ಬೆಂಗಳೂರು:ಇಂದಿನಿಂದ ರಾಜ್ಯಾದ್ಯಂತ ಕೆಎಸ್​ಆರ್​ಟಿಸಿ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ ಆಗಲಿರುವ ಹಿನ್ನೆಲೆಯಲ್ಲಿ ಕೆಎಸ್ಆರ್​ಟಿಸಿ ಎಂಡಿ ಅನ್ಬುಕುಮಾರ್ ಹೇಳಿಕೆ ನೀಡಿದ್ದಾರೆ.
‘ಇಂದಿನಿಂದ ಕೆಎಸ್ ಆರ್ ಟಿಸಿ ಇ ಬಸ್ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಸೋಮವಾರ ಬೆಳಗಿನಿಂದ ವಾಣಿಜ್ಯ ಸಂಚಾರ ಆರಂಭವಾಗಿದೆ. ಮೈಸೂರು-ಬೆಂಗಳೂರು ನಡುವೆ ಮೊದಲ ಎಲೆಕ್ಟ್ರಿಕ್ ಬಸ್ ಸೇವೆ ಪ್ರಾರಂಭ ಮಾಡಲಾಗಿದೆ.
ಎಕ್ಸ್​ಪ್ರೆಸ್​ ವೇನಲ್ಲಿ ಎಲೆಕ್ಟ್ರಿಕ್ ಬಸ್ ಸಂಚರಿಸಲಿದ್ದು ಬೆಂಗಳೂರು ಮೈಸೂರು ನಡುವೆ ವೇಗದ ಸಂಚಾರಕ್ಕೆ ಕೆಎಸ್ಆರ್​ಟಿಸಿ ಆದ್ಯತೆ ನೀಡಿದ್ದೇವೆ. ಹೀಗಾಗಿ ಈಗ ಮೈಸೂರು ಬೆಂಗಳೂರು ನಡುವೆ ನಾನ್ ಸ್ಟಾಪ್ ಆಗಿ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ ಮಾಡಲಾಗಿದೆ’ ಎಂದಿದ್ದಾರೆ.
ಈ ಬಸ್​ನ ಪ್ರಯಾಣದ ಬೆಲೆ, ಸಾಮಾನ್ಯ ಸಾರಿಗೆ ಗಿಂತ ಹೆಚ್ಚು, ಹಾಗೂ ಮಲ್ಟಿ ಆ್ಯಕ್ಸಲ್ ಬಸ್ ದರಕ್ಕಿಂತ ಕಡಿಮೆ ದರ ನಿಗದಿ ಮಾಡಲಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತೀರಿ ಎಂದಾದರೆ ನಿಮಗೆ 300 ರೂ ಆಸುಪಾಸಲ್ಲಿ ದರ ಫಿಕ್ಸ್ ಆಗುವ ಸಾಧ್ಯತೆ ಇದೆ.
ಇನ್ನು, ಎಲೆಕ್ಟ್ರಿಕ್ ಬಸ್​ನಲ್ಲಿ ವಿದ್ಯಾರ್ಥಿ ಪಾಸ್​ಗೆ ಅವಕಾಶ ನೀಡಲಾಗಿಲ್ಲ. ಮುಂದಿನ ಮೂರು ತಿಂಗಳಲ್ಲಿ 50 ಎಲೆಕ್ಟ್ರಿಕ್ ಬಸ್ ಸಂಚಾರ ಪ್ರಾರಂಭವಾಗಲಿದ್ದು ಬೆಂಗಳೂರಿನ ಹತ್ತಿರದ ಜಿಲ್ಲೆಗಳಿಗೆ ಸಂಚಾರ ಪ್ರಾರಂಭಿಸುವ ಆಲೋಚನೆ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
