ಬೆಂಗಳೂರು:ಮಂತ್ರಿಮಂಡಲ ವಿಸ್ತರಣೆಗೆ ಮುಖ್ಯಮಂತ್ರಿ ಕಸರತ್ತು ನಡೆಸಿರುವ ಮಧ್ಯೆಯೇ ವಿಧಾನಪರಿಷತ್​ನ ತೆರವಾದ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಬಿರುಸಿನ ರಾಜಕೀಯ ಚಟುವಟಿಕೆ ಮತ್ತೊಂದು ತಿರುವು ಪಡೆದುಕೊಳ್ಳಲಿದೆ. ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ವಿಧಾನಸಭೆಗೆ ಆಯ್ಕೆಯಾಗಿರುವ ಕಾರಣ ಈ ಸ್ಥಾನ ತೆರವಾಗಿದ್ದು, ವಿಧಾನಸಭೆಯಿಂದ ವಿಧಾನಪರಿಷತ್​ಗೆ ಆಯ್ಕೆಯಾಗುವ ಈ ಸದಸ್ಯತ್ವದ ಅವಧಿ 2022ರ ಜೂನ್ 14ರವರೆಗಿದೆ.
ಮೇಲ್ಮನೆಯ ಒಂದು ಸ್ಥಾನ ಗೆದ್ದುಕೊಳ್ಳು ವುದು ಆಡಳಿತಾರೂಢ ಬಿಜೆಪಿಗೆ ಸರಳ. ಆದರೆ, ಡಿಸಿಎಂ ಲಕ್ಷ್ಮಣ ಸವದಿಗೆ ಮಾಜಿ ಸಚಿವ ಆರ್.ಶಂಕರ್ ಸೆಡ್ಡು ಹೊಡೆದಿರುವ ಕಾರಣ ಅಭ್ಯರ್ಥಿ ಆಯ್ಕೆ ಜಟಿಲವಾಗಿದೆ. ಅಭ್ಯರ್ಥಿ ಆಯ್ಕೆ ಸುಸೂತ್ರವಾದರೆ ಬಲಾಬಲದ ಲೆಕ್ಕಾಚಾರದಂತೆ ಅವಿರೋಧ ಆಯ್ಕೆ ಸಾಧ್ಯತೆಗಳಿವೆ.
ಉಪಮುಖ್ಯಮಂತ್ರಿ ಹುದ್ದೆಯಲ್ಲಿ ಲಕ್ಷ್ಮಣ ಸವದಿ ಅಬಾಧಿತವಾಗಿ ಮುಂದುವರಿಯಲು ಈ ಚುನಾವಣೆ ಮಹತ್ವದ್ದಾಗಿದ್ದರೆ, ಮುಖ್ಯಮಂತ್ರಿ ಮಾತು ಕೊಟ್ಟಂತೆ ಲಭ್ಯ ಸದಸ್ಯ ಸ್ಥಾನ ತಮಗೆ ನೀಡಿ ಮಂತ್ರಿ ಮಾಡಬೇಕು ಎಂದು ಆರ್.ಶಂಕರ್ ಪಟ್ಟು ಹಿಡಿದಿದ್ದಾರೆ.
ಕಾಕತಾಳೀಯ:ಸವದಿ ಡಿಸಿಎಂ ಪಟ್ಟ ಉಳಿಯಲು ಫೆ.19ರೊಳಗೆ ಯಾವುದಾದರೂ ಒಂದು ಮನೆ ಪ್ರವೇಶಿಸಬೇಕು. ಪರಿಷತ್ ಚುನಾವಣೆ ವೇಳಾಪಟ್ಟಿ ಪ್ರಕಾರ ಫೆ.17ರಂದು ಮತದಾನ ನಡೆಯಲಿರುವುದು ಕಾಕತಾಳೀಯವಾಗಿದೆ. ಸಚಿವ ಸಂಪುಟ ರಚನೆ ವೇಳೆ ಎರಡೂ ಮನೆ ಸದಸ್ಯರಲ್ಲದ ಲಕ್ಷ್ಮಣ ಸವದಿ ಸ್ಥಾನ ಗಿಟ್ಟಿಸಿಕೊಂಡು ಡಿಸಿಎಂ ಕೂಡ ಆಗಿದ್ದು ಅಚ್ಚರಿ ಮೂಡಿಸಿತ್ತು. ಹೈಕಮಾಂಡ್ ಇಚ್ಛೆಯಂತೆ ಆಯ್ಕೆ ಎಂದೇ ಈತನಕ ಬಿಂಬಿತವಾಗಿದ್ದರೂ ಆಂತರ್ಯದಲ್ಲಿ ಸಿಎಂ ಒಲವಿತ್ತು. ಮಹಾರಾಷ್ಟ್ರ ಚುನಾವಣೆಗೆ ವ್ಯೂಹಾತ್ಮಕ ನಡೆಯಿದು.
