ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಎರಡನೇ ಗ್ಯಾರಂಟಿ ‘ಗೃಹಜ್ಯೋತಿ’ ಯೋಜನೆಯ ಲಾಭ ಆಗಸ್ಟ್ ಮೊದಲ ವಾರದಿಂದಲೇ ಜನರ ಕೈಗೆ ಸಿಗಲಿದೆ. ಇಂಧನ ಇಲಾಖೆಯಲ್ಲಿ ಕೌಂಟ್ ಡೌನ್ ಶುರುವಾಗಿದೆ. ಗ್ರಾಹಕರ ಕೈಗೆ ಮೊದಲ ಬಿಲ್ ನೀಡಲು ಎಸ್ಕಾಂಗಳು ಸನ್ನದ್ಧವಾಗಿದ್ದು, ಜನರೂ ಕಾತರದಿಂದ ಕಾಯುತ್ತಿದ್ದಾರೆ.
ವಿದ್ಯುತ್ ಬಿಲ್​ನಲ್ಲಿ ತಾಂತ್ರಿಕ ಅಂಶಗಳಿರುವ ಕಾರಣಕ್ಕೆ ಸುಲಭವಾಗಿ ಅರ್ಥ ಮಾಡಿಸಲೆಂದು ಬಿಲ್ ಕರಡು ತಯಾರಿಗೆ ಸರ್ಕಾರ ಸಾಕಷ್ಟು ಕಸರತ್ತು ನಡೆಸಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಅಪೇಕ್ಷೆಯಂತೆ ಇಂಧನ ಇಲಾಖೆ, ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ಜಂಟಿಯಾಗಿ ಶ್ರಮಿಸಿ ಏಕರೂಪ, ಸರಳತೆಯ ಸ್ಪರ್ಶವುಳ್ಳ ಬಿಲ್ ಕರಡು ಸಿದ್ಧಪಡಿಸಿವೆ. ‘ಗೃಹ ಜ್ಯೋತಿ’ಯಡಿ ಉಚಿತ ವಿದ್ಯುತ್ ಸೌಲಭ್ಯ ಕೊಟ್ಟು, ಮತ್ತೊಂದು ಕೈಯಿಂದ ಕಿತ್ತುಕೊಳ್ಳುತ್ತಿದೆ ಎಂಬ ಜನರ ಸಂದೇಹ ನಿವಾರಣೆ, ಪ್ರತಿಪಕ್ಷಗಳ ಆಕ್ರೋಶ ತಮಣಿಗೆ ಸರ್ಕಾರ ಒತ್ತು ನೀಡಿದೆ. ಸರ್ಕಾರದ ಸೂಚನೆಯಂತೆ ವಿದ್ಯುತ್ ಬಿಲ್​ನ ಕರಡು ಪ್ರಸ್ತಾವನೆ ಸಿದ್ಧವಾಗಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಸೋಮವಾರ (ಜು.31) ಅನುಮೋದನೆ ನೀಡುವ ಸಾಧ್ಯತೆಗಳಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಬಿಲ್​ನಲ್ಲಿ ಏನೆಲ್ಲ ಇರಲಿದೆ:ಬಿಲ್​ನ ಪ್ರತಿಯೊಂದು ಕಾಲಂ ಸ್ಪಷ್ಟ, ಸ್ಪುಟವಾಗಿರಲಿದೆ. ಹೆಚ್ಚುವರಿಯಾಗಿ ಸರಾಸರಿ ವಿದ್ಯುತ್ ಬಳಕೆ ಯೂನಿಟ್, ಗೃಹಜ್ಯೋತಿಯಡಿ ಪರಿಗಣಿಸಿದ ಯೂನಿಟ್ ಅಂಶಗಳು ಸೇರಲಿವೆ. ನಗರ, ಗ್ರಾಮೀಣ ಪ್ರದೇಶದ ಬಿಲ್ ಸ್ವಲ್ಪ ಭಿನ್ನವಾಗಿರಲಿದೆ. ಹಾಗೆಯೇ ಬೆಸ್ಕಾಂ ಮತ್ತು ಇತರ ನಾಲ್ಕು ಎಸ್ಕಾಂಗಳ ಶುಲ್ಕ, ವಿದ್ಯುತ್ ದರದಲ್ಲೂ ವ್ಯತ್ಯಾಸವಿರಲಿದೆ.
