
ಶಿವಾನಂದ ತಗಡೂರು,ಬೆಂಗಳೂರು:ಅಂಥದೊಂದು ತೀರ್ಮಾನವನ್ನು ಅಂದು ತೆಗೆದುಕೊಳ್ಳದೇ ಹೋಗಿದ್ದರೆ, ಇಂದು ಬಿಜೆಪಿ ಮತ್ತು ಜೆಡಿಎಸ್‌ಗೆ ದೊಡ್ಡ ನಷ್ಟವೇ ಆಗುತಿತ್ತು. ಅದರ ಲಾಭ ಆಡಳಿತರೂಢ ಕಾಂಗ್ರೆಸ್ ಪಾಲಾಗುತಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗಾದ ಹೀನಾಯ ಸೋಲು, ಹಲವು ಪಾಠ ಕಲಿಸಿತು. ಅದು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ರಾಜಕಾರಣಕ್ಕೆ ಮುನ್ನುಡಿ ಬರೆಯಿತು.ಮತ್ತೆ ದೋಸ್ತಿಗಾಗಿ ಕೈ ಚಾಚಿದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಎಣೆದ ರಾಜಕೀಯ ತಂತ್ರಕ್ಕೆ, ಬಿಜೆಪಿ ವರಿಷ್ಠರು ಸಾಥ್ ನೀಡಿದ್ದು ಕೂಡ ಎನ್‌ಡಿಎಗೆ 19 ಸ್ಥಾನ ಸಿಗಲು ಮುಖ್ಯ ಕಾರಣ. ಒಂದು ವೇಳೆ ದೋಸ್ತಿ ಆಗದಿದ್ದರೆ ಬಿಜೆಪಿಗೂ ಹೆಚ್ಚು ನಷ್ಟವೇ ಆಗುತಿತ್ತು. ಇಲ್ಲದಿದ್ದರೆ, ಕಾಂಗ್ರೆಸ್ ಕನಿಷ್ಠ 15 ಸ್ಥಾನ ದಾಟಲು ಸಾಧ್ಯವಾಗುತಿತ್ತು.
ಗ್ಯಾರಂಟಿ ಅಲೆ ವಿರುದ್ದ ಈಜಿದ ಮೈತ್ರಿಗ್ಯಾರಂಟಿಗಳ ಭರವಸೆ ಅಲೆಯಲ್ಲಿ ಕಾಂಗ್ರೆಸ್ ಗೆದ್ದು, ಅಧಿಕಾರ ಹಿಡಿದಾಗ ಜೆಡಿಎಸ್ ಮುಂದೆ ಯಾವ ಆಯ್ಕೆಗಳು ಇರಲಿಲ್ಲ. ಬೀಸುವ ದೊಣ್ಣೆ ತಪ್ಪಿಸಿಕೊಂಡು ತನ್ನ ಅಸ್ಥಿತ್ವ ಉಳಿಸಿಕೊಳ್ಳುವುದಷ್ಟೆ ಜೆಡಿಎಸ್‌ಗೆ ಅನಿವಾರ್ಯವಾಗಿತ್ತು. ಮತ್ತೊಂದೆಡೆ ಬಿಜೆಪಿಗೂ ಕೂಡ ಇದು ಸಂಕ್ರಮಣದ ಕಾಲಘಟ್ಟ. ಸೋಲಿನ ಆಘಾತದಿಂದ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದೊಂದೇ ಬಿಜೆಪಿ ವರಿಷ್ಠರ ಮುಂದಿನ ಸವಾಲಾಗಿತ್ತು. ದೋಸ್ತಿ ನಡೆಯಿಂದ ಗ್ಯಾರಂಟಿಗಳ ವಿರುದ್ದ ಈಜಲು ಸಾಧ್ಯವಾಗಿದೆ.
