ಬೆಂಗಳೂರು:ಅಭಿವೃದ್ಧಿ ದೃಷ್ಟಿಯಿಂದ ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಸಮರ್ಥಿಸಿಕೊಳ್ಳುವ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಇಂಧನ ಸಚಿವ ವಿ.ಸುನೀಲ್​ಕುಮಾರ್ ಬರೆ ಎಳೆದಿದ್ದಾರೆ. ವಿದ್ಯುತ್ ದರ ಏರಿಕೆ ಬಗ್ಗೆ ಎಲ್ಲ ಎಸ್ಕಾಂಗಳೂ ಬೇಡಿಕೆ ಇಟ್ಟಿವೆ. ಕೆಇಆರ್​ಸಿ ಶಿಫಾರಸು ಮಾಡಿದರೆ ದರ ಏರಿಕೆಯಾಗಲಿದೆ ಎಂದು ಸುದ್ಸಿಗೋಷ್ಠಿಯಲ್ಲಿ ಸುನೀಲ್​ಕುಮಾರ್ ತಿಳಿಸಿದರು. ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ, ಬೆಂಗಳೂರು ಜಲಮಂಡಳಿ, ನಗರಾಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳಿಂದ 12 ಸಾವಿರ ಕೋಟಿ ರೂ. ವಿದ್ಯುತ್ ಬಾಕಿ ಬರಬೇಕಿದೆ. ಈ ಹಣ ವಸೂಲಿಗೆ ಕ್ರಮ ವಹಿಸಲಾಗಿದೆ ಎಂದರು. ಸದ್ಯಕ್ಕೆ ಕಲ್ಲಿದ್ದಲು ಸಮಸ್ಯೆ ಇಲ್ಲ. ಕಳೆದ ವರ್ಷ ಏಪ್ರಿಲ್ ವೇಳೆಗೆ 16 ಸಾವಿರ ಮೆ.ವ್ಯಾ.ವಿದ್ಯುತ್ ಬೇಡಿಕೆ ಇತ್ತು. ಈ ವರ್ಷ ಕೂಡ 15 ಸಾವಿರ ಮೆ.ವ್ಯಾ. ನಿರೀಕ್ಷಿಸಲಾಗಿದೆ. ಅದಕ್ಕೆ ಪೂರಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
1872 ಹುದ್ದೆ ಭರ್ತಿಗೆ ಕ್ರಮ:1872 ಕಿರಿಯ ಪವರ್ ಮೆನ್ ಮತ್ತು ಕಿರಿಯ ಪರಿಚಾರಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೆ ಆಯ್ಕೆ ಪಟ್ಟಿ ಪ್ರಕಟವಾಗಿದೆ. 15 ದಿನಗಳಲ್ಲಿ ಅಭ್ಯರ್ಥಿಗಳಿಗೆ ಆದೇಶ ನೀಡಲಾಗುವುದು ಎಂದು ತಿಳಿಸಿದರು. ಸಚಿವ ಸಂಪುಟ ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟಿದ್ದು, ವರಿಷ್ಠರು ಹಾಗೂ ಸಿಎಂ ಕೈಗೊಳ್ಳುವ ತೀರ್ವನಕ್ಕೆ ಬದ್ಧ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸ್ವಾತಂತ್ರ್ಯ ಹೋರಾಟದ ಪರಿಚಯ:ಸ್ವಾತಂತ್ರ್ಯ ಹೋರಾಟಗಾರರು ಚಳವಳಿಯಲ್ಲಿ ಭಾಗಿಯಾದ ಗ್ರಾಮಗಳ ಬಗ್ಗೆ ಪರಿಚಯ ಹಿನ್ನೆಲೆಯಲ್ಲಿ ‘ಹೋರಾಟದ ನೆಲದಲ್ಲಿ ಒಂದು ದಿನ’ ಕಾರ್ಯಕ್ರಮದ ಮೂಲಕ ಯುವಕರಿಗೆ ಸ್ವಾತಂತ್ರ್ಯ ಹೋರಾಟದ ಮಾಹಿತಿ ನೀಡಲು ಉದ್ದೇಶಿಸಲಾಗಿದೆ. ಮಾರ್ಚ್ ನಲ್ಲಿ ಈ ಕಾರ್ಯಕ್ರಮ ಮಾಡಲಿದ್ದೇವೆ ಎಂದರು.
