ಬೆಂಗಳೂರು:ರಾಜ್ಯದಲ್ಲಿ ಕೋವಿಡ್​ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದು ಚುನಾವಣಾಧಿಕಾರಿಗಳ ಚಿಂತೆಗೂ ಕಾರಣವಾಗಿದೆ. ಹೀಗಾಗಿ ಕೋವಿಡ್​ ನಿಯಂತ್ರಣ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ಒದಗಿಸಲು ಮುಖ್ಯ ಚುನಾವಣಾ ಆಯುಕ್ತರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆ ಕೋವಿಡ್​ ನಿರ್ವಹಣೆಗೆ ನೋಡಲ್​ ಅಧಿಕಾರಿಗಳನ್ನು ನೇಮಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್​ ಮಾರ್ಗಸೂಚಿ ನಿರ್ವಹಣೆ ಹಾಗೂ ಮೇಲುಸ್ತುವಾರಿ ವಹಿಸಲು ಇಲಾಖೆಯ ಐಡಿಎಸ್​ಪಿ ಯೋಜನಾ ನಿರ್ದೇಶಕ ಡಾ. ರಮೇಶ್​ ಕೌಲ್​ಗುಡ್​ ಅವರನ್ನು ನೋಡಲ್​ ಅಧಿಕಾರಿಯನ್ನಾಗಿ ನೇಮಿಸಿದೆ.
ಅದೇ ರೀತಿ ಜಿಲ್ಲಾಮಟ್ಟದಲ್ಲಿ ಸೋಂಕು ಹರಡುವಿಕೆ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಹರಿಸಲು ಆಯಾ ಜಿಲ್ಲೆಯ ಜಿಲ್ಲಾ ಸರ್ವೈಲೆನ್ಸ್​ (ಕಣ್ಗಾವಲು) ಅಧಿಕಾರಿಗಳನ್ನು ಜಿಲ್ಲಾಮಟ್ಟದ ಅಧಿಕಾರಿಗಳನ್ನಾಗಿ ನೇಮಿಸಿ ಸರ್ಕಾರದ ಅಪರ ಕಾರ್ಯದರ್ಶಿ ಕೆ. ಚಿರಂಜೀವಿ ಆದೇಶಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್​ ಸೋಂಕು ಪರಿಸ್ಥಿತಿ, ಕೇಂದ್ರ ಮತ್ತು ರಾಜ್ಯದ ಮಾರ್ಗಸೂಚಿ, ರಾಜ್ಯ ಕೋವಿಡ್​ ತಾಂತ್ರಿಕ ಸಲಹಾ ಸಮಿತಿಯ ಸೂಚನೆಗಳನ್ನು ಸಮರ್ಪಕ ಜಾರಿಗಾಗಿ ನೋಡಲ್​ ಅಧಿಕಾರಿ ಕ್ರಮವಹಿಸಬೇಕು. ಈ ಕುರಿತು ಚುನಾವಣಾ ಆಯೋಗಕ್ಕೆ ಕಾಲಕಾಲಕ್ಕೆ ಮಾಹಿತಿ ಒದಗಿಸಬೇಕಿದೆ.
ಕೋವಿಡ್​ ಪ್ರಕರಣಗಳು ಹೆಚ್ಚಾದಲ್ಲಿ ಚುನಾವಣೆ ಸಂಬಂಧ ನಡೆಯಲಿರುವ ಪ್ರಚಾರ ಕಾರ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಯೋಗಕ್ಕೆ ತಿಳಿಸಿ ಸಾರ್ವಜನಿಕವಾಗಿ ಸೂಚನೆ ನೀಡಲು ಸಹಕರಿಸಬೇಕಿದೆ. ಅದೇ ರೀತಿ ಜಿಲ್ಲಾಮಟ್ಟದ ಸರ್ವೈಲೆನ್ಸ್​ ಅಧಿಕಾರಿಗಳು ಆಯಾ ಜಿಲ್ಲಾಧಿಕಾರಿಗಳಿಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು. ಯಾವುದೇ ಭಾಗದಲ್ಲಿ ಪ್ರಕರಣಗಳು ಏಕಾಏಕಿ ಹೆಚ್ಚಳವಾದರೆ ಮಾಹಿತಿ ಸಂಗ್ರಹಿಸಿ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಜತೆಗೆ ಜಿಲ್ಲಾಧಿಕಾರಿ ಮೂಲಕ ಮಾರ್ಗಸೂಚಿಯನ್ನು ಜಾರಿಗೆ ತರುವ ಕಾರ್ಯ ಮಾಡಬೇಕಿದೆ.