ಬಿಎಸ್‌ವೈ ಎಚ್‌ಡಿಕೆ ಜೋಡಿ2006ರಲ್ಲಿ ಮೈತ್ರಿ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿ, ಹಳೆ ದೋಸ್ತಿಗಳಾಗಿದ್ದ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ನಡೆದ ಮಾತುಕತೆ ಮೈತ್ರಿ ರಾಜಕಾರಣ ಮತ್ತೆ ಚಿಗುರೊಡೆಯಲು ಕಾರಣ. ನೀವು ದೆಹಲಿಯಲ್ಲಿ ವರಿಷ್ಠರಿಂದ ಗ್ರೀನ್ ಸಿಗ್ನಲ್ ಪಡೆದು ಬನ್ನಿ. ಇನ್ನುಳಿದ ಕಾರ್ಯತಂತ್ರವನ್ನು ಇಲ್ಲಿ ನಾವು ನೀವು ಸೇರಿ ಒಟ್ಟಿಗೆ ಮಾಡೋಣ ಎಂದು ಯಡಿಯೂರಪ್ಪ ಅವರು ಹೇಳಿದ ಕಿವಿ ಮಾತನ್ನು ಕುಮಾರಸ್ವಾಮಿ ಅನುಷ್ಠಾನಕ್ಕೆ ತರಲು ಹೆಚ್ಚು ಸಮಯ ಬೇಕಾಗಲಿಲ್ಲ. ಪಕ್ಷದಲ್ಲಿ ವಿರೋಧ ಇದ್ದರೂ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನವೊಲಿಕೆ ಮಾಡಿದ ಕುಮಾರಸ್ವಾಮಿ, ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರನ್ನು ಭೇಟಿ ಮಾಡಿಸಿ ಮೈತ್ರಿ ರಾಜಕಾರಣಕ್ಕೆ ಮುನ್ನುಡಿ ಬರೆದರು.
ಅಪಸ್ವರ ನಿಭಾಯಿಸಿದ್ದ ಬಿಎಸ್‌ವೈದೆಹಲಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹೊರಟಿದ್ದಕ್ಕೆ ಬಿಜೆಪಿಯಲ್ಲಿಯೇ ಅಪಸ್ವರ ಎದ್ದಿತು. ಅದನ್ನು ತಮ್ಮ ರಾಜಕೀಯ ಅನುಭವ ಮತ್ತು ಚಾಣಕ್ಷತನದಿಂದ ನಿಭಾಯಿಸಿದ ಯಡಿಯೂರಪ್ಪ, ಮೈತ್ರಿ ರಾಜಕಾರಣದ ಪರವಾಗಿಯೇ ನಿಂತರು. ಪುತ್ರ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹಿನ್ನೆಡೆ ಆಗಬಾರದು ಎನ್ನುವುದು ಮತ್ತು ದೋಸ್ತಿ ಮೂಲಕವೇ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲಬೇಕು ಎನ್ನುವುದು ಯಡಿಯೂರಪ್ಪ ಅವರ ಸ್ಪಷ್ಟ ಗುರಿಯಾಗಿತ್ತು.ಮೈತ್ರಿ ಬಗ್ಗೆ ಪಕ್ಷದೊಳಗೆ ಎದ್ದ ಅಪಸ್ವರವನ್ನು ನಿದಾನವಾಗಿ ಮಣಿಸಿದ ಬಿಎಸ್‌ವೈ, ಪುತ್ರನಿಗಾಗಿ ಪಿಚ್ ಸಿದ್ಧಪಡಿಸಿದರು. ಬಿಜೆಪಿ ಅಧ್ಯಕ್ಷ ಹುದ್ದೆಯಲ್ಲಿದ್ದು ಕನಿಷ್ಠ 15 ಸ್ಥಾನಗಳನ್ನು ಗೆಲ್ಲದೆ ಹೋದರೆ, ಪಕ್ಷದೊಳಗಿರುವ ಹಿತಶತ್ರುಗಳ ಎದುರು ತಲೆತಗ್ಗಿಸಿ ನಿಲ್ಲಬೇಕಾಗುತ್ತದೆ ಎನ್ನುವ ಅರಿವು ಇಟ್ಟುಕೊಂಡೇ ಕಾರ್ಯತಂತ್ರ ಎಣೆಯುತ್ತಾ ಬಂದಿದ್ದು ಬಂಪರ್ ಬೆಳೆಯನ್ನೆ ನೀಡಿದೆ.
