ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರಬೀಳಲಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣ ಸದ್ದು ಜೋರಾಗಿದ್ದು, ನಿನ್ನೆ (ಮಾ.28) ಒಂದೇ ದಿನ ಬೆಂಗಳೂರು ಪೊಲೀಸರು ಭರ್ಜರಿ ಬೇಟೆ ಆಡಿದ್ದಾರೆ.
ನಿನ್ನೆ ಒಂದೇ ದಿನಕ್ಕೆ 1.85 ಕೋಟಿ ರೂ. ನಗದು, 3.4 ಕೆಜಿ ಚಿನ್ನಾಭರಣ ಹಾಗೂ 36 ಕೆಜಿ ಬೆಳ್ಳಿಯಾಭರಣಗಳನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಕೋಟ್ಯಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಸಹ ಪೊಲೀಸರು ಸೀಜ್​ ಮಾಡಿದ್ದಾರೆ.
ಇದನ್ನೂ ಓದಿ:ನೀತಿ ಸಂಹಿತೆ ಉಲ್ಲಂಘನೆ; ರೋಡ್ ಶೋ ವೇಳೆ ತಮಟೆ ಬಡಿಯುವವರಿಗೆ 1 ಸಾವಿರ ರೂ. ಕೊಟ್ಟ ಸಿದ್ದರಾಮಯ್ಯ
ಲಗ್ಗೆರೆಯ ಬಳಿ 1 ಕೋಟಿ ರೂ. ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದರೆ, ಹಲಸೂರು ಗೇಟ್ ಬಳಿ 35 ಲಕ್ಷ ರೂ., ಎಸ್ ಜೆ ಪಾರ್ಕ್ ಬಳಿ 10 ಲಕ್ಷ ರೂ., ಅಮೃತಹಳ್ಳಿಯ ಬಳಿ 30 ಲಕ್ಷ ರೂ., ಹಾಗೂ ಬೆಂಗಳೂರು ಗಡಿ ಭಾಗದಲ್ಲಿ 10 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೋರಮಂಗಲದಲ್ಲಿ 504 ಕುಕ್ಕರ್​ಗಳು, ದೇವನಹಳ್ಳಿಯ ಬಳಿ 536 ಸೀರೆಗಳು, ಡಿಜೆ ಹಳ್ಳಿಯ ಬಳಿ ಲಕ್ಷಾಂತರ ಮೌಲ್ಯದ ಕೊಕೇನ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಹಣ, ಚಿನ್ನಾಭರಣ ಹಾಗೂ ವಸ್ತುಗಳು ಅಕ್ರಮ ಸಾಗಾಟ ನಡೆಯುತ್ತಿದ್ದು, ಪೊಲೀಸ್​ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ.(ದಿಗ್ವಿಜಯ ನ್ಯೂಸ್​)
ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, ಮೇ 13ರಂದು ಫಲಿತಾಂಶ

ಈ ಬಾರಿ M3 EVM ಬಳಕೆ, ಎಲ್ಲ ಪಕ್ಷಗಳ ಜತೆ ಹೊಸ ಯಂತ್ರ ಪರಿಶೀಲನೆ: ರಾಜ್ಯ ಚುನಾವಣಾ ಆಯೋಗ ಮಾಹಿತಿ

ಸಂಸತ್​ ಸದಸ್ಯತ್ವದಿಂದ ರಾಹುಲ್​ ಗಾಂಧಿ ಅನರ್ಹ; ಕಾಂಗ್ರೆಸ್​ ಸಂಸದರಿಂದ ಸಾಮೂಹಿಕ ರಾಜೀನಾಮೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − twelve =
Remember me
