ಬೆಂಗಳೂರು:ಕರೆಂಟ್ ದರ ಏರಿಕೆ ಬೆನ್ನಲ್ಲೇ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ತಾಗಿದ್ದು ಸೋಲಾರ್​ ಬಳಸುತ್ತಿದ್ದವರ ಸಬ್ಸಿಡಿಯನ್ನು ರದ್ದು ಮಾಡಲಾಗಿದೆ. ಈ ಕುರಿತಾಗಿ KERC ಹೊಸ ಆದೇಶ ಹೊರಡಿಸಿದೆ.
ಸೋಲಾರ್ ಸಬ್ಸಿಡಿಗೆ KERC ಬ್ರೇಕ್ ಹಾಕಿದ್ದು ಸಬ್ಸಿಡಿಯ ಲಾಭ ಪಡೆಯುತ್ತಿದ್ದ ಜನರಿಗೆ ಬಿಸಿ ಮುಟ್ಟಿದೆ. KERC, 2007ರಿಂದ ಸೋಲಾರ್ ಬಳಕೆಗೆ ಉತ್ತೇಜನ ನೀಡಲು ಸಬ್ಸಿಡಿ ನೀಡುತ್ತಿತ್ತು. ನಿಗಮ ಪ್ರತೀ ಯೂನಿಟ್​ಗೆ 50 ಪೈಸೆಯಂತೆ ಸಬ್ಸಿಡಿ ನೀಡುತ್ತಿತ್ತು.

ಆದರೆ ಈ ಸಬ್ಸಿಡಿಯನ್ನು 2024ರ ದರ ಪಟ್ಟಿಯಲ್ಲಿ KERC ಕೈ ಬಿಟ್ಟಿದೆ. ಸೋಲಾರ್ ಸಬ್ಸಿಡಿ ಮಾತ್ರವಲ್ಲ, ಜತೆಗೆ ಬ್ಯಾಂಕ್ ಮೂಲಕ ಆಟೋಮೆಟಿಕ್ ಬಿಲ್ ಪಾವತಿ ಮಾಡುವಾಗ ಇದ್ದ 0.25% ರಿಯಾಯಿತಿ ಕೂಡ ರದ್ದಾಗಿದೆ.
ಎಸ್ಕಾಂ, ಸೋಲಾರ್ ಬಳಕೆದಾರರಿಗೆ ಗರಿಷ್ಠ 50 ರೂ.ವರೆಗೆ ಸಬ್ಸಿಡಿ ನೀಡುತ್ತಿತ್ತು. ಆದರೆ ಇದೀಗ ಎಸ್ಕಾಂ, “600 ಫೀಟ್ ಮೌಲ್ಡ್ ಮನೆ ಕಟ್ಟಿಸಿಕೊಳ್ಳುವ ಮಾಲೀಕರೆಲ್ಲರೂ ಸೋಲಾರ್ ಬಳಸುತ್ತಿದ್ದಾರೆ. ಹೀಗಾಗಿ ಸಬ್ಸಿಡಿ ನೀಡುವ ಅಗತ್ಯವಿಲ್ಲ. ಹೀಗಾಗಿ ಹೊಸ ದರ ಪಟ್ಟಿಯಿಂದ ಸಬ್ಸಿಡಿಯನ್ನು ಕೈಬಿಡಲಾಗಿದೆ” ಎನ್ನುತ್ತಿದೆ. ಒಟ್ಟಿನಲ್ಲಿ ಉಚಿತ ಸಿಗದೆ ಬಿಲ್ ಕಟ್ಟುವ ಜನರ ಜೇಬಿಗೆ ದೊಡ್ಡ ಕತ್ತರಿಯೇ ಬಿದ್ದಿದೆ ಎನ್ನಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 7 =
Remember me
