
ಬೆಂಗಳೂರು:ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮನ್ಸೂರ್ ಅಲಿಖಾನ್ ಅವರು 62.19 ಕೋಟಿ ರೂ ಬೆಲೆಯ ಆಸ್ತಿ ಪಾಸ್ತಿ ಹೊಂದಿದ್ದಾರೆ.1.09 ಕೋಟಿ ಬೆಲೆಯ ಬಿಎಂಡಬ್ಲೂೃ ಕಾರು, 98.18 ಲಕ್ಷ ಬೆಲೆಯ ಆಡಿ ಕಾರು, 1.35 ಕೋಟಿ ಬೆಲೆಯ ಚಿನ್ನಾಭರಣ, ಪತ್ನಿ ಬಳಿ 2.27 ಕೋಟಿ ಬೆಲೆಯ ಚಿನ್ನಾಭರಣ, ನಗದು 4.50 ಲಕ್ಷ ರೂ, ಪತನ್‌ಇ ಬಳಿ ನಗದು 4 ಲಕ್ಷ ರೂ ಹೊಂದಿದ್ದಾರೆ.ಕೊಡಗು ಜಿಲ್ಲೆ ನಾಪೊಕ್ಲುವಿನಲ್ಲಿ ಸಹೋದರನ ಜೊತೆಯಲ್ಲಿ 6 ಎಕರೆ ಜಮೀನು, ದಾಸನಾಪುರ ಹೋಬಳಿ ಹೊಂಬರಹಳ್ಳಿಯಲ್ಲಿ 26.17 ಗುಂಟೆ ಜಮೀನು ಹೊಂದಿದ್ದಾರೆ.ಬೆಂಗಳೂರು ನಗರ ಜಿಲ್ಲೆಯ ನಾನಾ ಕಡೆಯಲ್ಲಿ, ಮೈಸೂರು ಮತ್ತು ಶ್ರೀರಂಗಪಟ್ಟಣದಲ್ಲಿ ಕೃಷಿಯೇತರವಾದ 20 ಕೋಟಿ ರೂ ಅಂದಾಜಿನ 17 ಎಕರೆ ಜಮೀನಿದೆ. ನಾನಾ ಕಡೆಯಲ್ಲಿ 10 ಕೋಟಿ ರೂ ಬೆಲೆ ಬಾಳುವ ಸೈಟುಗಳಿವೆ. 14.81 ಕೋಟಿ ಬೆಲೆಯ ಮೂವಬಲ್ ಆಸ್ತಿ ಪಾಸ್ತಿಗಳಿದ್ದರೆ, ಇನ್ನುಳಿದವು ಸ್ಥಿರ ಆಸ್ತಿಗಳಾಗಿವೆ. ನಾನಾ ಬ್ಯಾಂಕ್ ಗಳಲ್ಲಿ ಮತ್ತು ವೈಯುಕ್ತಿ ಕೈ ಸಾಲ ಸೇರಿ 6.84 ಕೋಟಿ ರೂ ಸಾಲವಿದೆ. ಪತ್ನಿ ಹೆಸರಿನಲ್ಲಿಯೂ 2.19 ಕೋಟಿ ರೂ ಸಾಲವಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + fourteen =
Remember me
