ಬೆಂಗಳೂರು:ವಿಧಾನ ಪರಿಷತ್​ನ ಏಳು ಸ್ಥಾನಕ್ಕೆ ಚುನಾವಣೆಗೆ ದಿನಾಂಕ ನಿಶ್ಚಯವಾಗುತ್ತಿದ್ದಂತೆ ಮೂರು ರಾಜಕೀಯ ಪಕ್ಷಗಳ ಚಾವಡಿಯಲ್ಲಿ ಚರ್ಚೆ ಬಿರುಸುಗೊಂಡಿದೆ. ಬಹುತೇಕ ಅವಿರೋಧ ಆಯ್ಕೆ ನಡೆಯುವ ಕಾರಣ ಚುನಾವಣಾ ರಾಜಕಾರಣದ ಹೊರತಾಗಿ ಶಾಸಕರಾಗ ಬಯಸಿರುವ ಹತ್ತು ಹಲವು ಮುಖಂಡರು ಪ್ರಬಲ ಆಕಾಂಕ್ಷಿಗಳಿದ್ದಾರೆ. ಲಕ್ಷ್ಮಣ ಸವದಿ, ಆರ್.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ಎಚ್.ಎಂ.ರಮೇಶ್ ಗೌಡ, ವೀಣಾ ಅಚ್ಚಯ್ಯ, ನಾರಾಯಣ ಸ್ವಾಮಿ, ಲೆಹರ್ ಸಿಂಗ್ ಸಿರೋಯ್ ಅವರ ಅವಧಿ ಜೂನ್ 14ರಂದು ಕೊನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಏಳು ಸ್ಥಾನಗಳಿಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ. ಇವರಲ್ಲಿ ಬಹುತೇಕ ಎಲ್ಲರು ಮರು ಆಯ್ಕೆ ಬಯಸಿದ್ದರೂ, ಯಾರಿಗೂ ಪುನರಾಯ್ಕೆ ಅವಕಾಶ ಸಿಗುವುದು ಅನುಮಾನ ಎಂಬ ವಾತಾವರಣ ಇದೆ.
ಆಯ್ಕೆ ಹೇಗೆ?:ವಿಧಾನಸಭೆಯ ಶಾಸಕರ ಬಲದ ಆಧಾರದಲ್ಲಿ ವಿಧಾನಪರಿಷತ್​ಗೆ ಆಯ್ಕೆ ನಡೆಯುವುದು. ಶಾಸಕರೇ ಮತದಾರರು. ಪಕ್ಷಗಳ ನಿರ್ಧಾರ ಇಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಪಕ್ಷದ ಹೊರತಾಗಿ ಕಣಕ್ಕಿಳಿಯಲು ಅವಕಾಶ ಇದೆಯಾದರೂ, ನಾಮಪತ್ರ ಸಲ್ಲಿಸುವಾಗ 10 ಶಾಸಕರ ಸಹಿ ಬೇಕಾಗುತ್ತದೆ. ಇದು ಕಷ್ಟ ಸಾಧ್ಯವಾಗುವುದರಿಂದ ಮೂರು ಪಕ್ಷಗಳು ತಮ್ಮ ಶಾಸಕರ ಬಲದ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ. 225 ಸದಸ್ಯ ಬಲದ ವಿಧಾನಸಭೆಯಲ್ಲಿ 7 ಸ್ಥಾನಗಳನ್ನು ವಿಭಜಿಸಿದರೆ ಸರಾಸರಿ ಬಿಜೆಪಿಗೆ 4, ಕಾಂಗ್ರೆಸ್ 2 ಮತ್ತು ಜೆಡಿಎಸ್ ಒಂದು ಸ್ಥಾನ ಸಲೀಸಾಗಿ ಗೆಲ್ಲಬಹುದಾಗಿದೆ. ಸದ್ಯದ ಶಾಸಕರ ಬಲಾಬಲದ ಲೆಕ್ಕ ಪರಿಗಣಿಸಿದರೆ ಈ ಸಮೀಕರಣಕ್ಕೆ ರಾಜಕಾರಣ ಸೀಮಿತವಾಗಿರಲಿದೆ. ಇದೇ ಸಂಖ್ಯೆ ಆಧರಿಸಿ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸಾಗಿದೆ.
ಮತದಾನ ಹೇಗೆ?:ಒಟ್ಟು 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 225 ಸದಸ್ಯ ಬಲವನ್ನು 8ರಿಂದ ಭಾಗಿಸಬೇಕು. ಆಗ 28.125 ಬರುತ್ತದೆ. ಅದಕ್ಕೆ ಒಂದನ್ನು ಕೂಡಿಸಬೇಕು. ಆಗ ಒಂದು ಸ್ಥಾನ ಗೆಲ್ಲಲು 29.125 ಮೊದಲ ಪ್ರಾಶಸ್ಱ ಮತಗಳು ಬೇಕಾಗುತ್ತದೆ. ಅಂದರೆ 30 ಮತಗಳು.