ಮಹಾರಾಷ್ಟ್ರದಲ್ಲಿ ಕೈಕೊಟ್ಟರೂ ಉಪಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳನ್ನು ಗೆಲ್ಲುವಲ್ಲಿ ಸವದಿ ವರ್ಚಸ್ಸು ನಿರ್ಣಾಯಕ ಪಾತ್ರ ವಹಿಸಿದೆ. ಹೀಗಾಗಿ ಹೈಕಮಾಂಡ್ ಹಾಗೂ ಸಿಎಂಗೆ ಸವದಿಯೇ ಮೊದಲ ಚಾಯ್್ಸ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ತ್ಯಾಗರಾಜ ಶಂಕರ!
ಈಗಿನದು ಎರಡೂ ವರ್ಷಗಳ ಅವಧಿಯದು. ಜೂನ್​ನಲ್ಲಿ ನೇಮಕವಾದರೆ ಪೂರ್ಣ ಅವಧಿಗೆ ಸದಸ್ಯರಾಗಬಹುದು. ಅಲ್ಲದೇ ಎಂಎಲ್ಸಿ ಆದ ತಕ್ಷಣ ಮಂತ್ರಿ ಮಾಡುವೆ ಎಂದು ಶಂಕರ್​ಗೆ ಭರವಸೆ ನೀಡಿದ ಸಿಎಂ ಮನವೊಲಿಕೆ ಯತ್ನ ಭಾಗಶಃ ಸಫಲವಾಗಿದೆ. ಇದರಿಂದಾಗಿ ಸವದಿಗೋಸ್ಕರ ಶಂಕರ್ ಮತ್ತೊಮ್ಮೆ ‘ತ್ಯಾಗಿ’ಯಾದರೆ ಅಚ್ಚರಿಯೇನಿಲ್ಲ ಎಂದು ಮೂಲಗಳು ಹೇಳಿವೆ.
ಅರ್ಹರು-ಅನರ್ಹರ ನಡುವೆ ಜಿಜ್ಞಾಸೆ
ಬೆಂಗಳೂರು:ಸಂಪುಟ ಸೇರುವ ವಿಚಾರದಲ್ಲಿ ‘ಅರ್ಹ’ರು ಮತ್ತು ‘ಅನರ್ಹರ’ ನಡುವೆ ಹೊಸ ಜಿಜ್ಞಾಸೆ ಶುರುವಾಗಿದೆ. ಸಂಪುಟ ವಿಸ್ತರಣೆ ತಡವಾಗಲು ಇಬ್ಬರು ಅನರ್ಹ ಶಾಸಕರೇ ಕಾರಣ ಎಂದು ಭಾವಿಸಿರುವ ಅರ್ಹ ಶಾಸಕರು, ತಮಗೆ ಮೊದಲು ಅವಕಾಶ ಕೊಡಿ ಎಂದು ಮುಖ್ಯಮಂತ್ರಿ ಮುಂದೆ ಕೋರಿಕೆ ಇಟ್ಟಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದವರೆಲ್ಲ ಸಚಿವರಾದರೆ ಮುಂದೆ ಅವಕಾಶ ಸಿಗದೇ ಹೋಗಬಹುದೆಂಬ ಕಾರಣಕ್ಕೆ ಸೋತ ಎಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಈಗಲೇ ನಮಗೂ ಅವಕಾಶ ಕೊಡಬೇಕೆಂದು ಒತ್ತಾಯ ಶುರುಮಾಡಿದ್ದಾರೆ ಎನ್ನಲ್ಲಾಗಿದೆ.
