ಬೆಂಗಳೂರು:ಕರೊನಾ ಕಾರಣಕ್ಕೆ ಏಳು ತಿಂಗಳು ಮುಂದೂಡಲ್ಪಟ್ಟಿದ್ದ ವಿದ್ಯುತ್ ದರ ಏರಿಕೆಯ ನಿರ್ಧಾರ ಉಪ ಚುನಾವಣೆ ಮುಗಿದ ಬೆನ್ನಲ್ಲೇ ಹೊರಬಿದ್ದಿದೆ. ನ.1ರಿಂದಲೇ ಜಾರಿಗೆ ಬರುವಂತೆ ಪ್ರತಿ ಯುನಿಟ್​ಗೆ ಸರಾಸರಿ 40 ಪೈಸೆ ಹೆಚ್ಚಿಸಲಾಗಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನಾ ಅವರು ಬುಧವಾರ ವರ್ಚು ವಲ್ ವಿಡಿಯೊ ಸಂವಾದ ನಡೆಸಿ ಬೆಲೆ ಏರಿಕೆ ನಿರ್ಧಾರ ಪ್ರಕಟಿಸಿದರು. ಕರೊನಾ ಹಿನ್ನೆಲೆಯಲ್ಲಿ ಏಪ್ರಿಲ್​ನಿಂದ ಅಕ್ಟೋಬರ್ ತನಕ ಇರುವ ಅಂತರದ ಅವಧಿಗೆ ಸೀಮಿತವಾಗಿ ವಿದ್ಯುತ್ ದರ ಏರಿಕೆಯಲ್ಲಿ ಗ್ರಾಹಕರಿಗೆ ನಿರಾಳತೆ ಸಿಕ್ಕಿದೆ.
ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಸೆಸ್ಕ್ ಸೇರಿದಂತೆ 5 ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯೂನಿಟ್​ಗೆ ಸರಾಸರಿ ಶೇ.17.15(1.26 ರೂ) ಕೋರಿ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಕೆಇಆರ್​ಸಿ ಶೇ. 5.40 ಹೆಚ್ಚಳಕ್ಕೆ ಅನುಮೋದಿಸಿದೆ. ಗೃಹ ಬಳಕೆದಾರರಿಗೆ ಪ್ರತಿ ಯುನಿಟ್​ಗೆ 25 ಪೈಸೆ, ಕೈಗಾರಿಕೆ ಸೇರಿದಂತೆ ಎಲ್ಲ ವರ್ಗ ದವರಿಗೆ ಸರಾಸರಿ 40 ಪೈಸೆ ಹೆಚ್ಚಳವಾಗಿದೆ.
ಅನುಮೋದನೆ: ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಂಥ ಎಲ್ಲ ವಿಭಾಗಗಳಲ್ಲಿ ಪ್ರತಿ ಯೂನಿಟ್ ಹೆಚ್ಚಳಕ್ಕೆ 20ರಿಂದ 25 ಪೈಸೆಗಳನ್ನು, ತಾತ್ಕಾಲಿಕ ಸ್ಥಾಪನೆಗಳಲ್ಲಿ ಪ್ರತಿ ಯೂನಿಟ್​ಗೆ 50 ಪೈಸೆಗಳ ಹೆಚ್ಚಳವನ್ನು ಅನುಮೋದಿಸಲಾಗಿದೆ.
ಮೆಟ್ರೋ ನಿಟ್ಟುಸಿರು
ಬೆಂಗಳೂರು ಮೆಟ್ರೋ ಮತ್ತು ವಿದ್ಯುತ್ ವಾಹನ ಚಾರ್ಜಿಂಗ್ ಸ್ಟೇಷನ್​ಗಳ ವಿದ್ಯುತ್ ದರವನ್ನು ಏರಿಸಲಾಗಿಲ್ಲ.
2473 ಕೋಟಿ ರೂ. ಕೊರತೆ
ಎಸ್ಕಾಂಗಳ ಆದಾಯದ 2473 ಕೋಟಿ ರೂ. ಕೊರತೆಯಲ್ಲಿ ನವೆಂಬರ್​ನಿಂದ ಮಾರ್ಚ್​ವರೆಗೆ( 5 ತಿಂಗಳು)1030 ಕೋಟಿ ರೂ. ಮಾತ್ರ ವಸೂಲು ಮಾಡಲು ಕೆಇಆರ್​ಸಿ ಅನುಮತಿಸಿದೆ. ಕರೊನಾ ಹಿನ್ನೆಲೆಯಲ್ಲಿ ಏಪ್ರಿಲ್​ನಿಂದ ಅಕ್ಟೋಬರ್ ತನಕ 1443 ಕೋಟಿ ರೂ. ಗಳನ್ನು ಗ್ರಾಹಕರಿಗೆ ಹೊರೆಯಾಗದಂತೆ 2022 -2023 ಅವಧಿಯಲ್ಲಿ ವಿದ್ಯುತ್ ಬಿಲ್ ಜತೆ ಅಳವಡಿಸಿ ವಸೂಲಿ ಮಾಡಲು ಉದ್ದೇಶಿಸಲಾಗಿದೆ.
