ವಿಲಾಸ ಮೇಲಗಿರಿ ಬೆಂಗಳೂರುರಾಜ್ಯದಲ್ಲಿ ಮತದಾರರ ಗುರುತಿನ ಚೀಟಿ ಹಗರಣದ ಹಸಿ ಇನ್ನೂ ಮಾಸಿಲ್ಲ. ಮತದಾರರ ವೈಯಕ್ತಿಕ ಮಾಹಿತಿ (ದತ್ತಾಂಶ) ಕಳವು ಪ್ರಕರಣದಲ್ಲಿ ಐಎಎಸ್ ಅಧಿಕಾರಿಗಳು ಜೈಲು ಕಂಬಿ ಎಣಿಸಿದ್ದು ಇನ್ನೂ ಹಚ್ಚಹಸಿರಾಗಿದೆ. ಈ ನಡುವೆ, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಿ, ಚುನಾವಣೆಯಲ್ಲಿ ಪಾರದರ್ಶಕತೆ ತರಲು ಮುಖ್ಯ ಚುನಾವಣಾಧಿಕಾರಿ ಕಚೇರಿ ಗಟ್ಟಿ ಹೆಜ್ಜೆ ಇಟ್ಟಿದೆ.
ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು, ಒಂದೇ ರೀತಿಯ ಭಾವಚಿತ್ರ ಇರುವ ಮತದಾರರ ಗುರುತಿನ ಚೀಟಿವುಳ್ಳವರು, ಒಂದೇ ಹೆಸರು, ವಿಳಾಸವಿದ್ದು, ಎರಡು ಅಥವಾ ಮೂರು ಕಡೆ ಮತದಾರರ ಪಟ್ಟಿಯಲ್ಲಿರುವವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ರಾಜ್ಯದಲ್ಲಿ ಈ ರೀತಿಯ 4 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಪಟ್ಟಿಯಲ್ಲಿರುವುದನ್ನು ಪತ್ತೆ ಹಚ್ಚಲಾಗಿದೆ. ಈ ಮತದಾರರಿಗೆ ಕಾರಣ ಕೇಳಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಅಂಚೆ ಮೂಲಕ ನೋಟಿಸ್ ರವಾನಿಸಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನಕಲು ಮಾಡಿರುವ ಅಥವಾ ಎರಡು ಅದಕ್ಕಿಂತ ಹೆಚ್ಚು ಕಡೆ ಕಡೆ ಮತದಾರರರ ಪಟ್ಟಿಯಲ್ಲಿ ಹೆಸರು ಇರುವವರಿಗೆ ನೋಟಿಸ್​ಗೆ ಉತ್ತರ ನೀಡಲು 15 ದಿನ ಗಡುವು ನೀಡಲಾಗಿದೆ. ತಪ್ಪಿದಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್​ಒ) ಖುದ್ದು ಅವರ ಮನೆಗೆ ತೆರಳಿ ಸ್ಪಷ್ಟನೆ ಕೇಳಲಿದ್ದಾರೆ.
ನೋಟಿಸ್ ಬಳಿಕ ವಿಚಾರಣೆ:ಎರಡು/ಮೂರು ಕಡೆ ಹೆಸರು ಹೊಂದಿದವರು ನೋಟಿಸ್​ಗೆ ಉತ್ತರ ನೀಡಿದ ಬಳಿಕ ಅವುಗಳ ವಿಚಾರಣೆ ನಡೆಯುತ್ತದೆ. ವಿಚಾರಣೆಯಲ್ಲಿ ತಪ್ಪು ಸಾಬೀತಾದಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾರ್ಗದರ್ಶನ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ. ಕೆಲವರು ಒಂದೇ ಹೆಸರು, ಒಂದೇ ವಯಸ್ಸು, ವಿಳಾಸ ನೀಡಿ ಮತದಾರರ ಗುರುತಿನ ಚೀಟಿ ಪಡೆದಿದ್ದಾರೆ. ಕೆಲವರು ಒಂದೊಂದು ಬೂತ್​ನಲ್ಲಿ ಒಂದೊಂದು ಪಡೆದಿದ್ದಾರೆ. ಇನ್ನು ಅಚ್ಚರಿ ಎಂದರೆ ಒಂದೇ ಫೋಟೋ ನೀಡಿ 3-4 ಕಡೆ ಗುರುತಿನ ಚೀಟಿ ಪಡೆದಿರುವುದೂ ಬೆಳಕಿಗೆ ಬಂದಿದೆ.
