ಬೆಂಗಳೂರು: ರಾಜ್ಯದಲ್ಲಿ ಕಾಡಾನೆ ದಾಳಿಗೆ ಕಳೆದ ಇಪ್ಪತ್ತನಾಲ್ಕು ಗಂಟೆಯಲ್ಲಿ ಇಬ್ಬರು ಬಲಿಯಾಗಿದ್ದು, ಸ್ಥಳೀಯ ಜನತೆ ಆತಂಕದಲ್ಲಿದ್ದಾರೆ.
ಕಾರ್ಮಿಕ ಬಲಿ:ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಬಿಬಿಟಿಸಿ ಬೀಟಿಕಾಡು ತೋಟದಲ್ಲಿ ಕಾರ್ಮಿಕ ಸಂದೀಪ್(22)ನನ್ನು ತುಳಿದು ಕಾಡಾನೆ ಕೊಂದಿದೆ. ಕಾಫಿ ಕಣದಲ್ಲಿ ಕಾವಲುಗಾರನಾಗಿದ್ದ ಸಂದೀಪ್, ನಿನ್ನೆ ನಿದ್ರೆಮಂಪರಿನಲ್ಲಿದ್ದ ವೇಳೆ ಹಠಾತ್ತನೆ ಬಂದ ಆನೆ ದಾಳಿ ಮಾಡಿದೆ. ಆನೆ ತುಳಿತಕ್ಕೆ ಕಾರ್ಮಿಕನ ತಲೆ ಛಿದ್ರಗೊಂಡು ಸ್ಥಳದಲ್ಲೇ ಅಸುನೀಗಿದ್ದಾನೆ. ಜೊತೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ರಾಜು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇನ್ನು ಸಕಲೇಶಪಪುರದಲ್ಲೂ ಕಾಡಾನೆ ಹಾವಳಿ ಮುಂದುವರಿದಿದ್ದು, ನಿನ್ನೆ ರಾತ್ರಿ ಇಲ್ಲೂ ಒಬ್ಬ ಬಲಿಯಾಗಿದ್ದಾನೆ.ಇದನ್ನೂ ಓದಿರಿಮಧುಬಂಗಾರಪ್ಪ, ಜಿಟಿಡಿ, ಶಶಿಭೂಷಣ್​, ಅಸ್ನೋಟಿಕರ್​ ಜೆಡಿಎಸ್​ ಬಿಡ್ತಾರಾ? ಎಚ್​ಡಿಡಿ ಸ್ಫೋಟಕ ಹೇಳಿಕೆ
ಲಾರಿ ಚಾಲಕ ಸಾವು:ಹಾಸನ ಜಿಲ್ಲೆ ಸಕಲೇಶಪುರ ‌ತಾಲೂಕಿನ ಮಾರನಹಳ್ಳಿ‌ ಬಳಿಯ ರಾಷ್ಟ್ರೀಯ ಹೆದ್ದಾರಿ 75 ಕೆಂಪುಹಳ್ಳ ಬಳಿ ನಿನ್ನೆ ನೆನ್ನೆ ಸಂಜೆ 4 ಗಂಟೆಯಿಂದ ಓಡಾಡುತ್ತಿದ್ದ ಕಾಡಾನೆ ಲಾರಿ ಚಾಲಕನ ಪ್ರಾಣ ತೆಗೆದಿದೆ. ರಾತ್ರಿ 7 ಗಂಟೆ ಸುಮಾರಿನಲ್ಲಿ ಉತ್ತರ ಭಾರತ ಮೂಲದ ಲಾರಿ ಚಾಲಕನ ಲಾರಿ ನಿಲ್ಲಿಸಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಆನೆ ದಾಳಿ ಮಾಡಿದೆ.
Video| ದೇವರ ಹೆಸರಲ್ಲಿ ಬೆತ್ತಲೆ ಸೇವೆ! ನಡುರಸ್ತೆಯಲ್ಲಿ ಬೆತ್ತಲೆ ಮಹಿಳೆಯ ಮೆರವಣಿಗೆ…

ಖಾಸಗಿ ಶಾಲೆ ಮಾಲೀಕ ಆತ್ಮಹತ್ಯೆ! ಸಾವಿಗೂ ಮುನ್ನ ಬರೆದ ಡೆತ್​ನೋಟ್​ನಲ್ಲಿದೆ ನೋವು

ಅವನು ಬಂದಾಗ ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ… ಎಚ್​ಡಿಕೆ ವಿರುದ್ಧ ನಾಲಗೆ ಹರಿಬಿಟ್ಟ ಯೋಗೇಶ್ವರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
