ಬೆಂಗಳೂರು:ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸಿರುವ ಹೊತ್ತಿನಲ್ಲೇ, ರಾಜ್ಯದ ಜನರಿಗೆ ವಿದ್ಯುತ್​ ನಿಯಂತ್ರಣ ಆಯೋಗ (KERC) ಹಿಂದಿನ ವರ್ಷಗಳಿಗಿಂತ ಅತಿ ಕಡಿಮೆ ದರ ಏರಿಕೆ ಮಾಡಿದೆ. ಸರಾಸರಿ ವಿದ್ಯುತ್ ದರವನ್ನು ಯೂನಿಟ್ ಗೆ ಕೇವಲ 35 ಪೈಸೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ನಗರದಲ್ಲಿ ಸೋಮವಾರ ಕೆಇಆರ್​​ಸಿ ಆಯೋಗದ ನಿಯೋಜಿತ ಅಧ್ಯಕ್ಷ ಹಾಗೂ ಸದಸ್ಯರಾದ ಎಚ್.ಎನ್.ಮಂಜುನಾಥ್, 2022-23ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಪ್ರಕಟಿಸಿ, ಅದರಂತೆ ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರವನ್ನು ಸರಾಸರಿ 35 ಪೈಸೆ ಏರಿಕೆ (ಶೇ.4.33) ಮಾಡಿರುವುದನ್ನು ಪ್ರಕಟಿಸಿದ್ದಾರೆ.
ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ಅಥವಾ ಅದರ ನಂತರ ಮೊದಲ ಮೀಟರ್ ಓದುವ ದಿನಾಂಕದಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್​​ಸಿ) ತಿಳಿಸಿದೆ.
ರಾಜ್ಯದಲ್ಲಿರುವ ಐದು ಎಸ್ಕಾಂಗಳು 11,320 ಕೋಟಿ ರೂ.ಗಳ ಕಂದಾಯ ಕೊರತೆಗೆ ಪ್ರತಿ ಯೂನಿಟ್ ಗೆ ಸರಾಸರಿ 1.85 ಪೈಸೆ ಅಂದರೆ ಶೇ.23.83 ರಷ್ಟು ಹೆಚ್ಚಳ ಮಾಡುವಂತೆ ಕೋರಿದ್ದವು. ಈ ಬಗ್ಗೆ ಸವಿಸ್ತರವಾಗಿ ವಿಚಾರಣೆ ಮಾಡಿದ ಕೆಇಆರ್ ಸಿ ಆಯೋಗ, ಆರ್ಥಿಕ ವರ್ಷ 2022-23ಕ್ಕೆ ಅನ್ವಯವಾಗುವಂತೆ ಈ ಪರಿಷ್ಕೃತ ದರವನ್ನು ಜಾರಿ ಮಾಡಿದೆ.
ಪಾರ್ಕ್​ನಲ್ಲಿ ವಾಕಿಂಗ್ ಮಾಡೋ ಮಹಿಳೆಯರೇ ಎಚ್ಚರ.. ಇಲ್ದಿದ್ರೆ ನಿಮಗೂ ಇದೇ ಗತಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 16 =
Remember me
