ಚಿತ್ರದುರ್ಗ:ಮತದಾನದ ದಿನವೇ ಕೋಟೆ ನಾಡಿನ ಜೆಡಿಎಸ್​ ಅಭ್ಯರ್ಥಿಗೆ ಚುನಾವಣಾ ಅಧಿಕಾರಿಗಳು ಬಿಗ್​ ಶಾಕ್​ ನೀಡಿದ್ದಾರೆ.
ಚಿತ್ರದುರ್ಗದ ಜೆಡಿಎಸ್​ ಅಭ್ಯರ್ಥಿ ಜಿ. ರಘು ಆಚಾರ್​ ಅವರ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದು, 58 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ರಘು ಆಚಾರ್​ ಅವರ ಮನೆ ಚಿತ್ರದುರ್ಗ ಹೊರವಲಯದ ಕ್ಯಾದಿಗೆರೆಯಲ್ಲಿದೆ.
ವಿಚಕ್ಷಣಾ ದಳದ ಅಧಿಕಾರಿ ರಾಘವೇಂದ್ರ, ಅಬಕಾರಿ ಅಧಿಕಾರಿ ಇಮ್ರಾನ್, ನೋಡಲ್ ಅಧಿಕಾರಿ ಮಧುಸೂದನ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಮತದಾರರಿಗೆ ಹಂಚಲು ಸಿದ್ಧಪಡಿಸಿದ ಹಣವಿದ್ದ ಕವರ್​ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಗ್ರಾಮಪಂಚಾಯತಿಗೆ ಮತಗಟ್ಟೆ ಹೊರೆ?: ಸುತ್ತೋಲೆಗಳಿಂದ ಪಿಡಿಒಗಳು ಸುಸ್ತು
ಸುಮಾರು 50 ಲಕ್ಷ ರೂ.ನಷ್ಟು ಹಣವನ್ನು ಕವರ್​ಗಳಲ್ಲಿ ಹಾಕಿಟ್ಟಿದ್ದರು. 8.83 ಲಕ್ಷ ರೂ.ನಷ್ಟು ನಗದು ಮತ್ತೊಂದೆಡೆ ಸಿಕ್ಕಿದೆ. ಅಲ್ಲದೆ, 239 ಲೀಟರ್ ಬಿಯರ್ ಹಾಗೂ 9 ಲೀಟರ್ ಮದ್ಯವನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳ ತಂಡ ತಮ್ಮ ಪರಿಶೀಲನೆಯನ್ನು ಮುಂದುವರಿಸಿದೆ.
ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.(ದಿಗ್ವಿಜಯ ನ್ಯೂಸ್​)
ಕರ್ನಾಟಕ ಚುನಾವಣೆ 2023: ಹೆಚ್ಚಿನ ಮತದಾನಕ್ಕೆ ಕರೆ ಕೊಟ್ಟ ಪ್ರಧಾನಿ ಮೋದಿ

LIVE| ಕರ್ನಾಟಕ ಚುನಾವಣೆ 2023: ಮತದಾನದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ

ಗ್ರಾಮಪಂಚಾಯತಿಗೆ ಮತಗಟ್ಟೆ ಹೊರೆ?: ಸುತ್ತೋಲೆಗಳಿಂದ ಪಿಡಿಒಗಳು ಸುಸ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 12 =
Remember me
