ಚಿಕ್ಕಮಗಳೂರು:ಅತ್ಯಂತ ಜಾಗರೂಕತೆಯಿಂದ ನಡೆಯಬೇಕಾದ ಚುನಾವಣೆಯಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡ ಪ್ರಕರಣವೊಂದು ನಡೆದಿದೆ. ಅದರಲ್ಲೂ ಬಹುಮುಖ್ಯವಾದ ಇವಿಎಂ ಯಂತ್ರಗಳನ್ನೇ ಮತದಾನದ ಬಳಿ ಮರೆತು ಬಿಟ್ಟುಹೋದ ಪ್ರಸಂಗ ನಡೆದಿದೆ.
ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ಮತದಾನ ಮುಗಿದ ಬಳಿಕ ಮರಳುವಾಗ ಇವಿಎಂ ಯಂತ್ರಗಳನ್ನು ಅಧಿಕಾರಿಗಳು ಮರೆತು ಕಾಲೇಜಿನಲ್ಲೇ ಬಿಟ್ಟುಹೋಗಿದ್ದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!
ಈ ಕಾಲೇಜಿನಲ್ಲಿ 168 ಹಾಗೂ 169ನೇ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತದಾನದ ಬಳಿಕ 169ರ ಮತಗಟ್ಟೆಯಲ್ಲಿನ ಯಂತ್ರಗಳನ್ನು ತೆಗೆದುಕೊಂಡು ಹೋಗಿದ್ದ ಅಧಿಕಾರಿಗಳು, 168ರಲ್ಲಿನ ಯಂತ್ರಗಳನ್ನು ಬಿಟ್ಟುಹೋಗಿದ್ದರು. ನಂತರ ಈ ಮತಯಂತ್ರಗಳನ್ನು ಕಂಡ ಪಕ್ಷಗಳ ಏಜೆಂಟರು, ಸ್ಥಳೀಯರು ಚುನಾವಣಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಘರ್ಷಣೆ: ಕೈ ಅಭ್ಯರ್ಥಿ ರೈ ಕಾರಿನ ಮೇಲೆ ಕಲ್ಲುತೂರಾಟ
ಆಮೇಲೆ ಅಧಿಕಾರಿಗಳಿಗೆ ಕರೆ ಮಾಡಿದ ಸ್ಥಳೀಯರು, ಇವಿಎಂ ಯಂತ್ರಗಳನ್ನು ಬಿಟ್ಟುಹೋಗಿದ್ದನ್ನು ತಿಳಿಸಿ, ಸ್ಥಳಕ್ಕೆ ಕರೆಸಿದ್ದರು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಮತಯಂತ್ರಗಳನ್ನು ತೆಗೆದುಕೊಂಡು ಹೋದರು. ಪೆನ್ಷನ್ ಮೊಹಲ್ಲಾದ ಬೂತ್​ನಲ್ಲಿ 700 ಮತಗಳಿವೆ, ಮತ ಎಣಿಕೆಯ ದಿನ ಅಷ್ಟೂ ಲೆಕ್ಕ ಸರಿಯಾಗಿ ಇರಬೇಕೆಂದು ಸ್ಥಳೀಯರು ತಾಕೀತು ಮಾಡಿ ಕಳಿಸಿದರು.
ಚುನಾವಣೋತ್ತರ ಸಮೀಕ್ಷೆ- ದಿಗ್ವಿಜಯ ನ್ಯೂಸ್​: ಇಲ್ಲಿದೆ ಲೈವ್ ಅಪ್​ಡೇಟ್ಸ್​

ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − six =
Remember me
