ಬೆಂಗಳೂರು:ಈ ಮಾಜಿ ಬ್ಯಾಂಕ್​ ಉದ್ಯೋಗಿಗೆ ಈಗ ಭರ್ತಿ 83 ವರ್ಷ ವಯಸ್ಸು. ದುಶ್ಚಟ, ದುರ ಭ್ಯಾಸಗಳಿಂದ ದೂರವೇ ಉಳಿದಿರು ವುದಲ್ಲದೆ, ನಿತ್ಯವೂ ಶ್ರಮವಹಿಸಿ ಕೆಲಸ ಮಾಡುವುದೇ ಇವರ ಉತ್ತಮ ಆರೋಗ್ಯದ ಗುಟ್ಟು. ದೈಹಿಕ ಚಟುವಟಿಕೆಯೇ ಇಲ್ಲದೆ ದಿನಾ ಸೋಮಾರಿಗಳಾಗಿರುವ ಯುವ ಸಮೂಹವನ್ನು ನಾಚಿಸುವಂತಾ ಸಾವಿರಾರು ವೃದ್ಧರೊಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ:ಲೋಕ ಚುನಾವಣೆ: ಎರಡು ಮತಕ್ಕಾಗಿ ದಟ್ಟ ಕಾಡಿನಲ್ಲಿ 107 ಕಿಮೀ ಪ್ರಯಾಣ ಬೆಳೆಸಿದ ಅಧಿಕಾರಿಗಳು!
ಎಲೆ ಮರೆಯ ಕಾಯಿಯಂತೆ ದುಡಿಯುವ ಈ ಸಾಧಕರನ್ನು ಪರಿಚಯಿಸುವ ಗೋಜಿಗೆ ಯಾರು ಹೋಗುವುದಿಲ್ಲ. ರಾಜಕೀಯ ಕ್ಷೇತ್ರದ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಇವರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ಟೀವ್ ಇರ್ತಾರೆ. ಅವರೇ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್. ಅವರು ತಮ್ಮ ಫೇಸ್‌ಬುಕ್‌ ಖಾತೆ ಮೂಲಕ ವೃದ್ಧರ ಪರಿಚಯ ಮಾಡಿಕೊಟ್ಟಿದ್ದಾರೆ. ಈ ವಯೋವೃದ್ಧ ಸಾಧಕರ ಬಗ್ಗೆ ಸುರೇಶ್ ಅವರು ಬರೆದುಕೊಂಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರ ರೈಲ್ವೆ ನಿಲ್ದಾಣದ ಪೂರ್ವ ಭಾಗದಲ್ಲಿ ರಾಘವೇಂದ್ರ ಸ್ಟೋರ್ಸ್ ಎಂಬ ಸಣ್ಣ ಹೋಟೆಲ್ ಇದೆ. ಆದರೆ ಇದು ಭಟ್ರ ಹೋಟೆಲ್ ಎಂದೇ ಜನಪ್ರಿಯ. ಮೃದುವಾದ ಇಡ್ಲಿ, ಸ್ವಾದಿಷ್ಟಕರ ಚಟ್ನಿ ಗೆ ಇದು ಬಹಳ ಫೇಮಸ್. ಅನೇಕ ಬಾರಿ ಕ್ಯೂನಲ್ಲಿ ನಿಂತು ತಿಂಡಿ ಪಡೆಯಬೇಕಾಗುತ್ತದೆ.
ಈ ಹೋಟೆಲ್ ಅನ್ನು ನಾನು ಸುಮಾರು 40 ವರ್ಷಗಳಿಂದ ನೋಡುತ್ತಿದ್ದೇನೆ. ತಿಂಡಿಗಾಗಿ ಭೇಟಿ ಕೊಡುತ್ತಿರುತ್ತೇನೆ. ಇಂದು ಈ ಜಾಗದಲ್ಲಿ ಈ ಹಿರಿಯ ನಾಗರಿಕರನ್ನು ಕಂಡೆ. ಇವರ ಹೆಸರು ಕೆ ಸದಾನಂದ ಹೆಗಡೆ. ಉಡುಪಿ ಜಿಲ್ಲೆಯ ಕೋಟ ಇವರ ಊರು. ಕೆನರಾ ಬ್ಯಾಂಕ್ ನಲ್ಲಿ ಮೂರು ದಶಕಕ್ಕೂ ಹೆಚ್ಚು ಸಮಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸುಮಾರು 22 ವರ್ಷಗಳ ಹಿಂದೆ ನಿವೃತ್ತಿಗೊಂಡರು.