ಆರ್​ಆರ್ ಸಂಖ್ಯೆ, ಖಾತೆ ಸಂಖ್ಯೆ, ವೈಯಕ್ತಿಕ ವಿವರ, ಹೆಸರು ಮತ್ತು ವಿಳಾಸ, ಸಂಪರ್ಕದ ವಿವರಗಳಲ್ಲಿ ದರ, ಮಂಜೂರಾದ ಪ್ರಮಾಣ, ಗೃಹಜ್ಯೋತಿ ನೊಂದಣಿ ದಿನಾಂಕ, ಸರಾಸರಿ (ಆರ್ಥಿಕ ವರ್ಷ 2022-23) ಯೂನಿಟ್​ಗಳು, ಅರ್ಹ ಯೂನಿಟ್​ಗಳು, ಬಿಲ್ ವಿವರಗಳಲ್ಲಿ ಬಿಲ್ಲಿಂಗ್ ಅವಧಿ, ರೀಡಿಂಗ್ ದಿನಾಂಕ, ಬಿಲ್ ಸಂಖ್ಯೆ, ಬಳಕೆಯ ವಿವರಗಳಲ್ಲಿ ಇಂದಿನ ಮಾಪನ, ಹಿಂದಿನ ಮಾಪನ, ಮಾಪನ ಸ್ಥಿರಾಂಕ, ಬಳಕೆ ಯೂನಿಟ್​ಗಳು, ಸರಾಸರಿ, ದಾಖಲಿತ ಬೇಡಿಕೆ, ಪವರ್ ಫ್ಯಾಕ್ಟರ್, ಸಂರ್ಪತ ಪ್ರಮಾಣ, ಸಹಾಯಧನಕ್ಕೆ ಅರ್ಹ ಯೂನಿಟ್, ಪಾವತಿ ಯೂನಿಟ್, ಬಳಸಿದ ಯೂನಿಟ್ ಬಿಲ್ ಮೊತ್ತ, ನಿಗದಿತ ಶುಲ್ಕ, ವಿದ್ಯುತ್ ಶುಲ್ಕ, ಇಂಧನ ಹೊಂದಾಣಿಕೆ ಶುಲ್ಕ, ಶೇ.9 ತೆರಿಗೆ, ಉಪಮೊತ್ತ-1, ಗೃಹ ಜ್ಯೋತಿ ಅನುದಾನ, ನಿಗದಿತ ಶುಲ್ಕ, ಗ್ರಾಮೀಣ ರಿಯಾಯಿತಿ, ಇಂಧನ ಹೊಂದಾಣಿಕ ಶುಲ್ಕ, ಶೇ.9 ತೆರಿಗೆ, ಉಪ ಮೊತ್ತ-2, ಬಿಲ್ ಮೊತ್ತ (1-2), ಹೆಚ್ಚುವರಿ ಶುಲ್ಕಗಳಲ್ಲಿ ದಂಡ, ಹೆವಿ ಲೋಡ್ ದಂಡ, ಬಡ್ಡಿ, ಇತರೆ, ಡೆಬಿಟ್/ಕ್ರೆಡಿಟ್, ಪ್ರಸ್ತುತ ಬೇಡಿಕೆ, ಬಾಕಿ. ಪಾವತಿ ಒಟ್ಟು ಮೊತ್ತ, ಪಾವತಿಗೆ ಕಡೆಯ ದಿನಾಂಕ ನಮೂದಾಗಿರುತ್ತದೆ.