ನೋಂದಾಯಿತ ಅಂಚೆ ಮೂಲಕ ನೋಟಿಸ್:ಅಂಚೆ ಕಚೇರಿಯಿಂದ ರಿಜಿಸ್ಟರ್ಡ್ ಪೋಸ್ಟ್ ಮೂಲಕ ನೋಟಿಸ್ ಜಾರಿ ಮಾಡುವುದರಿಂದ ನೋಟಿಸ್ ತಲುಪಿಯೇ ಇಲ್ಲ ಎಂದು ಕಾರಣ ಹೇಳುವಂತೆಯೂ ಇಲ್ಲ.
ಡಿಸಿಇ/ಪಿಸಿಇ ಅಕ್ರಮ:ಡೆಮೊಗ್ರಫಿಕಲಿ ಸಿಮಿಲರ್ ಎಂಟ್ರಿ (ಡಿಸಿಇ) ಹಾಗೂ ಫೋಟೋ ಸಿಮಿಲರ್ ಎಂಟ್ರಿ(ಪಿಸಿಇ) ಹೀಗೆ ಎರಡು ವರ್ಗಗಳಲ್ಲಿ ಮತದಾರರ ಅಕ್ರಮ ಪತ್ತೆ ಮಾಡಲಾಗಿದೆ. ಅನೇಕ ಮತದಾರರು ಒಂದೇ ಹೆಸರು, ವಿಳಾಸ, ಲಿಂಗ, ವಯಸ್ಸು, ತಂದೆ ಹೆಸರುಗಳನ್ನು ನಮೂದು ಮಾಡಿದ್ದಾರೆ. ಅವುಗಳನ್ನು ಜನಸಂಖ್ಯಾ ಶಾಸ್ತ್ರೀಯ ನಮೂದೆಂದು ಪರಿಗಣಿಸಲಾಗುತ್ತದೆ. ಒಂದೇ ರೀತಿಯ ಫೋಟೋ ಉಳ್ಳವುಗಳನ್ನು ಏಕಪ್ರಕಾರದ ಫೋಟೋ ನಮೂದು ಎಂದು ಪರಿಗಣಿಸಿ ನೋಟಿಸ್ ಜಾರಿ ಮಾಡಲಾಗಿದೆ.
ಹೆಸರು ಅಳಿಸುವಿಕೆ ಆರಂಭ:ನೋಟಿಸ್, ಸ್ಪಷ್ಟನೆ ಮೊದಲಾದ ಪ್ರಕ್ರಿಯೆ ಪೂರ್ಣಗೊಂಡ ನಂತರ 2-3 ಕಡೆ ಇರುವ ಮತದಾರರ ಹೆಸರನ್ನು ಅಳಿಸುವ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತದೆ. ಬಿಎಲ್​ಒಗಳು ಭೇಟಿ ನೀಡಿದಾಗ ಮನೆಯಲ್ಲಿ ಯಾರೂ ಇಲ್ಲದಿರುವುದು ಕಂಡುಬಂದರೆ ಸ್ಥಳೀಯರ ಸಮಕ್ಷಮದಲ್ಲಿ ಮಹಜರು ಮಾಡಿ ಚುನಾವಣಾಧಿಕಾರಿಗೆ ವರದಿ ಸಲ್ಲಿಸುತ್ತಾರೆ. ಬಳಿಕ ಚುನಾವಣಾಧಿಕಾರಿಗಳು ಮತದಾರರ ಯಾದಿಯಿಂದ ಅಂತಹ ಹೆಸರನ್ನು ತೆಗೆದು ಹಾಕುವ ಪ್ರಕ್ರಿಯೆ ಕೈಗೊಳ್ಳುತ್ತಾರೆ.