ಸಂಸ್ಕೃತ ವಿವಿಗೆ ವಿರೋಧ ಸಲ್ಲ:ಕನ್ನಡಕ್ಕೆ ಹೆಚ್ಚಿನ ಅನುದಾನ ಕೊಡುವ ಬಗ್ಗೆ ನನ್ನದೂ ಧ್ವನಿ ಇದೆ. ಕನ್ನಡ ವಿವಿಗೆ ಹೆಚ್ಚಿನ ಅನುದಾನ ಬೇಕು. ಆದರೆ ಸಂಸ್ಕೃತಕ್ಕೆ ವಿರೋಧ ಮಾಡಬಾರದು. ಸಂಸ್ಕೃತ ಬೇರೆ ಬೇರೆ ಭಾಷೆಗಳಿಗೆ ತಾಯಿ ಇದ್ದ ಹಾಗೆ ಎಂದು ಸುನೀಲ್​ಅಭಿಪ್ರಾಯಪಟ್ಟರು.
ಸ್ಪಷ್ಟ ಗುರಿ ಸಾರ್ಥಕ ಹಾದಿ:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 100 ದಿನಗಳ ಸಾಧನೆಯ ‘ಕಲರವ’ ಮತ್ತು ಇಂಧನ ಇಲಾಖೆ ಇಟ್ಟ ದಿಟ್ಟ ಹೆಜ್ಜೆಗಳ ಕುರಿತ ‘ಸ್ಪಷ್ಟ ಗುರಿ ಸಾರ್ಥಕ ಹಾದಿ’ ಕಿರು ಹೊತ್ತಗೆಗಳನ್ನು ಸಚಿವ ಸುನೀಲ್​ಕುಮಾರ್ ಶುಕ್ರವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
ಬೆಂಗಳೂರು:ಶಾಸ್ತ್ರೀಯ ಕನ್ನಡ ಉನ್ನತಾಧ್ಯಯನ ಕೇಂದ್ರಕ್ಕೆ ಸ್ವಾಯತ್ತ ಸ್ಥಾನಮಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಸದ್ಯದಲ್ಲೇ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಕನ್ನಡ ಶಾಸ್ತ್ರೀಯ ಉನ್ನತಾಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಸಿಗಲು ರಾಜ್ಯದ ಜನಪ್ರತಿನಿಧಿಗಳು ಸಾಕಷ್ಟು ಪ್ರಯತ್ನ ನಡೆಸದ ಕುರಿತು ‘ಕನ್ನಡಕ್ಕೆ ಶಾಸ್ತ್ರೀಯ ಅವಮಾನ’ ಶೀರ್ಷಿಕೆಯಲ್ಲಿ ಜ.19ರಂದು ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಈ ಬಗ್ಗೆ ಸುನಿಲ್ ಕುಮಾರ್ ಪ್ರತಿಕ್ರಿಯಿಸಿ, ಮುಂದಿನವಾರ ದೆಹಲಿಗೆ ಭೇಟಿ ನೀಡುತ್ತಿದ್ದೇನೆ. ಶಾಸ್ತ್ರೀಯ ಕನ್ನಡ ಭಾಷಾ ಕೇಂದ್ರಕ್ಕೆ ಸ್ವಾಯತ್ತತೆ ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ. ಜತೆಗೆ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವಿಕೆ ವಿಚಾರದಲ್ಲೂ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದರು. ಕನ್ನಡಕ್ಕೆ ಸ್ಥಾನಮಾನ ಸಿಗಬೇಕು ಎಂದ ಮಾತ್ರಕ್ಕೆ ಸಂಸ್ಕೃತವನ್ನು ವಿರೋಧಿಸುತ್ತೇನೆ ಎಂದಿಲ್ಲ, ಸಂಸ್ಕೃತಕ್ಕೆ ಎಲ್ಲ ಭಾಷೆಗಳ ತಾಯಿ ಸ್ಥಾನ ಇದೆ. ಸಂಸ್ಕೃತ ಅತ್ಯಂತ ಹಳೆಯ ಭಾಷೆ ಎಂದು ದಾಖಲೆ ಮತ್ತು ಪಹಣಿ ಕೊಡಿ ಎಂದು ಕೇಳುವುದಕ್ಕಾಗುತ್ತದೆಯೇ ಎಂದು, ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಕುರಿತು ಸಚಿವರು ಪ್ರತಿಕ್ರಿಯಿಸಿದರು.
‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × five =
Remember me
