ ಸಂಸದ-ಶಾಸಕರು, ರೈತ ಸಂಘಟನೆಗಳ ಮುಖಂಡರು, ಕಾನೂನು ತಂಡ, ಹಿರಿಯ ಅಧಿಕಾರಿಗಳ ಸಭೆಯಲ್ಲಿ ವಸ್ತುಸ್ಥಿತಿ ತಿಳಿಸಲಾಯಿತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ಜು.17 ರಿಂದ 24ರವರೆಗೆ ಭಾರಿ ಮಳೆಯಾಗಲಿದೆ. ಅದರಂತೆಯೇ ಮಳೆಯಾದರೆ ಜಲಾಶಯಗಳ ಒಳ ಹರಿವು ಹೆಚ್ಚಲಿದ್ದು, ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಹೊರ ಹರಿವು ಏರಿಕೆ ಮಾಡಬೇಕಾಗುತ್ತದೆ.
ದಿನದ 24 ತಾಸು 11,500 ಕ್ಯುಸೆಕ್ ನೀರು ಹರಿದರೆ ಒಂದು ಟಿಎಂಸಿ ಅಡಿಯಾಗುತ್ತದೆ. ಆದರೆ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಅಷ್ಟು ನೀರಿಲ್ಲ, ಒಳ ಹರಿವು ಚೇತರಿಸಿಕೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಾಮಾನ್ಯ ವರ್ಷದಂತೆ ತಮಿಳುನಾಡಿಗೆ ಜೂನ್‌ನಲ್ಲಿ 9.4, ಜುಲೈನಲ್ಲಿ 31.24 ಸೇರಿ 40.43 ಟಿಎಂಸಿ ಅಡಿ ನೀರು ಬಿಡಬೇಕು, ಇಲ್ಲಿಯವರೆಗೆ ಐದು ಟಿಎಂಸಿ ಅಡಿ ನೀರು ಹರಿದಿರುವುದು ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ದಾಖಲಾಗಿದೆ.
ಉತ್ತಮ ಮುಂಗಾರು ಮಳೆ ಮುನ್ಸೂಚನೆಯಿತ್ತಾದರೂ ಈ ತನಕ ನಿರೀಕ್ಷೆಯಂತೆ ಆಗಿಲ್ಲ. ಕಾವೇರಿ ಜಲಾನಯನದ ಪ್ರದೇಶದ ಕಬಿನಿ ಜಲಾಶಯ-ಶೇಕಡ 96, ಹಾರಂಗಿ-76, ಹೇಮಾವತಿ-56 ಮತ್ತು ಕೆಆರ್‌ಎಸ್‌ನಲ್ಲಿ ಶೇ.54ರಷ್ಟು ಸೇರಿ ಒಟ್ಟು ಶೇ.63 ಜಲಸಂಗ್ರಹವಿದೆ.
ಕಳೆದ ಬಾರಿ ಮಳೆ ಕೈಕೊಟ್ಟು ತೀವ್ರ ಸಂಕಷ್ಟದ ಸ್ಥಿತಿ ತಲೆದೋರಿತ್ತು. ಸಾಮಾನ್ಯ ವರ್ಷದಲ್ಲಿ ತಮಿಳುನಾಡಿಗೆ 177 ಟಿಎಂಸಿ ಅಡಿ ನೀರು ಬಿಡಬೇಕು. ಆದರೆ 81 ಟಿಎಂಸಿ ಅಡಿ ನೀರು ಬಿಡಲು ಸಾಧ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 16 =
Remember me
