ಬೆಂಗಳೂರು :ಕರೊನಾ ಸಂಕಷ್ಟದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಜನರಿಗೆ ಇದೀಗ ಮತ್ತೊಂದು ಶಾಕ್​ ಕಾದಿದೆ. ಪೆಟ್ರೋಲ್​-ಡೀಸೆಲ್​ಗಳ ನಿಯಮಿತ ಬೆಲೆ ಏರಿಕೆಗಳಿಂದ ಅಗತ್ಯವಸ್ತುಗಳ ಬೆಲೆ ಏರುವ ಸಮಸ್ಯೆ ಉಂಟಾಗಿರುವುದರೊಂದಿಗೆ ಇದೀಗ ವಿದ್ಯುತ್​ ದರಲ್ಲೂ ಏರಿಕೆಯಾಗಿದೆ.
2021-22 ಸಾಲಿನ ವಿದ್ಯುತ್ ದರ ಪರಿಷ್ಕರಣೆಯ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಇಂದು ಮಾಹಿತಿ ನೀಡಿದೆ. ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳ ಮತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವ್ಯಾಪ್ತಿಯ ಗ್ರಾಹಕರಿಗೆ ಅನ್ವಯಿಸುವಂತೆ ಪ್ರತಿ ಯುನಿಟ್​​ಗೆ 30 ಪೈಸೆಯಂತೆ ವಿದ್ಯುತ್ ದರವನ್ನು ಏರಿಕೆ ಮಾಡಲಾಗಿದೆ.
ಇದನ್ನೂ ಓದಿ:ಜೂ.13ರಿಂದ ಮುಂಗಾರು ಚುರುಕು, ರಾಜ್ಯದಲ್ಲಿ ಭಾರೀ ವರ್ಷಧಾರೆ
ಈ ಪರಿಷ್ಕೃತ ದರವು 2021 ರ ಏಪ್ರಿಲ್ 1 ರಿಂದಲೇ ಜಾರಿಯಾಗುವಂತೆ ಆದೇಶ ಹೊರಡಿಸಲಾಗಿದೆ. ಆದಾಗ್ಯೂ ಕೋವಿಡ್​ ಲಾಕ್ಡೌನ್ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ಏಪ್ರಿಲ್ ಮತ್ತು ಮೇ ತಿಂಗಳ ಹೆಚ್ಚುವರಿ ಬಿಲ್​ ಮೊತ್ತವನ್ನು ಬಡ್ಡಿ ವಿಧಿಸದೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ವಸೂಲಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಆರ್ಥಿಕ ವರ್ಷ 2022ಕ್ಕೆ ಆದಾಯ ಕೊರತೆಯಿರುವುದರಿಂದ ಈ ಬಾರಿ ಪ್ರತಿ ಯುನಿಟ್​​ಗೆ 83 ಪೈಸೆಯಿಂದ 168 ಪೈಸೆವರೆಗೂ ದರ ಏರಿಕೆ ಕೋರಿ ವಿವಿಧ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿದ್ದವು. ಅಂದರೆ ಸರಾಸರಿ 135 ಪೈಸೆಯಷ್ಟು ಹೆಚ್ಚಳಕ್ಕೆ(ಸರಾಸರಿ ಶೇ. 17.31 ಏರಿಕೆಗೆ) ಈ ವಿದ್ಯುತ್ ಸರಬರಾಜು ಕಂಪನಿಗಳು ಬೇಡಿಕೆ ಇಟ್ಟಿದ್ದವು. ಆದರೆ ಆಯೋಗವು ಅದನ್ನು ಶೇ. 3.84 ರಷ್ಟಕ್ಕೆ ಮಾತ್ರ ಮಿತಗೊಳಿಸಿದೆ. ತನ್ಮೂಲಕ ಪ್ರತಿ ಯುನಿಟ್​ಗೆ 30 ಪೈಸೆ ಏರಿಸಿ ಆದೇಶ ಹೊರಡಿಸಿದೆ ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಎಸ್​​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ: ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ
ಒಳ್ಳೆಯ ಅಂಶವೆಂದರೆ ಕಡಿಮೆ ಮತ್ತು ಮಧ್ಯಮ ವರ್ಗದ ಗೃಹ ಬಳಕೆ ಗ್ರಾಹಕರ ವಿದ್ಯುಚ್ಛಕ್ತಿ ಬಳಕೆಯನ್ನು ಉತ್ತೇಜಿಸಲು ಗೃಹ ಬಳಕೆಯ ಮೊದಲ ಸ್ಲಾಟ್​ಅನ್ನು 30 ಯೂನಿಟ್​​ಗಳಿಂದ 50 ಯೂನಿಟ್​​ಗಳಿಗೆ ಏರಿಸಲಾಗಿದೆ. ಅಂದರೆ ಆರಂಭಿಕ ದರವು ಈ ಮುನ್ನ 0-30 ಯೂನಿಟ್​​ಗಳವರೆಗೆ ಅನ್ವಯವಾಗುತ್ತಿದ್ದುದು ಈಗ 0-50 ಯೂನಿಟ್​​ಗಳವರೆಗೆ ಅನ್ವಯಿಸಲಿದೆ.
ಕರೊನಾ ನಿಯಮ ಉಲ್ಲಂಘಿಸಿ ಬರ್ತ್​ಡೇ! ಪೊಲೀಸ್ ಅಧಿಕಾರಿ ಸಸ್ಪೆಂಡ್​!

ಲಾಕ್​ಡೌನ್ ವೇಳೆ ಸೀಜ್ ಆದ ವಾಹನಗಳ ರಿಲೀಸ್ ಪ್ರಕ್ರಿಯೆ ಶುರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
