ಬೆಂಗಳೂರು:ವಿದ್ಯುತ್ ಬಿಲ್ ಫಿಕ್ಸೆಡ್ ಚಾರ್ಜ್ ದಿಢೀರ್ ಹೆಚ್ಚಳವಾಗಿದ್ದು ಮೇ ತಿಂಗಳ ಬಿಲ್ ನಲ್ಲಿ ನಿಗದಿತ ಶುಲ್ಕ ಏರಿಕೆ ಮಾಡಲಾಗಿದೆ.
ಗೃಹ ಬಳಕೆ ವಿದ್ಯುತ್ ಸಂಪರ್ಕಕ್ಕೆ ಪ್ರತಿ ಕಿ.ವ್ಯಾಗೆ 100 ರೂ ಇದ್ದ ನಿಗದಿತ ಶುಲ್ಕ ಮೇ ತಿಂಗಳಿನಿಂದ ಅನ್ವಯವಾಗುವಂತೆ 110 ಕ್ಕೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಪ್ರತಿ ಯೂನಿಟ್ ಬೆಲೆ 70 ಪೈಸೆ ಹೆಚ್ಚಳವಾಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಫಿಕ್ಸೆಡ್ ಚಾರ್ಜ್ ಕೂಡ ದಿಢೀರ್ ಆಗಿ ಏರಿಕೆಯಾಗಿದೆ.
ಗೃಹಬಳಕೆ ಸಂಪರ್ಕಕ್ಕೆ 50 ಕಿ.ವ್ಯಾ.ವರೆಗೆ ಪ್ರತಿ ಕಿ.ವ್ಯಾಗೆ 110 ರೂ. ನಿಗದಿತ ಶುಲ್ಕ ನಿಗದಿ ಮಾಡಲಾಗಿದೆ. 50 ಕೆ.ವಿ.ಮೇಲ್ಪಟ್ಟ ಬಳಕೆಗೆ ಪ್ರತಿ‌ ಕೆ.ವಿ.ಗೆ 210 ರೂ ನಿಗದಿ ಮಾಡಲಾಗಿದೆ.
ವಾಣಿಜ್ಯ ಬಳಕೆ ಸಂಪರ್ಕಗಳಿಗೆ ಪ್ರತಿ ಕಿ.ವ್ಯಾ.ಗೆ 125 ರೂ ಇದ್ದ ದರ ಮೇ ತಿಂಗಳಿನಿಂದ ‌200 ರೂ.ಗೆ ಹೆಚ್ಚಳವಾಗಿದೆ. ವಾಣಿಜ್ಯ ಬಳಕೆ ಸಂಪರ್ಕಗಳಿಗೆ 50 ಕಿ.ವ್ಯಾ.ಮೇಲಿನ ಬಳಕೆಗೆ ಪ್ರತಿ ಕಿ.ವ್ಯಾ.ಗೆ 300 ರೂ ನಿಗದಿ ಮಾಡಲಾಗಿದೆ.
ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಫಿಕ್ಸೆಡ್ ಮೊತ್ತವೂ ಉಚಿತವಾಗಲಿದ್ದುಅರ್ಹ ಫಲಾನುಭವಿಗಳಿಗೆ ನಿಗದಿತ ಶುಲ್ಕ ಹೊರೆ ಇರುವುದಿಲ್ಲ. ಗೃಹಜ್ಯೋತಿ ಫಲಾನುಭವಿಗಳ ಫಿಕ್ಸೆಡ್ ಚಾರ್ಜ್ ಸರ್ಕಾರವೇ ಪಾವತಿಸಲಿದೆ. ಆದರೆ ಜನರು ಏಪ್ರಿಲ್ ಹಾಗೂ ಮೇ ತಿಂಗಳ ಬಾಕಿ ಪಾವತಿ ಮಾಡುವುದು ಮಾಡಲೇಬೇಕು.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:1 × 3 =
Remember me