ಅವಳಿ ವ್ಯಕ್ತಿಗಳಾದರೆ:ಅವಳಿ-ಜವಳಿ ಇರುವವರು ಒಂದೇ ರೀತಿ ಇದ್ದರೆ, ಅಥವಾ ತಪ್ಪಾಗಿ ಒಂದೇ ಫೋಟೋ ಬೇರೆ ಬೇರೆ ನಮೂದಾಗಿದ್ದರೆ ಅದನ್ನು ಮತದಾರರೇ ಖಾತ್ರಿಪಡಿಸಿ ದೃಢೀಕರಣ ಪತ್ರ ನೀಡಬೇಕು.
ನೋಟಿಸ್ ಜತೆಗೆ ದೃಢೀಕರಣ ಪತ್ರ:ಮುಖ್ಯ ಚುನಾವಣಾಧಿಕಾರಿ ಕಚೇರಿ ನೋಟಿಸ್ ಅಷ್ಟೇ ನೀಡಿಲ್ಲ, ಅದರ ಜತೆಗೆ ದೃಢೀಕರಣ ಪತ್ರವನ್ನೂ ಕಳುಹಿಸಿದೆ. ಈ ಪತ್ರದಲ್ಲಿ ಒಂದೇ ಹೆಸರು, ವಿಳಾಸ ಎಷ್ಟು ಕಡೆ ನಮೂದಾಗಿದೆಯೋ ಅದೆಲ್ಲವನ್ನೂ ಮುದ್ರಿಸಲಾಗಿದೆ. ಮತದಾರರು ಅದನ್ನು ಪರಿಶೀಲಿಸಿ ತಮಗೆ ಬೇಕಾದ ಒಂದು ನಿರ್ದಿಷ್ಟ ಸ್ಥಳವನ್ನು ಉಳಿಸಿಕೊಳ್ಳಲು ಕೋರಿ ದೃಢೀಕರಣ ಪತ್ರವನ್ನು ಬಿಎಲ್​ಒಗಳಿಗೆ ಸಲ್ಲಿಸಬೇಕಾಗುತ್ತದೆ. ದೃಢೀಕರಣ ಪತ್ರ ಸಲ್ಲಿಸದಿದ್ದರೆ ಎಲ್ಲೆಲ್ಲಿ ಹೆಸರು ನೋಂದಣಿ ಆಗಿರುತ್ತದೆಯೋ ಆ ಎಲ್ಲ ಬಿಎಲ್​ಒಗಳು ಏಕಕಾಲಕ್ಕೇ ಮತದಾರರ ಮನೆಗೆ ತೆರಳಿ ವಿಳಾಸ ಖಾತ್ರಿಪಡಿಸಿಕೊಳ್ಳುತ್ತಾರೆ.
ಹಲವೆಡೆ ಮತದಾರರ ಹೆಸರು ಇರುವವರು, ಒಂದೇ ರೀತಿಯ ಫೋಟೋ ನಮೂದಾಗಿರುವವರಿಗೆ ನೋಟಿಸ್ ನೀಡಿದ್ದೇವೆ. 15 ದಿನದ ಒಳಗೆ ಉತ್ತರ ನೀಡಬೇಕು. ಇಲ್ಲದೇ ಹೋದರೆ ಬಿಎಲ್​ಒಗಳು ಅಂತಹವರ ಮನೆಗೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಲಿದ್ದಾರೆ.
| ವೆಂಕಟೇಶ್ ಕುಮಾರ್ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ, ಸಿಇಒ ಕಚೇರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