ಕೋವಿಡ್​ ಸೋಂಕು ಏರಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪರೀೆ ಸಂಖ್ಯೆ ಹೆಚ್ಚಿಸಲಾಗಿದ್ದು, ಬುಧವಾರ 14,096 ಮಂದಿಗೆ ಪರೀೆ ನಡೆಸಲಾಗಿದೆ. ಈ ಪೈಕಿ 327 ಸೋಂಕು ಪ್ರಕರಣಗಳು ವರದಿಯಾಗಿದ್ದು, ದಿನದ ಸೋಂಕು ಪ್ರಮಾಣ ದರ ಶೇ.2.31 ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,498 ಇದ್ದು, ಇವರಲ್ಲಿ 86 ಮಂದಿ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಬಹುತೇಕರು ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರದಲ್ಲಿ ಅತಿಹೆಚ್ಚು 172 ಮಂದಿಗೆ ಸೋಂಕು ದೃಢಪಟ್ಟಿದ್ದು, ಶಿವಮೊಗ್ಗ&49, ದಾವಣಗೆರೆ&23, ಮೈಸೂರು&15, ಕಲಬುರಗಿ&13, ಬೆಂ.ಗ್ರಾಮಾಂತರ&9, ವಿಜಯನಗರ&7, ಚಿಕ್ಕಮಗಳೂರು& ರಾಯಚೂರು ತಲಾ 6, ಧಾರವಾಡ 5, ಕೋಲಾರ 4, ಬೀದರ್​ ಮತ್ತು ಕೊಪ್ಪಳ ತಲಾ ಮೂವರು, ಬಾಗಲಕೋಟೆ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಮಂಡ್ಯದಲ್ಲಿ ತಲಾ ಇಬ್ಬರು ಹಾಗೂ ಚಾಮರಾಜನಗರ, ಚಿತ್ರದುರ್ಗ, ದಣ ಕನ್ನಡ ಮತ್ತು ತುಮಕೂರಿನಲ್ಲಿ ತಲಾ ಒಬ್ಬರಂತೆ 327 ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ದೇಶದಲ್ಲಿ ಅಧಿಕ ಸೋಂಕುಕಾರಕ ಒಮಿಕ್ರಾನ್​ ಉಪ ತಳಿಯ ರೂಪಾಂತರಿತ ಎಕ್ಸ್​ಬಿಬಿ1.16.1ರ ಒಟ್ಟು 234 ಕೇಸ್​ಗಳು ದಾಖಲಾಗಿರುವುದು ಆತಂಕ ಸೃಷ್ಟಿಸಿದೆ. ದೆಹಲಿ, ಗುಜರಾತ್​ ಮತ್ತು ಹರಿಯಾಣಸಹಿತ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ರೂಪಾಂತರಿ ಪತ್ತೆಯಾಗಿದೆ. ಇಂಡಿಯನ್​ ಸಾರ್ಸ್​&ಸಿಒವಿ&2 ಜಿನೋಮಿಕ್ಸ್​ ಕನ್ಸೋರ್ಶಿಯಂ (ಇನ್ಸಾಕಾಗ್​) ದತ್ತಾಂಶಗಳ ಪ್ರಕಾರ 22 ರಾಜ್ಯಗಳು ಮತ್ತು ಯುಟಿಗಳಲ್ಲಿ ಎಕ್ಸ್​ಬಿಬಿ 1.16 ಉಪತಳಿಯ 1,774 ಪ್ರಕರಣಗಳು ಕಂಡುಬಂದಿವೆ. ಆದರೆ, ಇದುವರೆಗಿನ ವರದಿಗಳಂತೆ ದೇಶದಲ್ಲಿ ಗಂಭೀರ ಪ್ರಕರಣಗಳಲ್ಲಿ ಏರಿಕೆಯಾಗಿಲ್ಲ.
7,830 ಹೊಸ ಕೇಸ್​: ಭಾರತದಲ್ಲಿ ಬುಧವಾರ ಬೆಳಗ್ಗೆವರೆಗಿನ ಒಂದು ದಿನದ ಅವಧಿಯಲ್ಲಿ ಕೋವಿಡ್​ ಸಾಂಕ್ರಾಮಿಕದ 7,830 ಪ್ರಕರಣಗಳು ದಾಖಲಾಗಿವೆ. ಹಿಂದಿನ ದಿನದ 5,676ಕ್ಕೆ ಹೋಲಿಸಿದರೆ ಇದು ಭಾರಿ ಜಿಗಿತವಾಗಿದೆ. ಎಂಟು ತಿಂಗಳಲ್ಲೇ ಇದು ಅತ್ಯಧಿಕವಾಗಿದೆ. ಎಂಟು ತಿಂಗಳ ಬಳಿಕ ಇದು ಅತ್ಯಧಿಕವಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 40,215ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಕಳೆದೊಂದು ದಿನದಲ್ಲಿ 16 ಜನರು ಸೋಂಕಿಗೆ ಬಲಿಯಾಗಿದ್ದು, ಮೃತರ ಇದುವರೆಗಿನ ಒಟ್ಟು ಸಂಖ್ಯೆ 5,31,016ಕ್ಕೆ ಏರಿದೆ. ದೆಹಲಿ, ಪಂಜಾಬ್​, ಹಿಮಾಚಲ ಪ್ರದೇಶದಲ್ಲಿ ತಲಾ ಇಬ್ಬರು, ಗುಜರಾತ್​, ಮಹಾರಾಷ್ಟ್ರ, ತಮಿಳುನಾಡು, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಕೇರಳದಲ್ಲಿ ಹಿಂದಿನ ಐದು ಸಾವಿನ ಪ್ರಕರಣಗಳನ್ನು ಕೋವಿಡ್​ ಮರಣ ಎಂದು ಪರಿಗಣಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 5 =
Remember me