ಆತಂಕವಿಲ್ಲದ ದೋಸ್ತಿ ದೋಣಿಚುನಾವಣೆ ೋಷಣೆಯಾದ ದಿನದಿಂದ ಹಿಡಿದು ಚುನಾವಣೆ ಮುಗಿಯುವ ತನಕವೂ ದೋಸ್ತಿ ಪಕ್ಷಗಳಲ್ಲಿ ಎಲ್ಲಿಯೂ ವ್ಯತ್ಯಾಸಗಳಾಗದಂತೆ ನಿಭಾಯಿಸಿದ್ದರ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಶಕ್ತಿ ಮತ್ತು ಅನುಭವ ಕೆಲಸ ಮಾಡಿದೆ. ಈ ದೋಸ್ತಿಯ ದೋಣಿ ಎಲ್ಲಿಯೂ ಅವಘಡಗಳಿಗೆ ಸಿಲುಕದಂತೆ ಎಚ್ಚರದಿಂದ ರಾಜ್ಯದಲ್ಲಿ ಮುನ್ನೆಡೆಸಿದ ಹೆಗ್ಗಳಿಕೆ ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರದ್ದು. ದೋಸ್ತಿಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದ್ದರೂ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಅಲೆಯ ವಿರುದ್ದ ಈಜುವುದು ಬಿಜೆಪಿಗೆ ಕಷ್ಟವಾಗುತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಬಿಜೆಪಿಗೆ ಲಾಭವಾಗಿದ್ದು ಎಲ್ಲೆಲ್ಲಿ?ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ವಿಜಯಪುರ, ಬಾಗಲಕೋಟೆ, ಉಡುಪಿ ಚಿಕ್ಕಮಗಳೂರು, ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್‌ನಿಂದ ಭರ್ಜರಿಯಾಗಿಯೇ ಲಾಭವಾಗಿದೆ.
ಜೆಡಿಎಸ್‌ಗೆ ಲಾಭವಾಗಿದ್ದು ಎಲ್ಲಿಮೈತ್ರಿಯಿಂದಾಗಿ ಜೆಡಿಎಸ್‌ಗೆ ಸಿಕ್ಕಿದ್ದು ಮೂರು ಸ್ಥಾನ. ಮಂಡ್ಯ ಮತ್ತು ಕೋಲಾರದಲ್ಲಿ ಜೆಡಿಎಸ್ ಗೆಲುವು ಸಾಧಿಸಲು ಬಿಜೆಪಿ ಪಾಲು ಇದೆ.
ಒಕ್ಕಲಿಗ ಅಸ್ಮಿತೆ ಉಳಿಸಿಕೊಂಡ ಜೆಡಿಎಸ್ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಳೆಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಾರುಪತ್ಯ ಸಾಧಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಭಾವವೂ ಕಾರಣವಾಗಿತ್ತು. ಜೆಡಿಎಸ್ ಭದ್ರಕೋಟೆಯಲ್ಲಿ ಒಕ್ಕಲಿಗ ನಾಯಕನಾಗಿ ಹೊರಹೊಮ್ಮಿದ್ದ ಡಿಕೆಶಿಗೆ ಈ ಚುನಾವಣೆ ದೊಡ್ಡ ಸವಾಲಾಗಿತ್ತು. ಹಳೆ ಮೈಸೂರು ಭಾಗದಲ್ಲಿ ಡಿಕೆಶಿ ಕೈ ಮೇಲಾಗದಂತೆ ತಡೆದಿರುವ ಜೆಡಿಎಸ್, ಒಕ್ಕಲಿಗರ ಅಸ್ಮಿತೆ ಉಳಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + one =
Remember me
