ಬೆಂಗಳೂರು:ಚುನಾವಣೆ ಗೆಲುವು ಸೋಲಿನ ಬೆಟ್ಟಿಂಗ್‌ಗೂ ಈಗ ಅಗ್ರಿಮೆಂಟ್ ಶುರುವಾಗಿದೆ. ಇಲ್ಲೊಬ್ಬರು ಛಾಪಾ ಕಾಗದದಲ್ಲಿ 5 ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ.
ಹೆಚ್​ಡಿ ಕೋಟೆ ಕ್ಷೇತ್ರದಲ್ಲಿ ಬೆಟ್ಟಿಂಗ್ ಬಗ್ಗೆ ಮಾಡಿಕೊಂಡಿರುವ ಕರಾರು ಪತ್ರದ ಫೋಟೊ ಒಂದು ಹರಿದಾಡುತ್ತಿದೆ. ಜಯರಾಮ ನಾಯಕ ಹಾಗೂ ಪ್ರಕಾಶ್, ಶಿವರಾಜ್ ಎನ್ನುವವರ ನಡುವೆ ಒಪ್ಪಂದ ನಡೆದಿದೆ.

ಪ್ರಕಾಶ್ ಹಾಗೂ ಶಿವರಾಜ್, ಜೆಡಿಸ್ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ ಪರವಾಗಿ ಬೆಟ್​ ಮಾಡಿದ್ದು ಜಯರಾಮ ನಾಯ್ಕ‌ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಪರವಾಗಿ ಪಣವನ್ನು ಇಟ್ಟಿದ್ದಾರೆ. ಎರಡೂ ಪಕ್ಷದವರು ತಲಾ 5 ಲಕ್ಷ ಬೆಟ್ಟಿಂಗ್ ಕಟ್ಟಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ.
10 ಲಕ್ಷವನ್ನು ಪೂಜಾ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕ‌ ನೇಮಿಚಂದ್ ಬಳಿ ನೀಡಲಾಗಿರುವ ಬಗ್ಗೆ ಉಲ್ಲೇಖ ಮಾಡಲಾಗಿದ್ದು ಒಂದು ವೇಳೆ ಬಿಜೆಪಿ ಗೆದ್ದರೆ ಇಬ್ಬರು ಹಣ ವಾಪಸ್ಸು ಪಡೆಯುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:16 − 13 =
Remember me