ಇವರ ನಡುವೆ ತಾಂತ್ರಿಕ ಹೊಯ್ದಾಟ ನಡೆದಿದ್ದು, ’ಖಜ್ಝಿ್ಝ ್ಞ್ಡ ಛ್ಝಿಛ್ಚಿಠಿಜಿಟ್ಞ’ ಮತ್ತು ’ಛ್ಝಿಛ್ಚಿಠಿಛಿಛ’ ಪದಗಳನ್ನಿಟ್ಟುಕೊಂಡು ಚರ್ಚೆ ಶುರುಮಾಡಿದ್ದಾರೆ. ಅನರ್ಹತೆ ಒಂದು ಚುನಾವಣೆ ಎದುರಿಸುವವರೆಗೆ ಮಾತ್ರ, ಹೀಗಾಗಿ ಈಗಲೇ ನಮಗೂ ಅವಕಾಶ ಕೊಡಿ ಎಂದು ಸೋತವರಿಬ್ಬರು ವಾದಿಸಿದರೆ, ಚುನಾವಣೆಯಲ್ಲಿ ಗೆದ್ದರಷ್ಟೆ ಮಂತ್ರಿ ಸ್ಥಾನಕ್ಕೆ ಅರ್ಹತೆ ಎಂದು ‘ಅರ್ಹ’ ಶಾಸಕರು ಸಮಜಾಯಿಷಿ ನೀಡುತ್ತಿದ್ದಾರೆ.
ಪ್ರಾಶಸ್ಱದ ಮತ
ಪ್ರಾಶಸ್ಱದ ಅನುಸಾರ ಮತದಾನ ನಡೆಯಲಿದೆ. ವಿಧಾನಸಭೆಯ ಈಗಿನ ಒಟ್ಟು ಬಲದಂತೆ ಮೇಲ್ಮನೆಗೆ ಅಯ್ಕೆ ಬಯಸುವ ಸದಸ್ಯ 112 ಮತಗಳನ್ನು ಗಳಿಸಬೇಕು. ಒಬ್ಬ ಪಕ್ಷೇತರ ಶಾಸಕ ಸರ್ಕಾರದ ಭಾಗವೇ ಆಗಿರುವ ಕಾರಣ ಸ್ಪೀಕರ್ ಹೊರತುಪಡಿಸಿ ಬಿಜೆಪಿಗೆ 117 ಸದಸ್ಯ ಬಲವಿದೆ.
ಸಿಎಂ ಯಡಿಯೂರಪ್ಪ ಹೇಳಿದಂತೆ ನಡೆದುಕೊಂಡಿರುವೆ. ಪದೇಪದೆ ಕೇಳಿ ಮುಜುಗರ ಉಂಟು ಮಾಡಲು ಬಯಸುವುದಿಲ್ಲ, ಎಲ್ಲ ಸಿಎಂ ನಿರ್ಧಾರಕ್ಕೆ ಬಿಟ್ಟಿರುವೆ.
| ಆರ್.ಶಂಕರ್ ಮಾಜಿ ಸಚಿವ
ಪಕ್ಷ ಸೂಚಿಸಿದರೆ ಅಧಿಕಾರ ತ್ಯಜಿಸಲು ಸಿದ್ಧ. ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ, ಮುಖ್ಯಮಂತ್ರಿ ಹೇಗೆ ಹೇಳುತ್ತಾರೋ ಹಾಗೆ ಚಾಚು ತಪ್ಪದೇ ಮಾಡುತ್ತೇನೆ. ಈವರೆಗೂ ಅಧಿಕಾರ ಬಿಟ್ಟುಕೊಡುವಂತೆ ವರಿಷ್ಠರು ಸೂಚಿಸಿಲ್ಲ.
| ಗೋವಿಂದ ಕಾರಜೋಳ ಡಿಸಿಎಂ
ಸಂಪುಟ ಪುನಾರಚನೆ ಬಗ್ಗೆ ಚರ್ಚೆಯೇ ನಡೆದಿಲ್ಲ. ಅದೆಲ್ಲ ಊಹಾಪೋಹ. ಸಂಪುಟ ವಿಸ್ತರಣೆ ಆಗುತ್ತದಷ್ಟೆ. ನಾನು ಸಚಿವ ಸ್ಥಾನ ತ್ಯಾಗವನ್ನೂ ಮಾಡಲ್ಲ, ಅಂತಹ ಸೂಚನೆಯನ್ನು ಯಾರೂ ಕೊಟ್ಟಿಲ್ಲ. ನನಗೆ ಆ ಉದ್ದೇಶವೂ ಇಲ್ಲ.
| ಮಾಧುಸ್ವಾಮಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − one =
Remember me
