ಬೆಂಗಳೂರು:ಕೋವಿಡ್ 19 ಹಿನ್ನೆಲೆಯಲ್ಲಿ ವಿದ್ಯುತ್ ದರ ಪರಿಷ್ಕರಣೆ ಸತತವಾಗಿ ಮುಂದಕ್ಕೆ ಹೋಗಿದ್ದು, ಮುಂದಿನ ವರ್ಷ ಒಟ್ಟಿಗೆ ಮಾಡುವ ಲೆಕ್ಕಾಚಾರವಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣೆ ಸೇರಿ ನಾನಾ ಕಾರಣಕ್ಕೆ ದರ ಪರಿಷ್ಕರಣೆ 1-2 ತಿಂಗಳು ಮುಂದೆ ಹೋದ ನಿದರ್ಶನಗಳಿವೆ. 7 ತಿಂಗಳು ಮುಂದೆ ಹೋಗಿದ್ದ ಉದಾಹರಣಗಳಿರಲಿಲ್ಲ. ಈ ವರ್ಷ ಹೊಸ ಸಂಪ್ರದಾಯಕ್ಕೆ ಕರೊನಾ ನಾಂದಿ ಹಾಡಿದೆ.
ವಿದ್ಯುತ್ ದರ ಪರಿಷ್ಕರಣೆ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ (ಕೆಇಆರ್​ಸಿ) ಸಾರ್ವಜನಿಕ ಅಹವಾಲು ಆಲಿಸಿದ್ದು, ಹೊಸ ದರ ಪ್ರಕಟ ಮಾಡಬೇಕಿತ್ತು. ಏಪ್ರಿಲ್​ನಿಂದ ಹೊಸ ದರ ಜಾರಿಗೆ ಬರಬೇಕಾಗಿತ್ತು. ಲಾಕ್​ಡೌನ್ ಅಡ್ಡಿಯಾಗಿತ್ತು. ಈಗ ಸದ್ಯಕ್ಕೆ ಹೊಸ ದರ ಘೋಷಣೆಯಾಗುವ ನಿರೀಕ್ಷೆಗಳಿಲ್ಲ. ಎಸ್ಕಾಂಗಳು ಪ್ರತಿ ಯುನಿಟ್​ಗೆ ಒಂದೂವರೆ ರೂ. ಏರಿಕೆ ಕೇಳಿದ್ದವು. ಕರೊನಾ ಹಿನ್ನೆಲೆಯಲ್ಲಿ ಪ್ರತಿ ಯುನಿಟ್​ಗೆ 10ರಿಂದ 20 ಪೈಸೆ ಏರಿಕೆ ಮಾಡುವ ಲೆಕ್ಕಾಚಾರವಿತ್ತು ಎಂದು ತಿಳಿದುಬಂದಿತ್ತು. ಕರೊನಾ ಸಂಕಷ್ಟ ಹೊತ್ತಿನಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯನ್ನು ಮುಂದಿನ ವರ್ಷಕ್ಕೆ ಮುಂದೂಡಬಹುದು ಎಂದು ಹೇಳಲಾಗುತ್ತಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 13 =
Remember me
