
ಶಿವಾನಂದ ತಗಡೂರು,ಬೆಂಗಳೂರು:ಮೂರು ದಶಕಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗತವೈಭವ ಮೆರೆದಿದ್ದ ಜೆಡಿಎಸ್‌ಗೆ ಲೋಕಸಭೆ ಚುನಾವಣೆಯಲ್ಲಿ ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದೆ.ಒಕ್ಕಗಲಿರ ಅಸ್ಮಿತೆಯನ್ನು ಜೆಡಿಎಸ್‌ನಲ್ಲಿಯೇ ಉಳಿಸಿಕೊಳ್ಳಲು ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅವಿರತ ಹೋರಾಟ ನಡೆಸಿದ್ದರೆ, ಮತ್ತೊಂದೆಡೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದಕ್ಕೆ ಸಡ್ಡು ಹೊಡೆದು ನಿಂತಿದ್ದಾರೆ. ಯಾರ ಪರವಾಗಿ ಒಕ್ಕಲಿಗರು ನಿಲ್ಲುವರು ಎನ್ನುವುದು ಕೂಡ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ಬಿಜೆಪಿ ಜೊತೆಗೆ ಕೈ ಜೋಡಿಸಿರುವ ಜೆಡಿಎಸ್ ತನ್ನ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಇನ್ನಿಲ್ಲದ ಶ್ರಮ ಹಾಕುತ್ತಿದೆ. ತನ್ನ ಪಾಲಿಗೆ ಬಂದಿರುವ ಮೂರು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವುದು ಸವಾಲಾಗಿದೆ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 16 ಸ್ಥಾನ ಗೆದ್ದಿದ್ದು ಈ ತನಕ ಇರುವ ದಾಖಲೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಸದರನ್ನು ಗೆಲ್ಲಿಸಿಕೊಟ್ಟಿದ್ದ ದೇವೇಗೌಡರಿಗೆ ಪ್ರಧಾನಮಂತ್ರಿ ಹುದ್ದೆಗೇರುವ ಅವಕಾಶವೂ ಲಭ್ಯವಾಗಿತ್ತು ಇತಿಹಾಸ.1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಿಕೊಳ್ಳುವುದು ಇರಲಿ, ಸ್ವತಃ ದೇವೇಗೌಡರೇ ಹಾಸನ ಕ್ಷೇತ್ರದಲ್ಲಿ ಸೋತು ಹೋಗಿದ್ದರು. 2004ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪುಟಿದೆದ್ದ ಜೆಡಿಎಸ್ 58 ಸ್ಥಾನಗಳನ್ನು ಗೆಲ್ಲುವ ಮೂಲಕ ಶೇ.20ರಷ್ಟು ಮತ ಪಡೆದು ರಾಜಕೀಯ ಅಸ್ಥಿತ್ವನ್ನು ಪುನರ್ ಸ್ಥಾಪಿಸಿಕೊಂಡಿತ್ತು.
ಮೈತ್ರಿ ಕಾಲದ ಪರ್ವ2004ರಲ್ಲಿ ಕಾಂಗ್ರೆಸ್ ಜೊತೆಗೆ 2006ರಲ್ಲಿ ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡು ತನ್ನದೇ ರಾಜಕೀಯ ದಾಳ ಉರುಳಿಸಿದ್ದ ಜೆಡಿಎಸ್‌ಗೆ ಇದು ಭಾರಿ ಮಹತ್ವದ ಕಾಲ. ಸಮ್ಮಿಶ್ರ ಸರ್ಕಾರ ಉರುಳಿದ ನಂತರ 2008ರಲ್ಲಿ ವಚನ ಭ್ರಷ್ಟತೆಯ ಆಪಾದನೆ ಎದುರಿಸಿದರೂ, 28 ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿತ್ತು. 2013ರಲ್ಲಿ ತನ್ನ ಶಕ್ತಿಯನ್ನು ಮತ್ತೆ ಹೆಚ್ಚಿಸಿಕೊಂಡ ಜೆಡಿಎಸ್ ಶೇ.19.9 ಮತ ಪಡೆಯುವ ಮೂಲಕ 40 ಶಾಸಕರನ್ನು ಗೆಲ್ಲಿಸಿಕೊಂಡಿತ್ತು. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ.18.3 ಮತ ಪಡೆದ ಜೆಡಿಎಸ್ 37 ಸ್ಥಾನಗಳನ್ನು ಪಡೆಯಲು ಶಕ್ತವಾಗಿತ್ತು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆದಷ್ಟು ಹಿನ್ನೆಡೆ ಹಿಂದೆ ಯಾವಾಗಲೂ ಆಗಿರಲಿಲ್ಲ. ಜೆಡಿಎಸ್ ಮತಗಳಿಕೆ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದ್ದು ದೊಡ್ಡ ಆಘಾತವನ್ನೆ ನೀಡಿತು. ಶೇ.13.29 ಮತ ಪಡೆದ ಜೆಡಿಎಸ್ ಪಡೆದಿದ್ದು ಕೇವಲ 19 ಸ್ಥಾನ ಮಾತ್ರ.