ಪೀಕ್ ಡಿಮ್ಯಾಂಡ್ ದರ ರದ್ದು
ಎಚ್.ಡಿ.ಕೈಗಾರಿಕೆಗಳಲ್ಲಿ ಹೆಚ್ಚಿನ ವಿದ್ಯುತ್ ಬಳಕೆ ಪ್ರೋತ್ಸಾಹಿಸಲು ಪೀಕ್ ಡಿಮ್ಯಾಂಡ್ ಹೆಚ್ಚುವರಿ ದರ ರದ್ದು ಮಾಡಲಾಗಿದೆ. ಬೆಳಿಗ್ಗೆ 6 ರಿಂದ 10 ಗಂಟೆ ತನಕ ಅತ್ಯಧಿಕವಾಗಿ ವಿದ್ಯುತ್ ಬೇಡಿಕೆ ಇದ್ದ ಕಾರಣ, ಹೆಚ್ಚುವರಿಯಾಗಿ ವಿಧಿಸಲಾಗುತ್ತಿದ್ದ 1 ರೂ. ದಂಡ ಹಿಂಪಡೆಯಲಾಗಿದೆ.
ಬೆಸ್ಕಾಂ ವ್ಯಾಪ್ತಿಯಲ್ಲೇನು?
ಗ್ರಾಹಕರು ಪ್ರತಿ ಯೂನಿಟ್​ಗೆ 3.75 ರೂ. (30 ಯೂನಿಟ್ ತನಕ) ಪಾವತಿಸುತ್ತಿದ್ದರು. ದರ ಪರಿಷ್ಕರಣೆ ಬಳಿಕ ಯೂನಿಟ್​ಗೆ 4 ರೂ., ತಿಂಗಳಿಗೆ 100 ಯುನಿಟ್ ತನಕ ಬಳಸುವವರು ಪ್ರತಿ ಯೂನಿಟ್​ಗೆ 5.45 ರೂ. ಪಾವತಿಸಬೇಕಿದೆ.
ಇತರ ಬದಲಾವಣೆ
ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ (ಎಲ್​ಟಿ /ಎಚ್​ಟಿ ಪ್ರಸರಣ), ಆಯೋಗವು ಬಿಬಿಎಂಪಿ ಮಿತಿ ಮತ್ತು ಇತರ ಜಿಲ್ಲೆಗಳಲ್ಲಿ ಪ್ರತಿ ಯೂನಿಟ್​ಗೆ 25 ರೂ. ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಈ ವರ್ಷ ನೀರು ಸರಬರಾಜು ಶುಲ್ಕದ ಮೇಲೆ ಪ್ರತಿ ಯೂನಿಟ್​ಗೆ 25 ಪೈಸೆ ಹೆಚ್ಚಳಕ್ಕೆ ಅನುಮತಿ ನೀಡಿದೆ.
ಬೀದಿದೀಪಗಳಿಗೆ ಎಲ್​ಇಡಿ ಮತ್ತು ಇಂಡಕ್ಷನ್ ಲ್ಯಾಂಪ್ ಅಳವಡಿಸಲು ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ರಿಯಾಯಿತಿ ನೀಡಲಾಗಿದೆ. ಸೌಲಭ್ಯದ ಮೇಲಿನ ರಿಯಾಯಿತಿಯನ್ನು 100 ಪೈಸೆಗಳಿಂದ 105 ಪೈಸೆಗಳಿಗೆ ಹೆಚ್ಚಿಸಲಾಗಿದೆ.
ಹಸಿರು ದರ
ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ ಖರೀದಿ ಮತ್ತು ಉಪಯೋಗವನ್ನು ಉತ್ತೇಜಿಸಲು ಎಚ್​ಟಿ ಕೈಗಾರಿಕೆ ಮತ್ತು ಎಚ್​ಟಿ ಗ್ರಾಹಕರಿಗೆ ಅವರು ಇಚ್ಛಿಸಿದಲ್ಲಿ ಅನ್ವಯವಾಗುವ ದರಕ್ಕಿಂತ ಪ್ರತಿ ಯೂನಿಟ್​ಗೆ 50 ಪೈಸೆ ಹೆಚ್ಚಿನ ಹಸಿರು ದರ ಮುಂದುವರಿಸಲಾಗಿದೆ.
ದರ ನಿಗದಿ ಹೇಗೆ?
30 ಯೂನಿಟ್ ತನಕ ಒಂದು ದರ, 31 ರಿಂದ 100 ಯೂನಿಟ್, 101 ರಿಂದ 200 ಯೂನಿಟ್, 201 ರಿಂದ 300 ಯೂನಿಟ್, 400 ಯೂನಿಟ್ ಮೇಲ್ಪಟ್ಟು ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.
ಎಸ್ಕಾಂಗಳಿಗೆ
ಎಸ್ಕಾಂಗಳ ಗ್ರಾಹಕರು ಹಿಂದಿನ ಯೂನಿಟ್​ಗೆ 3.70 ರೂ.ಗಳಿಂದ (30 ಯೂನಿಟ್ ತನಕ) ಪ್ರತಿ ಯೂನಿಟ್​ಗೆ 3.95 ರೂ. ಪಾವತಿಸಬೇಕಾಗುತ್ತದೆ. ನಂತರದ ಘಟಕಗಳ ಬಳಕೆ ಶುಲ್ಕಗಳು ಬೆಸ್ಕಾಂ ಶುಲ್ಕಗಳಂತೆ ಇರಲಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
