ಹಾಸನ:ಕಾಡಾನೆ ಕಾರ್ಯಾಚರಣೆ ವೇಳೆ ಅರ್ಜುನನ್ನು ಕೊಲೆಗೈದ ಆನೆಯನ್ನು ನಾವು ಹಿಡಿದು ಜನರ ಮುಂದೆ ತಂದು ನಿಲ್ಲಿಸುತ್ತೇವೆ ಎಂದು ಮಾವುತರು ಶಪಥ ಮಾಡಿದ್ದರು. ಏತನ್ಮಧ್ಯೆ ಇದೀಗ ಕಾಡಾನೆ ದಾಳಿ ಸಂತ್ರಸ್ತರ ಹೋರಾಟ ಸಮಿತಿಯ ಯಡಹಳ್ಳಿ ಆರ್ ಮಂಜುನಾಥ್ ಅವರ ಮನೆಯ ಸಮೀಪವೇ ಅರ್ಜುನನ್ನು ಕೊಲೆಗೈದ ಕಾಡಾನೆ ಕಾಣಿಸಿಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಆರ್ ಮಂಜುನಾಥ್, ವಿಶೇಷವಾಗಿ ನಮಗೂ ಕಾಡಾನೆಗಳಿಗೂ ಸಂಬಂಧವಿದೆ. ಆನೆ ದೈತ್ಯ ಸಸ್ತನಿ. ಅದು ಬದುಕಬೇಕು. ಆನೆಗಳು ಕಾಡಿನಲ್ಲಿ ಬದುಕಬೇಕು, ಮನುಷ್ಯರು ನಾಡಿನಲ್ಲಿ ಬದುಕಬೇಕು ಎಂಬುದೇ ಸಮಿತಿಯ ಆಶಯ.  ನಾವು ಇನ್ನು ಅರ್ಜುನನ ಸಾವಿನಿಂದ ಹೊರಬಂದಿಲ್ಲ. ನಮಗೂ ದುಃಖ ಆಗುತ್ತಿದೆ. ಆದರೆ ಇದೀಗ ಈ ಕಾಡಾನೆ ಕಾಣಿಸಿಕೊಂಡು ಎಲ್ಲರ ಮನೆ ಬಾಗಿಲ ಬಳಿ ತೆರಳುತ್ತಿದೆ. ಹಾಗೆಯೇ ನಮ್ಮ ಮನೆಯ ಬಾಗಿಲ ಬಳಿಯೂ ಬಂದಿದೆ. ವಿಶೇಷ ಅನಿಸಿದೆ. ಬೆಳಗ್ಗೆಯಿಂದ ನಾವು ಅದನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದೇವೆ. ಅರಣ್ಯ ಇಲಾಖೆಯವರು ಕಾಡಾನೆಗಳಿಗೆ ಸೂಕ್ತ ಸ್ಥಳ ಒದಗಿಸಿ, ಅವುಗಳು ಕೂಡ ಬದುಕಬೇಕು ಎಂದು ನಾವು ಕೋರುತ್ತೇವೆ ಎಂದು ಮಂಜುನಾಥ್ ಅವರು ಮನವಿ ಮಾಡಿದ್ದಾರೆ.

ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಅಂಬಾರಿಯನ್ನು 8 ಬಾರಿ ಹೊತ್ತು ನಿವೃತ್ತಿ ಹೊಂದಿದ್ದ ಅರ್ಜುನ, ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿತು. ಕಾಡಾನೆ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಅರ್ಜುನ ಆನೆಯ ಅಂತ್ಯಕ್ರಿಯೆ ನೆರವೇರಿಸಿದ ನಂತರ, ಮಾವುತರು ಕಾಡಾನೆಯನ್ನು ಸೆರೆ ಹಿಡಿದು ತಂದೇ ತರುತ್ತೇವೆ. ಅರಣ್ಯಾಧಿಕಾರಿಗಳೊಂದಿಗೆ ಕಾರ್ಯಾಚರಣೆಗೆ ಹೋಗುತ್ತೇವೆ ಎಂದು ಶಪಥ ಮಾಡಿದ್ದರು. ಅರ್ಜುನನ್ನು ಕೊಂದ ಕಾಡಾನೆಯನ್ನು ಜನರ ಮುಂದೆ ನೆರೆಹಿಡಿದು ತಂದೇ ತರ್ತೇವೆ ಎಂದು ಹಿರಿಯ ಮಾವುತ ಗುಂಡಣ್ಣ ಹೇಳಿದ್ದರು.
ಅಗಲಿದ ‘ಅರ್ಜುನ’ ಸಾವಿನ ಬಗ್ಗೆ ತನಿಖೆ ಪ್ರಾರಂಭಿಸಲು ಸೂಚನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − one =
Remember me