ಶಕ್ತಿ ಕೇಂದ್ರದಲ್ಲಿ ಕುಂದಿದ ವರ್ಚಸ್ಸುಜೆಡಿಎಸ್ ಗಟ್ಟಿಯಾಗಿ ನೆಲೆಯೂರಿದ್ದ ಹಾಸನ, ಮಂಡ್ಯ, ರಾಮನಗರ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಗಣನೀಯವಾಗಿ ಸ್ಥಾನ ಕಡಿಮೆಯಾಗಿದ್ದು ದೊಡ್ಡ ಗೌಡರ ನಿದ್ದೆಗೆಡಿಸಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಹೊರತುಪಡಿಸಿ ಇನ್ನುಳಿದ ಎಲ್ಲಾ ಸ್ಥಾನಗಳನ್ನು ಜೆಡಿಎಸ್ ಕಳೆದುಕೊಂಡಿತು. ರಾಮನಗರ ಜಿಲ್ಲೆಯಲ್ಲಿ ಚನ್ನಪಟ್ಟಣ ಹೊರತುಪಡಿಸಿ ಯಾವ ಸ್ಥಾನವನ್ನು ಗೆಲ್ಲಲು ಆಗಲಿಲ್ಲ. ಹಾಸನ ಜಿಲ್ಲೆಯಲ್ಲಿ ಮೂರು ಶಾಸಕರಷ್ಟೆ ಗೆದ್ದರು. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಜೆಡಿಎಸ್‌ಗೆ ದೊಡ್ಡ ಹಿನ್ನೆಡೆಯಾಗಿದ್ದನ್ನು ಅರಗಿಸಿಕೊಳ್ಳಲು ಇನ್ನೂ ದೊಡ್ಡಗೌಡರಿಗೆ ಸಾಧ್ಯವಾಗಿಲ್ಲ.
ಮತ್ತೆ ಪುಟಿದೇಳುವ ತವಕಜೆಡಿಎಸ್ ಇನ್ನಷ್ಟು ಪ್ರಪಾತಕ್ಕೆ ಬೀಳುವುದನ್ನು ತಡೆಯಲು ಮುಂದಾದ ಗೌಡರು, ಹೇಗಾದರೂ ಮಾಡಿ ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಜೊತೆಗೆ ಕೈಜೋಡಿಸಿದ್ದಾರೆ. ತನ್ನ ರಾಜಕೀಯ ವೈರಿಯೇ ಆಗಿರುವ ಡಿ.ಕೆ.ಶಿವಕುಮಾರ್ ಎದುರು ಸಾವಾಲು ಹಾಕಿ ಪುಟಿದೇಳುವ ತವಕದಲ್ಲಿರುವ ಜೆಡಿಎಸ್‌ಗೆ ಮತ್ತೆ ಎಲ್ಲಿ ಒಕ್ಕಲಿಗರು ಕೈ ಕೊಡುವರೋ ಎನ್ನುವ ಆತಂಕವೂ ಕಾಡುತ್ತಿದೆ. ಜೆಡಿಎಸ್ ವರ್ಚಸ್ಸು ಉಳಿಸಿಕೊಳ್ಳಲು ಮತ್ತು ಒಕ್ಕಲಿಗ ಅಸ್ಮಿತೆಯನ್ನು ಹಿಡಿದಿಟ್ಟುಕೊಳ್ಳಲು ಅವಿರತ ಶ್ರಮ ಹಾಕುತ್ತಿರುವ ದೊಡ್ಡಗೌಡರು, ಹಾಸನ, ಮಂಡ್ಯ ಮತ್ತು ಕೋಲಾರದಲ್ಲಿ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ.
ಎಡೆಮುರಿ ಕಟ್ಟುವ ಯತ್ನಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಸಿ.ಎನ್.ಮಂಜುನಾಥ್ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಅಲ್ಲಿ ಡಿ.ಕೆ.ಶಿವಕುಮಾರ್ ಬ್ರದರ್ಸ್‌ ಎಡೆಮುರಿಕಟ್ಟಬೇಕು ಎನ್ನುವ ನಿಟ್ಟಿನಲ್ಲಿ ಜೆಡಿಎಸ್ ತಂತ್ರಗಾರಿಕೆ ಹೂಡಿದ್ದು, ಅದಕ್ಕೆ ಬಿಜೆಪಿ ಸಾಥ್ ನೀಡಿದೆ.
ಅಳಿವು ಉಳಿವಿನ ಪ್ರಶ್ನೆಎಂಬತ್ತರ ದಶಕ ಜನತಾ ಪರಿವಾರ ಪರ್ವ ಕಾಲ. ತೊಂಬತ್ತರ ದಶಕದಲ್ಲಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಮತ್ತು ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ಹೆಚ್ಚು ಪ್ರವರ್ಧಮಾನಕ್ಕೆ ಬಂದ ಮೇಲೆ ಅನೇಕ ರಾಜಕೀಯ ಏಳುಬೀಳುಗಳನ್ನು ಕಂಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಮೇಲೆಯೆ ಹೆಚ್ಚು ಭಾರ ಬಿಟ್ಟು ಪಕ್ಷ ನಡೆಸುತ್ತಿರುವ ದೊಡ್ಡಗೌಡರಿಗೆ ಈ ಲೋಕಸಭಾ ಚುನಾವಣೆ ಅಳಿವು ಉಳಿವಿನ ಪ್ರಶ್ನೆಯಾಗಿದೆ.
ನಾನಾ-ನೀನಾ?ಒಕ್ಕಲಿಗರ ಕೋಟೆಯಲ್ಲಿ ನಾನಾ, ನೀನಾ ಎನ್ನುವ ರೀತಿಯಲ್ಲಿ ದೇವೇಗೌಡರು ಮತ್ತು ಡಿ.ಕೆ.ಶಿವಕುಮಾರ್ ಕುಟುಂಬಗಳ ನಡುವೆ ನಡೆಯುತ್ತಿರುವ ರಾಜಕೀಯ ಕಾಳಗದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ? ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎನ್ನುವುದು ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