ಬಿಲ್​ನ ಹಿಂಬದಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಇಂಧನ ಮಂತ್ರಿ ಕೆ.ಜೆ. ಜಾರ್ಜ್ ಭಾವಚಿತ್ರಗಳು, ಗೃಹಜ್ಯೋತಿ ಲಾಂಛನದಡಿ ಗ್ರಾಹಕರಿಗೆ ಸೂಚನೆಗಳಿವೆ. ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಎಲ್​ಟಿ 2ಎ, 2ಬಿ, 3 ಮತ್ತು ಎಲ್​ಟಿ 5ರಡಿ ನಿಗದಿತ ಶುಲ್ಕ, ವಿದ್ಯುತ್ ಬಳಕೆ ಶುಲ್ಕ, ಕಿಲೋ ವಾಟ್, ಹಾರ್ಸ್ ಪವರ್, ಯೂನಿಟ್​ಗಳು, ಒಟ್ಟು ವಿದ್ಯುತ್ ಬಳಕೆ ಶುಲ್ಕದ ಮೊತ್ತಕ್ಕೆ ಶೇ.9 ತೆರಿಗೆ ವಿವರಗಳಿರುತ್ತವೆ.
ಬಿಲ್ ನಮೂನೆ:‘ಎ’ ಹೆಸರಿನ ಗ್ರಾಹಕನಿಗೆ ಆಗಸ್ಟ್​ನಲ್ಲಿ ಬಿಲ್ ಕೈ ಸೇರುತ್ತದೆ ಎಂದಿಟ್ಟುಕೊಳ್ಳೋಣ. ವಾರ್ಷಿಕ ಸರಾಸರಿ 120 ಯೂನಿಟ್​ಗಳಿದ್ದರೆ, ಶೇ.10 ಹೆಚ್ಚುವರಿ ಅಂದರೆ 132 ಯೂನಿಟ್​ಗಳು ಉಚಿತ. ಒಂದು ವೇಳೆ 175 ಯೂನಿಟ್ ಬಳಸಿದ್ದರೆ ಹೆಚ್ಚುವರಿ 43 ಯೂನಿಟ್​ಗೆ ಮಾತ್ರ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ. ಆಯಾ ಎಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ, ನಿಗದಿತ ಶುಲ್ಕ ವಿಭಿನ್ನವಾಗಿದೆ. ಗೃಹಜ್ಯೋತಿಯಡಿ ಅರ್ಹವಾದ ಯೂನಿಟ್ ಒಳಗೆ ವಿದ್ಯುತ್ ಬಳಸಿದ್ದರೆ ಪಾವತಿ ಮೊತ್ತ ಶೂನ್ಯವೆಂದು ತೋರಿಸಲಿದೆ. ನಿಗದಿತ ಶುಲ್ಕ, ಇಂಧನ ಹೊಂದಾಣಿಕೆ ಹಾಗೂ ತೆರಿಗೆಯನ್ನೂ ಸರ್ಕಾರವೇ ಭರಿಸಲಿದೆ. ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ ವೆಂದರೆ ಮಂಜೂರಾದ ವಿದ್ಯುತ್ ಲೋಡ್, ಮಾಪನ ಸ್ಥಿರಾಂಶ ದಾಟಿದ್ದರೆ ನಿಗದಿತ ಶುಲ್ಕ, ತೆರಿಗೆಯನ್ನು ಗ್ರಾಹಕ ಪಾವತಿಸಬೇಕಾಗುತ್ತದೆ. (ಉದಾಹರಣೆ; ಮಂಜೂರಾದ ಲೋಡ್ 0.04 ಕಿ.ವಾ, ಮಾಪನ ಸ್ಥಿರಾಂಶ ಒಂದರೊಳಗಿದ್ದು, ಲೋಡ್ ಒಂದು ಕಿ.ವಾ., ಸ್ಥಿರಾಂಶ ಒಂದು ತಲುಪಿದ್ದರೆ ಅಷ್ಟು ಮೊತ್ತ ಭರಿಸಬೇಕಾಗುತ್ತದೆ).
ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