ಬದಲಾಗುವ ಲೆಕ್ಕ:ಈ ಹಿಂದಿನ ಲೆಕ್ಕಾಚಾರಕ್ಕೆ ಹೋಲಿಸಿದಲ್ಲಿ ಬಿಜೆಪಿಯಿಂದ ಇಬ್ಬರು ಆಯ್ಕೆಯಾಗಿದ್ದರು, ಈಗ ಮತ್ತೆ ಎರಡು ಸ್ಥಾನ ಹೆಚ್ಚಿಸಿಕೊಳ್ಳಬಹುದು. ಹೀಗಾದಲ್ಲಿ 75 ಸದಸ್ಯ ಬಲದ ವಿಧಾನಪರಿಷತ್​ನಲ್ಲಿ ಬಿಜೆಪಿ 39 ಸ್ಥಾನಕ್ಕೆ ಏರಿಕೆಯಾಗಿ ಪೂರ್ಣ ಬಹುಮತ ಪಡೆದುಕೊಳ್ಳಲಿದೆ. ಕಾಂಗ್ರೆಸ್ ಬಲ 26ರಿಂದ 24ಕ್ಕೆ ಕುಗ್ಗಲಿದೆ. ಜೆಡಿಎಸ್ ಬಲ 10ರಿಂದ 9ಕ್ಕೆ ಇಳಿಕೆಯಾಗುವುದು.
ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಲಾಭಕರವಾಗುವಂತಹ ಆಯ್ಕೆ ಆಗಬೇಕು ಮತ್ತು ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ ಕೊಡಬೇಕೆಂಬ ವಾದವಿದೆ. ಈವರೆಗೆ ಯಾವುದೇ ಹೆಸರು ಮುನ್ನೆಲೆಗೆ ಬಂದಿಲ್ಲ. ಲಕ್ಷ್ಮಣ ಸವದಿ ಹಾಗೂ ಲೆಹರ್ ಸಿಂಗ್ ಮರು ಆಯ್ಕೆ ಬಯಸಿದ್ದಾರೆ. ಆದರೆ ಅವರಿಬ್ಬರನ್ನು ಪುನಃ ಪರಿಗಣಿಸುವುದು ಅನುಮಾನ.
ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡುವುದು, ಇನ್ನೊಂದು ಸ್ಥಾನವನ್ನು ಎಸ್ಸಿ-ಎಸ್ಟಿ ಸಮುದಾಯಕ್ಕೆ ನೀಡಬೇಕೆಂದಿದೆ. ಬಿ.ಎಲ್.ಶಂಕರ್, ನಿವೇದಿತಾ ಆಳ್ವಾ, ಎಸ್.ಕೆ. ಹುಸೇನ್, ಮನ್ಸೂರ್ ಅಲಿಖಾನ್, ನಾರಾಯಣ ಸ್ವಾಮಿ, ಆರ್.ಬಿ.ತಿಮ್ಮಾಪುರ್, ಪುಷ್ಪಾ ಅಮರನಾಥ್ ಹೆಸರು ಚಲಾವಣೆಯಲ್ಲಿದೆ.
ಎರಡರಲ್ಲಿ ಒಂದು ಸ್ಥಾನ ಮಾತ್ರ ಉಳಿಯಲಿದ್ದು, ಅದನ್ನು ಪಡೆದುಕೊಳ್ಳಲು ಪೈಪೋಟಿ ಹೆಚ್ಚಿದೆ. ರಮೇಶ್ ಗೌಡ ಮರು ಆಯ್ಕೆಗೆ ಯತ್ನಿಸಿದ್ದಾರೆ. ಅವರನ್ನು ಹೊರತುಪಡಿಸಿದರೆ ಪಕ್ಷದ ಅಧ್ಯಕ್ಷರಾಗಿರುವ ಸಿ.ಎಂ.ಇಬ್ರಾಹಿಂ ಕೂಡ ಪ್ರಬಲ ಆಕಾಂಕ್ಷಿ. ಅವಕಾಶ ಕೊಡುವ ಭರವಸೆಯನ್ನೂ ಪಡೆದುಕೊಂಡಿದ್ದಾರೆಂಬ ಮಾಹಿತಿ ಇದೆ. ಶರವಣ, ಕುಪೇಂದ್ರ ರೆಡ್ಡಿ ಕೂಡ ಕಣ್ಣಿಟ್ಟಿದ್ದಾರೆ.