ನನ್ನ ಮೊದಲನೆಯ ಬ್ಯಾಂಕ್ ಅಕೌಂಟ್ ಇವ್ರಿದ್ದ ಬ್ಯಾಂಕಿನಲ್ಲಿಯೇ ತೆರೆದದ್ದು. ಇಂದು ಶ್ರೀ ಸದಾನಂದ ಹೆಗಡೆ ಅವರನ್ನು ಈ ಸಣ್ಣ ಹೋಟೆಲ್​ನಲ್ಲಿ ಎಲ್ಲರಿಗೂ ಎಕ್ಸ್ಟ್ರಾ ಚಟ್ನಿ ಹಾಕುವ ಜವಾಬ್ದಾರಿ ನಿರ್ವಹಿಸಿದ್ದನ್ನು ಕಂಡೆ. “ನೀವ್ಯಾಕೆ ಈ ಕೆಲಸ ಮಾಡುತ್ತಿದ್ದೀರಿ” ಎಂದು ಕೇಳಿದಾಗ ಹೆಗಡೆಯವರು ಹೇಳಿದ ಮಾತು..
“ಮನೆಯಲ್ಲಿ ಕುಳಿತು ಬೇಜಾರು. ಬೆಳಗ್ಗೆ ಎಂಟು ಗಂಟೆಗೆ ಬರುತ್ತೇನೆ 12 ಗಂಟೆಯವರೆಗೆ ಈ ಚಟ್ನಿ ಹಾಕುವ ಕೆಲಸ ಮಾಡುತ್ತೇನೆ. ಏಕೆಂದರೆ ನೂಕು ನುಗ್ಗಲಿನಲ್ಲಿ ಚಟ್ನಿ ಹಾಕಿಸಿಕೊಳ್ಳುವುದು ಅನೇಕರಿಗೆ ಕಷ್ಟ ಆಗ್ತಿರುವುದನ್ನು ನಾನು ಕಂಡಿದ್ದೇನೆ. ಆದುದರಿಂದ ನಾನೇ ಸ್ವಯಂ ಪ್ರೇರಿತನಾಗಿ ಈ ಕೆಲಸ ಮಾಡುತ್ತಿದ್ದೇನೆ. ಯಾವುದೇ ಫಲಪೇಕ್ಷೆ ಇಲ್ಲದೆ ಈ ಕೆಲಸ ಮಾಡುತ್ತಿದ್ದೇನೆ. ನನಗೂ ಹೊತ್ತು ಕಳೆಯಬೇಕು. ಇಲ್ಲಿನ ಗ್ರಾಹಕರಿಗೂ ಅನುಕೂಲ ಆಗಬೇಕು ಎನ್ನುವುದೊಂದೇ ಇಲ್ಲಿ ಉದ್ದೇಶ” (Win-Win situation)
ಸುಮಾರು 83 ವರ್ಷದ ಶ್ರೀ ಸದಾನಂದ ಹೆಗಡೆಯವರ ಈ ಉತ್ಸಾಹ ಕಂಡು ನಾನು ಚಿಕಿತನಾದೆ. ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಾಶಿಯಲ್ಲಿ ಅರ್ಚಕರಂತೆ ವಸ್ತ್ರ ಧರಿಸಿ ಭದ್ರತೆಗೆ ನಿಂತ ಪೊಲೀಸರು..! ಅಖಿಲೇಶ್​ ಯಾದವ್​ ಶಾಕಿಂಗ್​ ಕಾಮೆಂಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − two =
Remember me