ಇನೊಂದಕ್ಕೆ ಪ್ರತ್ಯೇಕ ಅಧಿಸೂಚನೆ:ವಿಧಾನಸಭೆಯಿಂದ ವಿಧಾನಪರಿಷತ್​ಗೆ ಆಯ್ಕೆಯಾಗಿದ್ದ ಸಿ.ಎಂ.ಇಬ್ರಾಹಿಂ ತಮ್ಮ ಸ್ಥಾನಕ್ಕೆ ರಾಜೀನಾಮ ನೀಡಿದ್ದಾರೆ. ಆ ಶಾಸಕತ್ವದ ಅವಧಿ 2024ರ ಜೂನ್ 17ರಂದು ಕೊನೆಯಾಗಲಿದೆ. ಹೀಗಾಗಿ ಈ ಸ್ಥಾನಕ್ಕೆ ಸಹ ಶೀಘ್ರವೇ ಪ್ರತ್ಯೇಕ ಅಧಿಸೂಚನೆ ಹೊರಡಲಿದೆ.
ಬೆಂಗಳೂರು:ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೈ ತಪು್ಪವ ಆತಂಕ ಎದುರಾಗಿದೆ. ಸುಪ್ರೀಂಕೋರ್ಟ್ ಮಹಾರಾಷ್ಟ್ರದ ಪ್ರಕರಣದಲ್ಲಿ ಆಯೋಗ ರಚನೆ ಮಾಡಿ ಅಧ್ಯಯನ ಮಾಡುವ ಮೂಲಕ ಮೀಸಲಾತಿ ನೀಡುವಂತೆ ಹೇಳಿತ್ತು. ಆದರೆ ರಾಜ್ಯ ಸರ್ಕಾರ ಸಾಕಷ್ಟು ವಿಳಂಭ ಮಾಡಿ, ನ್ಯಾಯಮೂರ್ತಿ ಭಕ್ತವತ್ಸಲಂ ನೇತೃತ್ವದಲ್ಲಿ ಸೋಮವಾರವಷ್ಟೇ ಆಯೋಗ ರಚನೆ ಮಾಡಿದೆ. ಸುಪ್ರೀಂಕೋರ್ಟ್ ಮಧ್ಯಪ್ರದೇಶಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಪ್ರಕಾರ, ಈಗಾಗಲೆ ಆಯೋಗದ ಮೂಲಕ ಅಧ್ಯಯನ ಮಾಡಿದ್ದರೆ ಅದರ ಪ್ರಕಾರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಹುದು, ಇಲ್ಲದಿದ್ದರೆ ವಿಳಂಬ ಮಾಡುವಂತಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಸರ್ಕಾರದ ಮುಂದೆ ಈಗ ಎರಡು ದಾರಿಗಳಿವೆ. ತಕ್ಷಣ ಹಿಂದುಳಿದ ವರ್ಗಗಳ ಆಯೋಗದ ಗಣತಿ ವರದಿಯ ಅಂಕಿ-ಅಂಶ ಪಡೆದು ನ್ಯಾ.ಭಕ್ತವತ್ಸಲ ಆಯೋಗದ ಮೂಲಕ ಸುಪ್ರೀಂಕೋರ್ಟ್​ಗೆ ಸಲ್ಲಿಸಿ ಜಾರಿ ಮಾಡುವುದು, ಇಲ್ಲದಿದ್ದರೆ ಮೀಸಲಾತಿ ಬಿಟ್ಟು ಚುನಾವಣೆ ಮಾಡುವುದು. ಸರ್ಕಾರ ಸಂದಿಗ್ಧ ಸ್ಥಿತಿಯಲ್ಲಿ ಇರುವುದರಿಂದಲೇ ಕಾನೂನು ತಜ್ಞರ ಜತೆ ಚರ್ಚೆ ನಡೆಸಲು ಮುಂದಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ರಾಜಕೀಯ ಮುತ್ಸದ್ಧಿಗಳು, ಹಾಲಿ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಅನೇಕರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲು ಸಂಪರ್ಕ ಮಾಡುತಿ ದ್ದಾರೆ. ಮಧ್ಯವರ್ತಿಗಳನ್ನ ನನ್ನ ಬಳಿ ಕಳಿಸಿ ಪಾರ್ಟಿಗೆ ಸೇರಿಸಿಕೊಳ್ಳಿ ಎಂದು ದುಂಬಾಲು ಬಿದ್ದಿದ್ದಾರೆ. ಬಿಜೆಪಿಯ ಮಿಷನ್ 150ಕ್ಕೆ ಕಲ್ಯಾಣ ಕರ್ನಾಟಕದಿಂದ ಅತಿ ಹೆಚ್ಚು ಶಾಸಕರನ್ನ ಕೊಡುತ್ತೇವೆ.
|ಬಿ.ಶ್ರೀರಾಮುಲುಸಾರಿಗೆ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 4 =
Remember me
